Advertisement

ಮಹಾಮಾರಿ ಕೋವಿಡ್ ಗೆ ಬಾಲಿವುಡ್ ನಟ ವಿಕ್ರಂಜೀತ್ ಕನ್ವರ್ ಬಲಿ

03:35 PM May 01, 2021 | Team Udayavani |

ಮುಂಬೈ: ಬಾಲಿವುಡ್ ನಟ ವಿಕ್ರಂಜೀತ್ ಕನ್ವರ್ ಪಾಲ್ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕಿಗೆ ತುತ್ತಾಗಿದ್ದ ಇವರು ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ  ಚಿಕಿತ್ಸೆ ಫಲಕಾರಿಯಾಗದೇ ಇಂದು(ಶನಿವಾರ ಮೇ 1) ನಿಧನರಾಗಿದ್ದಾರೆ ಎಂದು ನಟ ಅಶೋಕ್ ಪಂಡಿತ್ ಮಾಹಿತಿ ನೀಡಿದ್ದಾರೆ.

Advertisement

ಈ ಬಗ್ಗೆ ಮಾಹಿ ನೀಡಿರುವ ಅಶೋಕ್, ಇಂದು ಬೆಳಗ್ಗೆ ಕೋವಿಡ್ ನಿಂದ ವಿಕ್ರಂಜಿತ್ ಸಾವನ್ನಪ್ಪಿರುವ ಸುದ್ದಿ ಆಘಾತವನ್ನುಂಟು ಮಾಡಿತು. ನಿವೃತ್ತ ಸೇನಾಧಿಕಾರಿಯಾಗಿದ್ದ ವಿಕ್ರಂಜಿತ್ ಸಿನಿಮಾ ಮತ್ತು ಕಿರುತೆರೆಯಲ್ಲಿ ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು. ಅವರ ಕುಟುಂಬದ ಜೊತೆ ನಾವಿದ್ದೇವೆ ಎಂದು ಸಂತಾಪ ಸೂಚಿಸಿದ್ದಾರೆ.

ವಿಕ್ರಂಜಿತ್ ಈ ಹಿಂದೆ ಸೇನಾಧಿಕಾರಿಯಾಗಿದ್ದ ಸೇವೆ ಸಲ್ಲಿಸಿದ್ದರು. 2003ರಿಂದ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದರು. ವಿಕ್ರಂಜಿತ್ ನಿಧನದ ಹಿನ್ನೆಲೆಯಲ್ಲಿ ಹಲಾವರು ಕಲಾವಿದರು ಕಂಬನಿ ಮಿಡಿದಿದ್ದಾರೆ. ಮನೋಜ್ ಬಾಜಪೇಯಿ, ರೋಹಿತ್ ರಾಯ್, ಶ್ರಿಯಾ, ನೀಲ್ ನಿತಿನ್ ಮುಕೇಶ್, ಸೇರಿದಂತೆ ಹಲವು ತಾರೆಯರು ಮರುಗಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next