Advertisement

ಕಲೆಯಲ್ಲೇ ಲೀನವಾದ ಕಲಾವಿದ!

12:05 AM Oct 18, 2021 | Team Udayavani |

ಲಕ್ನೋ: ಗ್ರಾಮದಲ್ಲಿ ನಡೆಯುತ್ತಿದ್ದ ರಾಮಾಯಣ ನಾಟಕದಲ್ಲಿ ದಶರಥನ ಪಾತ್ರ ವಹಿಸಿದ್ದ ರಾಜೇಂದ್ರ ಕಶ್ಯಪ್‌ ಎಂಬ ನಟ, ಶ್ರೀರಾಮನು ವನವಾಸಕ್ಕೆ ತೆರಳುವ ದೃಶ್ಯದಲ್ಲಿ ನಿಜವಾಗಿಯೂ ಭಾವುಕನಾಗಿ ನಟಿಸುವಾಗ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ ಎಂಬ ಪಟ್ಟಣದಲ್ಲಿ ನಡೆದಿದೆ.

Advertisement

ಮಾಜಿ ಗ್ರಾ.ಪಂ. ಅಧ್ಯಕ್ಷರೂ ಆಗಿದ್ದ ಕಶ್ಯಪ್‌, ನಾಟಕದ ಆರಂಭ ದಿಂದಲೂ ಪಾತ್ರದಲ್ಲಿ ತನ್ಮಯರಾಗಿ ಅಭಿನಯಿಸಿದ್ದರು. ಶ್ರೀರಾಮನನ್ನು ಬೀಳ್ಕೊ ಡುವ ದೃಶ್ಯದಲ್ಲಿ ಕಣ್ಣೀರು ಹಾಕುತ್ತಾ ನೆಲಕ್ಕೊರಗಿದ್ದರು.

ಇವರ ಅಭಿನಯಕ್ಕೆ ಮಾರು ಹೋದ ಜನ, ಎದ್ದು ನಿಂತು ಚಪ್ಪಾಳೆ, ಸಿಳ್ಳೆ ಹಾಕಿದರು. ಚಪ್ಪಾಳೆ ನಿಂತ ಅನಂತರವೂ ಕಶ್ಯಪ್‌ ಏಳಲಿಲ್ಲ.

ತತ್‌ಕ್ಷಣವೇ ಎಚ್ಚೆತ್ತ ಎಲ್ಲರೂ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರಾದರೂ, ಕಶ್ಯಪ್‌ ಇಹಲೋಕ ತ್ಯಜಿಸಿದ್ದರು.

ಇದನ್ನೂ ಓದಿ:ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next