ಚಿತ್ರನಟ ಉಪೇಂದ್ರ ಅವರು ಕೋವಿಡ್ ಸೋಂಕಿನಿಂದ ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯದ ರೈತರ ನೆರವಿಗೆ ಧಾವಿಸಿದ್ದಾರೆ. ರೈತರಿಂದ ನೇರವಾಗಿ ಟೊಮೇಟೋ ಖರೀದಿಸಿ ಉಚಿತವಾಗಿ ವಿತರಿಸಿದ್ದಾರೆ.
ಈ ಬಗ್ಗೆ ಟ್ವಿಟರಿನಲ್ಲಿ ಬರೆದುಕೊಂಡಿರುವ ‘ ನಿಮ್ಮೆಲ್ಲರರೈತರ ಗಮನಕ್ಕೆ, ನಿಮ್ಮೆಲ್ಲರ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು. ಬೆಳೆದ ಬೆಳೆ ವ್ಯಾಪಾರವಾಗದೇ ನಾಶವಾಗುವ ಬೆಳೆಯನ್ನು ನಾವು ಕೊಂಡು ಅದನ್ನು ಸಂಕಷ್ಟದಲ್ಲಿರುವ ಜನರಿಗೆ ಉಚಿತವಾಗಿ ಹಂಚುತ್ತಿದ್ದೇವೆ. ಇದು ವ್ಯಾಪಾರ ಎಂದು ದಯವಿಟ್ಟು ತಿಳಿಯಬೇಡಿ. ಅಂತಹ ಸಂಕಷ್ಟದಲ್ಲಿರುವ ರೈತರು ಮಾತ್ರ ಈ ಮೊಬೈಲ್ ಗೆ ಸಂಪರ್ಕಿಸಿ. +91 98457 63396 ಎಂದು ಹೇಳಿಕೊಂಡಿದ್ದಾರೆ.
ಇನ್ನು ಉಪೇಂದ್ರ ಅವರು ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಬೆಳೆದ ಬೆಳೆಯನ್ನು ಸೂಕ್ತ ಸಮಯಕ್ಕೆ ಮಾರಾಟ ಮಾಡಲು ಆಗದೆ ಕಂಗಾಲಾಗಿರುವ ಅನ್ನದಾತರಿಗೆ ಅನುಕೂಲ ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸುತ್ತಿರುವ ಉಪೇಂದ್ರ, ರೈತರಿಂದ ನೇರವಾಗಿ ಬೆಳೆ ಖರೀದಿಸಿ ಅದನ್ನು ಜನಸಾಮಾನ್ಯರಿಗೆ ದಿನಸಿ ಕಟ್ ಅಥವಾ ರೇಷನ್ ಕಿಟ್‌ನಲ್ಲಿ ಕೊಡುತ್ತಿದ್ದಾರೆ.
ಟ್ವಿಟರಿನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅವರು, ನೀವು ಬೆಳೆದ ಬೆಳೆಗಳ ಬಗ್ಗೆ ಮಾಹಿತಿ ಒದಗಿಸಿ, ಅದನ್ನು ನಾವು ಖರೀದಿಸುತ್ತೇವೆ ಎಂದು ಕರೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಉಪೇಂದ್ರ ”ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ…. ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ. ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ( 24 ಮೇ 2021 ರ ಒಳಗೆ ) Mbl no 9845763396” ಎಂದು ಕೇಳಿಕೊಂಡಿದ್ದಾರೆ.