Advertisement

ನಟ ದಿಲೀಪ್‌ ಅವರ ಎಲ್ಲ ಫೋನ್‌ಗಳನ್ನು ಕೋರ್ಟ್‌ಗೆ ಸಲ್ಲಿಸಲು ಆದೇಶ

08:29 PM Jan 29, 2022 | Team Udayavani |

ತಿರುವನಂತಪುರಂ: ನಟಿಯ ಅಪಹರಣ ಮತ್ತು ದೌರ್ಜನ್ಯ, ತನಿಖಾಧಿಕಾರಿಗಳಿಗೆ ಬೆದರಿಕೆ ಪ್ರಕರಣದ ಆರೋಪಿ ನಟ ದಿಲೀಪ್‌ ಅವರ ಎಲ್ಲ ಫೋನುಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇರಳ ಹೈ ಕೋರ್ಟ್‌ ಆದೇಶಿಸಿದೆ.

Advertisement

ದಿಲೀಪ್‌ ಅವರ ಎಲ್ಲ ಆರು ಫೋನುಗಳನ್ನು ಸೋಮವಾರದೊಳಗೆ ಸಲ್ಲಿಸುವಂತೆ ನ್ಯಾಯಮೂರ್ತಿ ಪಿ.ಗೋಪಿನಾಥ್‌ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ.

ಇದನ್ನೂ ಓದಿ:ತುಮಕೂರು:ಕುರಿ ಮೇಯಿಸಲು ಹೋದ ಒಂದೇ ಕುಟುಂಬದ ಮೂವರು ಮಕ್ಕಳು ಕೆರೆಯ ಗುಂಡಿಗೆ ಬಿದ್ದು ಸಾವು

ಫೋನುಗಳು ಮುಂಬೈನಲ್ಲಿರುವುದರಿಂದ, ಅದನ್ನು ತಂದು ಒಪ್ಪಿಸಲು ಮಂಗಳವಾರದೊಳಗೆ ಅವಕಾಶ ಕೊಡಬೇಕೆಂದು ದಿಲೀಪ್‌ ಪರ ವಕೀಲರು ಮನವಿ ಮಾಡಿದ್ದರು. ಆದರೆ ಸೋಮವಾರದೊಳಗೆ ಫೋನ್‌ ಸಲ್ಲಿಸಬೇಕೆಂದು ನ್ಯಾಯಪೀಠ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next