Advertisement

ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ ಪ್ರೇಮಲೋಕದ ದೊರೆ  

01:32 PM May 30, 2021 | Team Udayavani |

ಪ್ರೇಮಲೋಕದ ದೊರೆ ವಿ. ರವಿಚಂದ್ರನ್ ಅವರಿಗೆ ಇಂದು ( ಮೇ.30) ಹುಟ್ಟು ಹಬ್ಬದ ಸಂಭ್ರಮ. 60 ನೇ ವಸಂತಕ್ಕೆ ಕಾಲಿಡುತ್ತಿರುವ ಚಂದನವನದ ಈ ಕಲಾವಿದನಿಗೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ.

Advertisement

ಬಣ್ಣದ ಲೋಕವನ್ನೇ ಉಸಿರಾಗಿಸಿಕೊಂಡಿರುವ ಕರುನಾಡಿನ ಈ ಮಲ್ಲ, ತಮ್ಮ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಗೆ ಸ್ಪೆಷೆಲ್ ಉಡುಗೊರೆಯೊಂದನ್ನು ನೀಡಿದ್ದಾರೆ. ತಮ್ಮ ಮುಂದಿನ ಕನಸುಗಳನ್ನು ( ಸಿನಿಮಾ ಪ್ರಾಜೆಕ್ಟ್ ) ಹಂಚಿಕೊಂಡಿದ್ದಾರೆ.

ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ  3 ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ ರವಿಮಾಮಾ. ವಿಭಿನ್ನ ಶೈಲಿಯ ಮೂಲಕವೇ ಖ್ಯಾತಿಗಳಿಸಿರುವ ರವಿಚಂದ್ರನ್ 3 ಸಿನಿಮಾಗಳನ್ನು ವಿಭಿನ್ನವಾಗಿಯೇ ಅನೌನ್ಸ್ ಮಾಡಿದ್ದಾರೆ. ಕಲರ್ ಫುಲ್ ವಿಡಿಯೋ ಮೂಲಕ ಮೂರು ಸಿನಿಮಾಗಳ ಟೈಟಲ್ ಬಹಿರಂಗ ಪಡಿಸಿದ್ದಾರೆ.

ರವಿಚಂದ್ರನ್ ಸಿನಿಮಾ ಅಂದ್ಮೇಲೆ ಅಭಿಮಾನಿಗಳಲ್ಲಿ ವಿಶೇಷ ಕುತೂಹಲ ಇದ್ದೇ ಇರುತ್ತದೆ. ಸದ್ಯ ಘೋಷಣೆ ಮಾಡಿರುವ ಸಿನಿಮಾಗಳ ಮೇಲೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಅಂದಹಾಗೆ ಹೊಸ ಚಿತ್ರಗಳಿಗೆ ಗಾಡ್, 60 ಮತ್ತು ಬ್ಯಾಡ್ ಬಾಯ್ ಚಿತ್ರಗಳಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ವಿಡಿಯೋದಲ್ಲಿ ಸುಳಿವು ನೀಡಿದ್ದಾರೆ. ಸದ್ಯ ರವಿಚಂದ್ರನ್ ರವಿ ಬೋಪಣ್ಣ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಕನ್ನಡಿಗ ಸಿನಿಮಾ ಕೂಡ ಮಾಡಿ ಮುಗಿಸಿದ್ದಾರೆ.

Advertisement

ಕನ್ನಡಿಗ ನಿರ್ದೇಶಕ ಬಿ.ಎಂ ಗಿರಿರಾಜ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಸದ್ಯ ಸಿನಿಮಾ ಎಲ್ಲಾ ಕೆಲಸವನ್ನು ಮುಗಿಸಿ ರಿಲೀಸ್ ಗೆ ರೆಡಿಯಾಗಿದೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಕನ್ನಡಿಗ ಟೀಸರ್ ಬಿಡುಗಡೆಯಾಗುತ್ತಿದೆ. ಇನ್ನು ಬಹುನಿರೀಕ್ಷೆಯ ದೃಶ್ಯಂ-2ನಲ್ಲಿ ರವಿಚಂದ್ರನ್ ನಟಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next