Advertisement

ಧರ್ಮಶಾಲಾದ ಕೆಫೆಯಲ್ಲಿ ಬಾಲಿವುಡ್ ನಟ ಬಾಸ್ರಾ ಆತ್ಮಹತ್ಯೆಗೆ ಶರಣು

06:31 PM Nov 12, 2020 | Nagendra Trasi |

ನವದೆಹಲಿ:ಬಾಲಿವುಡ್ ನಟ, ಜಬ್ ವಿ ಮೆಟ್ ಹಾಗೂ ಒನ್ಸ್ ಅಪೋನ್ ಎ ಟೈಮ್ ಇನ್ ಮುಂಬಯಿ” ಸಿನಿಮಾದ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದ ಆಸೀಫ್ ಬಾಸ್ರಾ(53ವರ್ಷ) ಗುರುವಾರ (ನವೆಂಬರ್ 12, 2020) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿ ತಿಳಿಸಿದೆ.ಆಸೀಫ್ ಬಾಸ್ರಾ ಹಿಮಾಚಲ್ ಪ್ರದೇಶದ ಧರ್ಮಶಾಲಾ ಸಮೀಪದ ಮೆಕ್ಲಿಯೋಡ್ ಗಂಜ್ ನ ಜೋಗಿವಾರಾ ರಸ್ತೆ ಬಳಿ ಇರುವ ಕೆಫೆಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿ ವಿವರಿಸಿದೆ.

Advertisement

ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ನಟ ಬಾಸ್ರಾ ಅವರು ಯಾವ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ನಟ ಬಾಸ್ರಾ ಅವರು ಧರ್ಮಶಾಲಾ ಸಮೀಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ ಎಂದು ಎಸ್ ಎಸ್ ಪಿ ವಿಮುಕ್ತ್ ರಂಜನ್ ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಆಸೀಫ್ ಬಾಸ್ರಾ ಅವರು ಮೆಕ್ಲಿಯೋಡ್ ಗಂಜ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬಾಸ್ರಾ ಜತೆ ಗೆಳತಿ ಕೂಡಾ ವಾಸವಾಗಿದ್ದಳು.

ಬಾಸ್ರಾ ಬಾಲಿವುಡ್ ನ ಚಿರಪರಿಚಿತ ನಟರಾಗಿದ್ದು, ಜಬ್ ವಿ ಮೆಟ್ ಹೊರತುಪಡಿಸಿ, ಬ್ಲ್ಯಾಕ್ ಪ್ರೈಡೇ, ಕ್ರಿಶ್ 3, ಏಕ್ ವಿಲನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅಲ್ಲದೇ ವೆಬ್ ಶೋಗಳಾದ ಪಾತಾಳ್ ಲೋಕ್ ಮತ್ತು ಹೋಸ್ಟೇಜಸ್ ಗಳಲ್ಲಿಯೂ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next