Advertisement

ಹೊಸ ಚಿತ್ರದಲ್ಲಿ ನಕುಲ್‌

01:25 PM May 11, 2022 | Team Udayavani |

ಈ ಮೊದಲು ಕನ್ನಡ ಚಿತ್ರರಂಗದಲ್ಲಿ “ಪ್ರೀತಿಯ ರಾಯಭಾರಿ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟದ್ದ ಯುವ ನಟ ನಕುಲ್‌ ನಟಿಸಿರುವ ನೂತನ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಹೊಸ ಚಿತ್ರದ ಶೀರ್ಷಿಕೆ ಸದ್ಯದಲ್ಲೇ ಅನಾವರಣ ಆಗಲಿದೆ.

Advertisement

ಪಿ.ಸಿ ಶೇಖರ್‌ ನಿರ್ದೇಶನದ ಈ ಚಿತ್ರಕ್ಕೆ ಮಾನ್ವಿತಾ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ನಕುಲ್‌ ಈ ಚಿತ್ರದ ಮೇಲೂ ಅಪಾರ ನಿರೀಕ್ಷೆ ಇಟ್ಟಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ.

ಇನ್ನು ಚಿತ್ರಕ್ಕಾಗಿಯೇ ಹೆಚ್‌ ಎಂಟಿ ಬಳಿ ನಿರ್ಮಿಸಲಾಗಿದ್ದ ಸೆಟ್‌ನಲ್ಲಿ ಈ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದಿದೆ. ಪಿ.ಸಿ.ಶೇಖರ್‌ ನಿರ್ದೇಶನದ ಜವಾಬ್ದಾರಿ ಜೊತೆ ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದು, ಮೂರು ಹಾಡುಗಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next