Advertisement

Bigg Boss: ಬಿಗ್‌ ಬಾಸ್‌ ಕಾರ್ಯಕ್ರಮ ನಿರೂಪಣೆಯಿಂದ ಹಿಂದೆ ಸರಿದ ಖ್ಯಾತ ನಟ

02:59 PM Aug 07, 2024 | Team Udayavani |

ಚೆನ್ನೈ: ಟಿವಿ ಲೋಕದ ಜನಪ್ರಿಯ ಶೋಗಳಲ್ಲಿ ಬಿಗ್ ಬಾಸ್ (BIGG BOSS) ಕೂಡ ಒಂದು. ನಾನಾ ಭಾಷೆಯಲ್ಲಿ ಬರುವ ಈ‌ ಕಾರ್ಯಕ್ರಮಕ್ಕೆ ಪ್ರತ್ಯೇಕ ವೀಕ್ಷಕರಿದ್ದಾರೆ.

Advertisement

ಬಿಗ್ ಬಾಸ್ ಕಾರ್ಯಕ್ರಮವನ್ನು ಆಯಾ ಭಾಷೆಯಲ್ಲಿ ಖ್ಯಾತ ಕಲಾವಿದರು‌ ನಿರೂಪಣೆ ಮಾಡುತ್ತಾರೆ. ತಮಿಳಿನಲ್ಲಿ ಕಮಲ್ ಹಾಸನ್ (KAMAL HASAN) ಕಳೆದ ಏಳು ಸೀಸನ್ ಗಳಿಂದ ನಿರೂಪಣೆ ಮಾಡುತ್ತಾ ಬಂದಿದ್ದಾರೆ.

8ನೇ ಸೀಸನ್ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವಾಗಲೇ, ಕಮಲ್ ಹಾಸನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ . ಈ ಬಾರಿ ತಾವು ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಈ ಬಾರಿ ತಾವು ಬಿಗ್‌ ಬಾಸ್‌ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಆಗುವುದಿಲ್ಲ ಎಂದು ಅವರು ಹೇಳಿದ್ದು, ವೀಕ್ಷಕರಿಗೆ ಶಾಕ್‌ ಆಗಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕಮಲ್‌ ಹಾಸನ್‌ ಸುದೀರ್ಘ ಪೋಸ್ಟ್‌ ನ್ನು ಹಂಚಿಕೊಂಡಿದ್ದಾರೆ.

Advertisement

ಕಳೆದ 7 ವರ್ಷಗಳಿಂದ  ನಿಮ್ಮ ಮನೆಗಳಲ್ಲಿ ನಿಮ್ಮನ್ನು ತಲುಪುವ ಸೌಭಾಗ್ಯ ನನಗೆ ಸಿಕ್ಕಿದೆ. ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮೆಲ್ಲರ ಬೆಂಬಲವು ಬಿಗ್ ಬಾಸ್ ತಮಿಳನ್ನು ಭಾರತದ ಅತ್ಯುತ್ತಮ ರಿಯಾಲಿಟಿ ಶೋಗಳಲ್ಲಿ ಒಂದನ್ನಾಗಿ ಮಾಡಿದೆ ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮ ನಿರೂಪಣೆಯ ಹಾದಿಯಲ್ಲಿ ನಾನು ಹತ್ತಾರು ಪಾಠಗಳನ್ನುನ ಕಲಿತಿದ್ದೇನೆ. ಕಾರ್ಯಕ್ರಮದಲ್ಲಿ ಇದುವರೆಗೆ ಕಾಣಿಸಿಕೊಂಡ ಎಲ್ಲಾ ಸ್ಪರ್ಧಿಗಳಿಗೆ ನಾನು ಧನ್ಯವಾದವನ್ನು ಹೇಳುತ್ತೇನೆ. ಹಾಗೂ ಈ ಅವಕಾಶವನ್ನು ಕೊಟ್ಟ ವಿಜಯ್‌ ಟಿವಿ, ಸಿಬ್ಬಂದಿಗಳಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಈ ಸೀಸನ್  ದೊಡ್ಡ ಯಶಸ್ಸಾಗಲಿ ಎಂದು ನಾನು ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.

ಕಮಲ್‌ ಹಾಸನ್‌ ಸದ್ಯ  ʼಥಗ್‌ ಲೈಫ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಇದಾದ ಬಳಿಕ ʼಕಲ್ಕಿ-2ʼ  ಹಾಗೂ ‘KH 237’  ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next