Advertisement

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

05:17 PM Mar 28, 2024 | Team Udayavani |

ಮುಂಬಯಿ: ಖ್ಯಾತ ಬಾಲಿವುಡ್ ನಟ ಗೋವಿಂದ ಅವರು ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆ (ಶಿಂಧೆ ಬಣ) ಸೇರ್ಪಡೆ ಯಾಗಿದ್ದಾರೆ.

Advertisement

ಕಾಂಗ್ರೆಸ್ ಸಂಸದರಾಗಿದ್ದ ಗೋವಿಂದ ಅವರು ರಾಜಕೀಯ ಪುನರಾಗಮನ ಮಾಡಿದ್ದು, ಶಿವಸೇನಾ (ಯುಬಿಟಿ) ಅಭ್ಯರ್ಥಿ ಅಮೋಲ್ ಕೀರ್ತಿಕರ್‌ಗೆ ಅವರ ವಿರುದ್ಧ ವಾಯುವ್ಯ ಮುಂಬೈ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

2004 ರ ಲೋಕಸಭಾ ಚುನಾವಣೆಯಲ್ಲಿ ಗೋವಿಂದ ಅವರು ಕಾಂಗ್ರೆಸ್ ಪಕ್ಷದಿಂದ ಮುಂಬೈ ಉತ್ತರ ಲೋಕಸಭೆಗೆ ಸ್ಪರ್ಧಿಸಿ ಬಿಜೆಪಿಯ ಹಿರಿಯ ನಾಯಕ ರಾಮ್ ನಾಯಕ್ ಅವರನ್ನು ಸೋಲಿಸಿದ್ದರು. ನಂತರ ಕಾಂಗ್ರೆಸ್ ಪಕ್ಷ ಮತ್ತು ರಾಜಕೀಯದಿಂದ ದೂರವಾದ ಅವರು 2009 ರ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದರು.

60 ರ ಹರೆಯದ ಗೋವಿಂದ ಅವರು ರಾಜಕೀಯ ಪುನರಾಗಮಕ್ಕೆ ಶಿಂಧೆ ಅವರು ಸ್ವಾಗತ ಕೋರಿದರು. ಇಬ್ಬರೂ ನಾಯಕರು ಸುದ್ದಿಗೋಷ್ಠಿಯಲ್ಲಿ ಪರಸ್ಪರ ಹಾಡಿ ಹೊಗಳಿದರು.

Advertisement

Udayavani is now on Telegram. Click here to join our channel and stay updated with the latest news.

Next