Advertisement

Kichcha Sudeep: ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ನಿರಾಕರಿಸಿದ ನಟ ಸುದೀಪ್

01:46 PM Aug 06, 2024 | Team Udayavani |

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ (Kichcha Sudeep) ರೀಲ್‌ ಲೈಫ್‌ ಹೀರೋ ಆಗುವುದರ ಜೊತೆ ರಿಯಲ್‌ ಲೈಫ್‌ ನಲ್ಲೂ ಹೀರೋ ಆಗಿ ಅನೇಕರಿಗೆ ಮಾದರಿ ಆಗಿದ್ದಾರೆ.

Advertisement

ಸಿನಿಮಾಗಳ ಜೊತೆ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವ ಕಿಚ್ಚ ಸುದೀಪ್‌ ಅವರ ಸಾಧನೆಗೆ ಹತ್ತಾರು ಪ್ರಶಸ್ತಿ ಪುರಸ್ಕಾರಗಳು ಹುಡುಕುತ್ತಾ ಬಂದಿವೆ. ಸುದೀಪ್ ಚಂದನವನದಲ್ಲಿ 40ಕ್ಕೂ ಹೆಚ್ಚಿನ ಸಿನಿಮಾಗಳನ್ನು ಮಾಡಿ ಸಿನಿಮಾರಂಗಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ ಅವರ ಸಾಧನೆಯನ್ನು ಗುರುತಿಸಿ ತುಮಕೂರು ವಿಶ್ವ ವಿದ್ಯಾಲಯ (Tumakur University) ಅವರಿಗೆ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು.

ಇದನ್ನೂ ಓದಿ: SSMB29: ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ಚಿಯಾನ್‌ ವಿಕ್ರಮ್; ನಟ ಹೇಳಿದ್ದೇನು?

ಸುದೀಪ್‌ ಅವರ ಪಿಎ ಮೂಲಕ ಅವರಿಗೆ ಗೌರವ ಡಾಕ್ಟರೇಟ್ (Honorary Doctorate) ನೀಡುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ ಕಿಚ್ಚ ಸುದೀಪ್‌ ಗೌರವ ಡಾಕ್ಟರೇಟ್‌ ಪಡೆಯಲು ನಿರಾಕರಿಸಿದ್ದಾರೆ.   ‘ʼಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಹಿರಿಯರು ಇದ್ದಾರೆ. ಅವರಿಗೆ ಡಾಕ್ಟರೇಟ್ ನೀಡಿʼ’ ಎಂದು ಸುದೀಪ್ ಅವರು ತುಮಕೂರು ವಿವಿಗೆ ಹೇಳಿದ್ದಾರೆ.

Advertisement

ಬುಧವಾರ(ಆ.7 ರಂದು) ಮಕೂರು ವಿಶ್ವ ವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪದವಿ ಸಮಾರಂಭ ನಡೆಯಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೈಗಾರಿಕೋದ್ಯಮಿ ಎಚ್. ಜಿ‌.ಚಂದ್ರಶೇಖರ್, ಜಲಕ್ರೀಡಾ ಸಾಹಸಿಗ ಹಾಗೂ‌ ಸಾಮಾಜಿಕ ಕಾರ್ಯಕರ್ತ ಸಿ. ಎಸ್ ನಾಗಾನಂದನ ಸ್ವಾಮಿ ಮತ್ತು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಅವರಿಗೆ ಡಾಕ್ಟರೇಟ್‌ ಪದವಿಯನ್ನು ಪ್ರಧಾನ ಮಾಡಲಿದ್ದಾರೆ.

ಕಿಚ್ಚ ಸುದೀಪ್‌ ಸದ್ಯ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಅವರ ʼಮ್ಯಾಕ್ಸ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next