Advertisement

 ನಟ ದುನಿಯಾ ವಿಜಯ್ ಅವರಿಗೆ ಮಾತೃವಿಯೋಗ

03:49 PM Jul 08, 2021 | Team Udayavani |

ಬೆಂಗಳೂರು : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಇಂದು (ಜುಲೈ 08) ಕೊನೆಯುಸಿರೆಳೆದಿದ್ದಾರೆ.

Advertisement

ಮಾತೃವಿಯೋಗದಿಂದ ನೊಂದಿರುವ ವಿಜಯ್, ‘ಅಮ್ಮ ಮತ್ತೆ ಹುಟ್ಟಿ ಬಾ’ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಮಹಾಮಾರಿ ಕೋವಿಡ್ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು. ಮೆದುಳಿನಲ್ಲಿ ಬ್ಲಡ್ ಕ್ಲಾಟ್ ಆಗಿದ್ದ ಪರಿಣಾಮ ಅವರು ಹಾಸಿಗೆ ಹಿಡಿದಿದ್ದರು. ಅಮ್ಮನನ್ನು ಬದುಕಿಸಿಕೊಳ್ಳಳು ವಿಜಯ್ ಅವರು ಎಷ್ಟೇ ಪ್ರಯತ್ನ ಪಟ್ಟಿದ್ದರೂ ಕೂಡ ಚಿಕಿತ್ಸೆ ಫಲಿಸದೆ ಇಂದು ನಾರಾಯಣಮ್ಮ ಇಹಲೋಕ ತ್ಯಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next