Advertisement
ಧ್ರುವ ಸರ್ಜಾ ಅವರ ʼಮಾರ್ಟಿನ್ʼ ಸಿನಿಮಾದ ರಿಲೀಸ್ ಡೇಟ್(ಅ.11 ರಂದು) ಕೊನೆಗೂ ಅನೌನ್ಸ್ ಆಗಿದೆ. ಆ ಮೂಲಕ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ʼಅದ್ಧೂರಿʼ ನಟ ಗುಡ್ ನ್ಯೂಸ್ ನೀಡಿದ್ದಾರೆ.
Related Articles
Advertisement
ʼಕೆಡಿʼ ಚಿತ್ರಕ್ಕಾಗಿ ಯುಎಸ್ ನಲ್ಲಿ ಆರ್ಕೇಸ್ಟ್ರಾ ಕೆಲಸಗಳು ನಡೆದಿದೆ. ಇದೇ ಆಗಸ್ಟ್ 16 ಕ್ಕೆ ವರಲಕ್ಷ್ಮೀ ಹಬ್ಬಕ್ಕೆ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಮುಂಬೈನಲ್ಲಿ ಇವೆಂಟ್ ನಡೆಸಿ ಟೀಸರ್ ಬಿಡುಗಡೆ ಮಾಡುವ ಯೋಜನೆಯಿದೆ. ಆ ಬಳಿಕ ಹೈದರಾಬಾದ್ ನಲ್ಲಿ ಕಾರ್ಯಕ್ರಮವೊಂದನ್ನು ಮಾಡಿ ಆ.24 ರಂದು ಮೊದಲ ಸಾಂಗ್ ರಿಲೀಸ್ ಮಾಡಲಾಗುತ್ತದೆ ಎಂದು ಪ್ರೇಮ್ ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ʼಕೆಡಿʼ ಡಿಸೆಂಬರ್ ನಲ್ಲಿ ತೆರೆಗೆ ತರುವ ಪ್ಲ್ಯಾನ್ ಇದೆ ಎಂದು ಪ್ರೇಮ್ ಹೇಳಿದ್ದಾರೆ.
ನಟ ಧ್ರುವ ಸರ್ಜಾ ಮಾತನಾಡಿ “KD ಅಂದ್ರೆ ಕಾಳಿದಾಸ. ಈ ಸಿನಿಮಾದಲ್ಲಿ ಕಾಳಿದಾಸ ನಾನೇ. ನಿರ್ದೇಶಕ ಪ್ರೇಮ್ ಜೊತೆಗೆ ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಅದು ಕೆವಿಎನ್ ಸಂಸ್ಥೆಯಿಂದ ಆರಂಭ ಆಯ್ತು. ಚಿತ್ರದ ಆಡಿಯೋ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದು ತುಂಬಾ ಖುಷಿ ಆಗಿದೆ. ನನ್ನ ‘ಅದ್ಧೂರಿ’ ಸಿನಿಮಾ 4 ಕೋಟಿ ರೂ. ಖರ್ಚಿನಲ್ಲಿ ನಿರ್ಮಾಣವಾಗಿತ್ತು. ಆದ್ರೆ ಈಗ ‘KD’ ಆಡಿಯೋ ಹಕ್ಕು 17.70 ಕೋಟಿ ರೂ.ಗೆ ಸೇಲ್ ಆಗಿದೆ. ಸಿನಿಮಾ ಕೂಡ ತುಂಬಾ ರಿಚ್ ಆಗಿ ಮೂಡಿ ಬಂದಿದೆ” ಎಂದಿದ್ದಾರೆ.
ʼಕೆಡಿʼ ಈಗಾಗಲೇ ಹೈಪ್ ಹೆಚ್ಚಿಸಿದೆ. ಬಾಲಿವುಡ್ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ರೀಷ್ಮಾ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಚಿತ್ರದಲ್ಲಿ ನಟಿಸಿದ್ದಾರೆ.
ಡಿಸೆಂಬರ್ ನಲ್ಲಿ ದರ್ಶನ್ ಅವರ ʼಡೆವಿಲ್ʼ ಚಿತ್ರ ರಿಲೀಸ್ ಆಗಲಿದ್ದು, ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ʼಡೆವಿಲ್ʼ ಜೊತೆ ʼಕೆಡಿʼ ರಿಲೀಸ್ ಆದರೆ ಬಾಕ್ಸ್ ಆಫೀಸ್ ನಲ್ಲಿ ಬಿಗ್ ಫೈಟ್ ಆಗೋದು ಪಕ್ಕಾ. ಇದಲ್ಲದೆ ಥಿಯೇಟರ್ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.