ಚೆನ್ನೈ: ತಮ್ಮ ಆಸ್ತಿ ಕಬಳಿಸಿದ ವ್ಯಕ್ತಿಗೆ ಪಕ್ಷದ ಹಿರಿಯರು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟಿ ಗೌತಮಿ ತಡಿಮಲ್ಲ ಬಿಜೆಪಿ ಜೊತೆಗಿನ 25 ವರ್ಷದ ಒಡನಾಟಕ್ಕೆ ಗುಡ್ ಬೈ ಹೇಳಿದ್ದಾರೆ.
ಇದರೊಂದಿಗೆ ಚುನಾವಣೆಯ ತಯಾರಿಯಲ್ಲಿದ್ದ ಬಿಜೆಪಿ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಟ್ವಿಟರ್ ‘X’ ನಲ್ಲಿ ತನ್ನ ನೋವನ್ನು ತೋಡಿಕೊಂಡ ಗೌತಮಿ, ತಾನು ಕಳೆದ 25 ವರ್ಷಗಳಿಂದ ಬಿಜೆಪಿಯ ಸದಸ್ಯನಾಗಿದ್ದೆ ಮತ್ತು ಪ್ರಾಮಾಣಿಕ ಬದ್ಧತೆಯಿಂದ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
20 ವರ್ಷಗಳ ಹಿಂದೆ ಸಿ ಅಳಗಪ್ಪನ್ ಎಂಬ ವ್ಯಕ್ತಿ ತನ್ನೊಂದಿಗೆ ಸ್ನೇಹ ಬೆಳೆಸಿದ್ದಾಗಿ ಗೌತಮಿ ಹೇಳಿಕೊಂಡಿದ್ದಾಳೆ. “ನನ್ನ ಜಮೀನುಗಳನ್ನು ಮಾರಾಟ ಮಾಡುವ ಜವಾಬ್ದಾರಿಯನ್ನು ಅವರಿಗೆ ವಹಿಸಿ ಕೊಟ್ಟಿದ್ದೆ ಆದರೆ ಆ ವ್ಯಕ್ತಿ ನನಗೆ ವಂಚಿಸಿರುವುದಾಗಿ ಕೊನೆಗೆ ಗೊತ್ತಾಯಿತು ಎಂದು ಹೇಳಿಕೊಂಡಿದ್ದಾರೆ.
ಸುದೀರ್ಘ ಕಾನೂನು ಪ್ರಕ್ರಿಯೆ ನಡೆಯುತ್ತಿರುವಾಗ, ತನ್ನ ಪಕ್ಷವು ತನಗೆ ಬೆಂಬಲ ನೀಡಲಿಲ್ಲ ಆದರೆ ಪಕ್ಷದ ಕೆಲವು ಹಿರಿಯ ಸದಸ್ಯರು ಅಳಗಪ್ಪನ್‌ಗೆ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದು ಬಹಳ ನೋವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಅಳಗಪ್ಪನ್ ವಿರುದ್ಧ ಎಫ್‌ಐಆರ್ ದಾಖಲಾದ ನಂತರವೂ ಬಿಜೆಪಿಯ ಹಲವಾರು ಹಿರಿಯ ಸದಸ್ಯರು ಅಳಗಪ್ಪನ್ ಅವರನ್ನು ನ್ಯಾಯದಿಂದ ತಪ್ಪಿಸಿಕೊಳ್ಳಲು ಮತ್ತು ತಲೆಮರೆಸಿಕೊಳ್ಳಲು ಸಹಾಯ ಮಾಡಿಕೊಡುತ್ತಿದ್ದಾರೆ” ಎಂದು ಗೌತಮಿ ಆರೋಪಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಜೊತೆಗೆ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆ ತಾನು ಬಯಸಿದ ನ್ಯಾಯವನ್ನು ಒದಗಿಸುವ ಭರವಸೆ ಇದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Parag Desai: ಕೋಟ್ಯಂತರ ವ್ಯವಹಾರದ ಚಹಾ ಕಂಪೆನಿಯ ಮಾಲೀಕ ಬೀದಿ ನಾಯಿ ದಾಳಿಗೆ ಮೃತ್ಯು