Advertisement
ಇದು ಆರಂಭವಾಗಿದ್ದು ಕಳೆದ ಏಪ್ರಿಲ್ 9 ರಂದು. ಆದರೆ ಕೊರೊನಾ ಲಾಕ್‌ಡೌನ್ ಇದ್ದ ಕಾರಣ ತೋಟದಲ್ಲಿದ್ದೆ. ನಿರ್ಮಾಪಕ ಉಮಾಪತಿ ಜೂನ್ 13ರಂದು ನನಗೆ ಕರೆ ಮಾಡಿದ್ದರು. ಕರೆ ಮಾಡಿ 25 ಕೋಟಿ ಲೋನ್ಗೆ ನಾನು ಶ್ಯೂರಿಟಿ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದರು. ಅವರೇ ನನ್ನ ಹಾಗೂ ಅರುಣಾ ಕುಮಾರಿ ಜೊತೆ ಕಾನ್ಫರೆನ್ಸ್ ಕರೆ ಹಾಕಿದ್ದರು.
Related Articles
Advertisement
ಸಂಪೂರ್ಣ ಘಟನೆ ಗೊಂದಲಮಯವಾಗಿತ್ತು. ಈಕೆ ಧೀರಜ್ ಪ್ರಸಾದ್ರಿಂದ ಒತ್ತಡ ಇದೆ ಎಂದು ನನ್ನ ಬಳಿ ಹೇಳಿದ್ದಳು. ಈಕೆ ಫೇಸ್ಬುಕ್ನಲ್ಲಿ ರಾಕೇಶ್ ಶರ್ಮಾ ಫೋಟೋ ಡೌನ್ಲೋಡ್ ಮಾಡಿದ್ದಳು. ಬ್ಯಾಂಕ್ನಲ್ಲಿ ವಿಚಾರಿಸಿದ ವೇಳೆ ಈಕೆ ಫೇಕ್ ಎಂದು ತಿಳಿದಿದೆ.
ಕೂಡಲೇ ನಾವು ಉಮಾಪತಿ ಭೇಟಿ ಮಾಡಲು ಮುಂದಾದೆವು. ಅವರೇ ಅರುಣಾ ಕುಮಾರಿ ಭೇಟಿ ಮಾಡಿಸಿದ್ದರಿಂದ ನಮಗೂ ಸ್ಪಷ್ಟನೆ ಬೇಕಿತ್ತು. ಈ ಪ್ರಕರಣದಲ್ಲಿ ನಾನು ಯಾರನ್ನೂ ದೂಷಿಸುತ್ತಿಲ್ಲ. ನಾನೇ ಉಮಾಪತಿಗೆ ಪ್ರಕರಣ ಸಂಬಂಧ ದೂರನ್ನ ನೀಡಲು ಹೇಳಿದ್ದೆ. ದೂರು ನೀಡಿದ ಬಳಿಕ ಅರುಣಾ ಕುಮಾರಿ ತಾವು ಸತ್ಯ ಹೇಳೋದಾಗಿ ಹೇಳಿದ್ದರು. ಅಲ್ಲದೇ ಆಕೆ ಈ ಎಲ್ಲಾ ಪ್ರಕರಣಕ್ಕೆ ಉಮಾಪತಿಯೇ ಕಾರಣ ಎಂದು ಆಕೆ ಹೇಳಿದ್ದಾಳೆ ಎಂದು ದರ್ಶನ್ ಹೇಳಿದ್ದಾರೆ.
ಆಕೆ ಉಮಾಪತಿ ಹೆಸರನ್ನ ಹೇಳುತ್ತಿದ್ದಾಳೆ. ಉಮಾಪತಿ ಇನ್ನೊಂದು ರೀತಿ ಹೇಳುತ್ತಿದ್ದಾರೆ. ಇದು ಏನು ಗೊಂದಲ ಎಂದು ನಮಗೆ ತಿಳಿಯುತ್ತಿಲ್ಲ. ಇದನ್ನ ಅರುಣಾ ಕುಮಾರಿಯೇ ಸ್ಪಷ್ಟ ಪಡಿಸಬೇಕು ಎಂದು ದರ್ಶನ್ ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಹರ್ಷ, ನನ್ನನ್ನ ನೋಡುತ್ತಿದ್ದಂತೆ ಆಕೆ ಶಾಕ್ ಆಗಿದ್ದಳು. ಕೋವಿಡ್ ಟೈಂನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಆಕೆ ಬಂದಿದ್ದಳು. ಆಕೆ ಬಳಿ ಐಡಿ ಕಾರ್ಡ್ ಕೂಡ ಇರಲಿಲ್ಲ ಎಂದು ಹೇಳಿದ್ದಾರೆ.
ನಾನು ಈ ಪ್ರಕರಣದಲ್ಲಿ ಯಾರನ್ನೂ ದೂಷಿಸುತ್ತಿಲ್ಲ. ನಾನು ಅರುಣಾ ಕುಮಾರಿ ಹಾಗೂ ಉಮಾಪತಿಯನ್ನೇ ಮುಖಾಮುಖಿ ಮಾಡಿ ನಿಲ್ಲಿಸಿದ್ದೇನೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಪ್ಪಿತಸ್ಥರು ಯಾರೆಂದು ತಿಳಿದರೆ ಅವರನ್ನ ಮಾತ್ರ ನಾನು ಸುಮ್ಮನೇ ಬಿಡೋದಿಲ್ಲ ಎಂದು ಹೇಳಿದ್ರು.