Advertisement

ಸಖತ್‌ ಪಾತ್ರಕ್ಕಾಗಿ ನಿಶ್ವಿ‌ಕಾ ವರ್ಕೌಟ್

02:00 PM Mar 19, 2021 | Team Udayavani |

ವರ್ಷದ ಆರಂಭದಲ್ಲಿಯೇ “ರಾಮಾರ್ಜುನ’ ಚಿತ್ರದ ಮೂಲಕ ಸಿನಿಪ್ರಿಯರ ಮುಂದೆ ಬಂದಿದ್ದ ನಟಿ ನಿಶ್ವಿ‌ಕಾ ನಾಯ್ಡು, ಈ ವರ್ಷದ ಕೊನೆಯೊಳಗೆ ಇನ್ನಷ್ಟು ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದ್ದಾರೆ.

Advertisement

ಸದ್ಯ ಶರಣ್‌ ಅಭಿನಯದ “ಗುರುಶಿಷ್ಯರು’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ನಿಶ್ವಿ‌ಕಾ ನಾಯ್ಡು, ಅದಾದ ಬಳಿಕ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ಅಭಿನಯಿಸುತ್ತಿರುವ “ಸಖತ್‌’ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡೂ ಚಿತ್ರಗಳಲ್ಲೂ ನಿಶ್ವಿ‌ಕಾಗೆ ಎರಡು ವಿಭಿನ್ನ ಪಾತ್ರಗಳಿದ್ದು, ಈ ಪಾತ್ರಗಳಿಗಾಗಿ ನಿಶ್ವಿ‌ಕಾ ಈಗಾ ಗಲೇ ಒಂದಷ್ಟು ಪೂರ್ವತಯಾರಿ ಕೂಡ ಶುರು ಮಾಡಿದ್ದಾರೆ.

ತಮ್ಮ ಮುಂದಿನ ಎರಡು ಚಿತ್ರಗಳ ಪಾತ್ರಗಳಿಗಾಗಿ ಸ್ಲಿಮ್‌ ಆಗುತ್ತಿರುವ ನಿಶಿಕಾ ನಾಯ್ಡು, ಕೆಲವು ದಿನಗಳಿಂದ ಡಯೆಟ್‌, ವರ್ಕೌಟ್‌ ಮಾಡಿ ತೂಕ ಇಳಿಸಿಕೊಂಡಿದ್ದಾರೆ. ಮೊದಲಿಗಿಂತ ಈಗ ಮತ್ತಷ್ಟು ಸಪೂರವಾಗಿ ಮಿಂಚುತ್ತಿರುವ ನಿಶ್ವಿ‌ಕಾ ತಮ್ಮ ಪಾತ್ರಕ್ಕೆ ತಕ್ಕಂತೆ ತಯಾರಾಗಿದ್ದಾರೆ. ಇನ್ನು “ಸಖತ್‌’ ಚಿತ್ರದಲ್ಲಿ ನಕ್ಷತ್ರ ಎಂಬ ಪಾತ್ರ ನಿರ್ವಹಿಸಲಿರುವ ನಿಶ್ವಿ‌ಕಾ, ಟೀಚರ್‌ ಆಗಿ ಪಾಠ ಮಾಡಲಿದ್ದಾರಂತೆ. ಹಾಗೆಯೇ ಮೋಟಿವೆಷನಲ್‌ ಸ್ಪೀಕರ್‌ ಆಗಿಯೂ ಅಭಿನಯಿಸಲಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next