ಇಂಡಿ: ಬಿಜೆಪಿ ದೇಶದಲ್ಲಿ ದೊಡ್ಡ ಪಕ್ಷವಾಗಿ ಬೆಳೆದಿದೆ. ಪಕ್ಷ ಬೆಳೆಯಲು ಮೂಲ ಕಾರಣವೇ ಕಾರ್ಯಕರ್ತರು. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಶೀಘ್ರದಲ್ಲೇ ಬರಲಿರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರು ಈಗಿನಿಂದಲೇ ತಯಾರಿ ಮಾಡಿಕೊಂಡು ಬಿಜೆಪಿ ಧ್ವಜ ಹಾರಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ಶುಭಂ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾನೇ ಆಗಲಿ, ಶಾಸಕ, ಜಿಪಂ ಸದಸ್ಯ ಯಾರೇ ಆಗಲಿ ಒಬ್ಬರೇ ಪ್ರಚಾರ ಮಾಡಿ ಗೆಲ್ಲಲು ಸಾಧ್ಯವಾಗಲ್ಲ. ಒಂದೇ ಸಮುದಾಯದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಎಲ್ಲ ಸಮಾಜದ ಜನರನ್ನು ಒಗ್ಗೂಡಿಸಿ ಚುನಾವಣೆಯಲ್ಲಿ ಪ್ರಚಾರ ಮಾಡಿ ನಾವು ಪಕ್ಷವನ್ನು ಗೆಲ್ಲಿಸಬೇಕಿದೆ ಎಂದರು.
ಕಾರ್ಯಕರ್ತರು ರಾಜ್ಯ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಮ್ಮ ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡುವ ಗುರಿ ಒಂದೆ ತಲೆಯಲ್ಲಿ ಇಟ್ಟುಕೊಂಡು ಸಂಘಟನೆ ಮಾಡಿ. ನಾನು ನನ್ನ ಹತ್ತಿರ ಬಂದ ಪಕ್ಷದ ಕಾರ್ಯಕರ್ತರ ಕೆಲಸ ಮಾಡಿದ್ದೇನೆ. ಯಾರ ಮನಸ್ಸು ನೋಯಿಸುವ ಕೆಲಸ ಮಾಡಿಲ್ಲ. ಯಾರ ಮೇಲೂ ಇಂದಿಗೂ ಹರಿಹಾಯ್ದಿಲ್ಲ ಎಂದು ಹೇಳಿದರು.
ಇಂಡಿ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆ ತಪ್ಪಿಸಲು ನಾನು ಕೇಂದ್ರ ಸಚಿವನಾಗಿದ್ದಾಗ 110 ಕೋಟಿ ರೂ. ಕೊಟ್ಟಿದ್ದೇನೆ. 104 ಕೋಟಿ ರೂ. ವೆಚ್ಚದಲ್ಲಿ ಅಥರ್ಗಾ, ತಡವಲಗಾ, ಹಂಜಗಿ ಕೆರೆ ತುಂಬಿಸಲು ಕೆಲಸ ಮಾಡಿದ್ದೇನೆ ಎಂದರು. ಹಿಂದೆ ನಮ್ಮನ್ನಾಳಿದ ಕೇಂದ್ರ ಸರಕಾರಗಳು ದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದರೆ ಇಂದು ದೇಶದ ಚಿತ್ರಣವೇ ಬೇರೆ ಇರುತ್ತಿತ್ತು. ದೇಶದ ಅಭಿವೃದ್ಧಿಗಾಗಿ ಮೋದಿ ಅವರೇ ಬೇಕಾಯಿತು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಮಾತನಾಡಿದರು. ಚಂದ್ರಶೇಖರ ಕವಟಗಿ, ವಿವೇಕಾನಂದ ಡಬ್ಬಿ, ಮಲ್ಲಿಕಾರ್ಜುನ ಹೂಗಾರ, ಬಸವರಾಜ ಬಿರಾದಾರ, ಚಿದಾನಂದ ಚಲವಾದಿ, ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ, ರವಿಕಾಂತ ಬಗಲಿ, ಶೀಲವಂತ ಉಮರಾಣಿ, ಅನಿಲ ಜಮಾದಾರ, ಸಿದ್ದಲಿಂಗ ಹಂಜಗಿ, ಯಲ್ಲಪ್ಪ ಹದರಿ, ರವಿ ವಗ್ಗೆ, ಅನಿಲಗೌಡ ಬಿರಾದಾರ, ಲಾಯಪ್ಪ ದೊಡಮನಿ, ಗಣಪತಿ ಬಾಣಿಕೋಲ, ಶಾಂತು ಕಂಬಾರ, ಶಿವಾನಂದ ಕಲಶೆಟ್ಟಿ, ವಿಜಯಲಕ್ಷಿ$¾à ರೂಗಿಮಠ, ರಾಜಶೇಖರ ಯರಗಲ್ಲ, ಶರಣಗೌಡ ಬಂಡಿ, ಶಿವರುದ್ರ ಪಾಟೀಲ, ಶ್ರೀಶೈಲ ಮದರಿ, ರವಿ ರೋಡಗಿ, ಬೊಗೇಶ ಕಲಶೆಟ್ಟಿ, ಸುರೇಶ ಕುಲಕರ್ಣಿ, ವಿಠuಲ ಮೋರೆ, ಮಲ್ಲು ಪಡನೂರ, ದತ್ತಾ ಬಂಡೇನವರ, ಸಚಿನ ಬೊಳೆಗಾಂವ, ಅಂಬಣ್ಣ ಕವಟಗಿ ಸಭೆಯಲ್ಲಿ ಇದ್ದರು.