Advertisement

ಕರಾವಳಿ ಕಲೆಗೆ ಮೆರುಗು ನೀಡಿದ ನಟ ರಮೇಶ್‌ ಅರವಿಂದ್‌

12:32 PM Oct 13, 2022 | Team Udayavani |

ಉಡುಪಿ: ಮೊತ್ತ ಮೊದಲ ಬಾರಿಗೆ ಯಕ್ಷಗಾನದ ವೇಷ ತೊಟ್ಟ ನನ್ನಲ್ಲೀಗ ದಿವ್ಯತೆಯ ಭಾವ ಬೆಳೆದಿದೆ. ಎಂಟಡಿ ಎತ್ತರ, ನೂರೈವತ್ತು ಕೆ.ಜಿ. ಬೆಳೆದವನಂತೆ ಅನಿಸುತ್ತಿದೆ. ನಾನಿವತ್ತು ಬಹಳವೇ ಶಕ್ತಿ ಶಾಲಿ, ಎದುರಿಗೇನಾದರೂ ರಾಕ್ಷಸರು ಬಂದರೆ ಹೊಡೆದುರುಳಿಸಿ ಬಿಡುತ್ತೇನೆ ಅನ್ನುವಷ್ಟು ಆತ್ಮ ವಿಶ್ವಾಸ ಬೆಳೆಯುತ್ತಿದೆ ಎಂದು ಚಿತ್ರ ನಟ ಡಾ| ರಮೇಶ್‌ ಅರವಿಂದ್‌ ಯಕ್ಷಗಾನ ವೇಷ ಧರಿಸಿ ಹೇಳಿದರು.

Advertisement

ರಮೇಶ್‌ ಅರವಿಂದ್‌ ಅವರು ಯಕ್ಷಗಾನದ ಬಣ್ಣ ಹಚ್ಚಿದ್ದು ಕೆಮ್ಮಣ್ಣು ಹೋಮ್‌ ಸ್ಟೇ ಒಂದರಲ್ಲಿ. ಆದರೆ ಇದು ಸಿನೆಮಾಕ್ಕಾಗಿ ಅಲ್ಲ. ಫೋಟೋ ಶೂಟ್‌ಗಾಗಿ! ಪ್ರಶಸ್ತಿ ಪಡೆಯಲು ಹೋಗಿದ್ದಾಗ ಕೋಟ ಶಿವರಾಮ ಕಾರಂತ ಥೀಂ ಪಾರ್ಕಿನಲ್ಲಿ ಕಾರಂತರು ಸ್ವತಃ ಯಕ್ಷಗಾನ ವೇಷ ಹಾಕಿದ್ದ ಚಿತ್ರ ಕಂಡು ರೋಮಾಂಚಿತನಾದೆ. ಅವರೊಂದು ಬತ್ತದ ಕುತೂಹಲ. ಯಕ್ಷಗಾನ ಕಲಾವಿದರಿಗೆ ಪ್ರತ್ಯೇಕ ಮೇಕಪ್‌ ಕಲಾವಿದರು ಇರುವುದಿಲ್ಲ. ಸ್ವತಃ ತಾವೇ ಬಣ್ಣ ಹಚ್ಚಿ, ಬಟ್ಟೆ ತೊಟ್ಟು, ಹೆಜ್ಜೆ ಕಟ್ಟುವ ರೀತಿಗೆ ಬೆರಗಾದೆ ಎಂದರು.

ಮಂಗಳೂರಿನಿಂದ ಕಾರವಾರದವರೆಗಿನ ಕರಾವಳಿಯಾದ್ಯಂತ ಅನೇಕ ಸಿನೆಮಾಗಳನ್ನು ಮಾಡಿದ್ದೇನೆ. ಆ ಹೊತ್ತಿಗೆಲ್ಲ, ಯಕ್ಷಗಾನವನ್ನು ಗಮನಿಸುತ್ತಿದ್ದೆ. ಆರೇಳು ಗಂಟೆ ಏರು ಧ್ವನಿಯಲ್ಲಿ ಹಾಡುವ ಭಾಗವತರ ಶಕ್ತಿಯ ಬಗ್ಗೆ ಆಶ್ಚರ್ಯವಾಗುತ್ತದೆ. ಕಲಾವಿದರನ್ನು ಕಂಡು ನಾನೂ ಒಮ್ಮೆ ಯಕ್ಷಗಾನದ ಬಣ್ಣ ಹಚ್ಚಬೇಕೆಂಬ ಆಸೆ ಇತ್ತು. ಈಗ ಅದು ನನಸಾಗಿದೆ. ಛಾಯಾಚಿತ್ರಗ್ರಾಹಕ ಫೋಕಸ್‌ ರಾಘು ಅವರ ಚಿತ್ರಗಳನ್ನು ನೋಡಿ ತನ್ನ ಫೋಟೋ ಶೂಟ್‌ ಮಾಡುವಂತೆ ತಿಳಿಸಿದ್ದರು. ಶೈಲೇಶ್‌ ತೀರ್ಥಹಳ್ಳಿ ಯಕ್ಷಗಾನದ ವೇಷ ತೊಡಿಸಿದ್ದರು. ಮನೋವೈದ್ಯ, ಲೇಖಕ ಡಾ| ವಿರೂಪಾಕ್ಷ ದೇವರುಮನೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next