Advertisement
ವಿದ್ಯಾಗಿರಿಯ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಕ್ಷೇತ್ರದ ಜನತೆ, ಬಿಜೆಪಿ ನನ್ನನ್ನು ಶಾಸಕನನ್ನಾಗಿಸಿದ್ದು ಕಾರ್ಯಕರ್ತರೇ ನನ್ನ ಶಕ್ತಿ ಎಂದು ಉಮಾನಾಥ ಕೋಟ್ಯಾನ್ ಹೇಳಿದರು.ಕೊಡ್ಯಡ್ಕ ದೇವಸ್ಥಾನ ದಲ್ಲಿ ಪ್ರಾರ್ಥನೆ ಸಲ್ಲಿಸಿ ಜಾಥಾದಲ್ಲಿ ಪಾಲ್ಗೊಂಡವರು ಅನ್ನ ಪ್ರಸಾದ ಸ್ವೀಕರಿಸಿ ಮುನ್ನಡೆದರು. ಬಳಿಕ ಕಡಂದಲೆ, ಜಾರಿಗೆಕಟ್ಟೆಯಾಗಿ ದಾಮಸ್ಕಟ್ಟೆ, ಮೂರು ಕಾವೇರಿ, ಕಿನ್ನಿಗೋಳಿ ಪೇಟೆ, ಎಸ್‌ಕೋಡಿ, ಪುನರೂರು, ಕೆರೆಕಾಡು, ಅಂಗಾರ ಗುಡ್ಡೆ, ಕಾರ್ನಾಡು, ಮೂಲ್ಕಿ, ಪಡು ಪಣಂಬೂರು, ಹಳೆಯಂಗಡಿ, ಪಾವಂಜೆ, ಶಿಬರೂರು, ಎಕ್ಕಾರು, ಪೆರ್ಮುದೆ, ಬಜಪೆ, ಕರಂಬಾರು, ಪಡುಶೆಡ್ಡೆ, ಮೂಡುಶೆಡ್ಡೆ ಪರಿಸರದಲ್ಲಿ ವಾಹನ ಜಾಥಾ ಸಾಗಿತು.
ಬಿಜೆಪಿ ಮಂಡಲಾಧ್ಯಕ್ಷ ಈಶ್ವರ ಕಟೀಲು, ಪ್ರ. ಕಾರ್ಯದರ್ಶಿಗಳಾದ ಸುಕೇಶ್ ಶೆಟ್ಟಿ, ಜಯಾನಂದ ಮೂಲ್ಕಿ, ಚುನಾವಣಾ ಕ್ಷೇತ್ರ ಸಂಚಾಲಕಿ, ಜಿ.ಪಂ. ಸದಸ್ಯೆ ಕಸ್ತೂರಿ ಪಂಜ, ಚುನಾವಣಾ ಏಜೆಂಟ್ ಕೆ.ಆರ್. ಪಂಡಿತ್, ಮೂಡಬಿದಿರೆ ಪುರಸಭಾ ಸದಸ್ಯರಾದ ಎಂ. ಬಾಹುಬಲಿ ಪ್ರಸಾದ್, ನಾಗರಾಜ ಪೂಜಾರಿ, ಲಕ್ಷ್ಮಣ ಪೂಜಾರಿ, ಪ್ರಸಾದ್ ಕುಮಾರ್, ದಿನೇಶ್ ಕುಮಾರ್, ಜಿ.ಪಂ. ಸದಸ್ಯರಾದ ಸುಚರಿತ ಶೆಟ್ಟಿ, ಶಿರ್ತಾಡಿಯ ಸುಜಾತಾ ಕೆ.ಪಿ., ವಿನೋದ್ ಕುಮಾರ್ ಬೊಳ್ಳೂರು, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ, ರಾಜ್ಯಬಿಜೆಪಿ ಹಿಂ. ವ. ಮೋರ್ಚಾ ಕಾರ್ಯದರ್ಶಿ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಪ್ರಚಾರ ಸಮಿತಿ ಅಧ್ಯಕ್ಷ ಭುವನಾಭಿರಾಮ ಉಡುಪ ಕಿನ್ನಿಗೋಳಿ, ದಿವ್ಯವರ್ಮ ಬಲ್ಲಾಳ್ ಮೂಡಬಿದಿರೆ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ದೇವಪ್ರಸಾದ್ ಪುನರೂರು, ಯೋಗೀಶ್ ಶೆಟ್ಟಿ ಜಾಥಾದಲ್ಲಿ ಭಾಗವಹಿಸಿದರು. ಇವರೊಂದಿಗೆ ಬಿಜೆಪಿ ಕಚೇರಿ ಬಳಿ ನಾಗರಾಜ್ ಕರ್ಕೇರಾ, ಮೂಡಬಿದಿರೆ ಪೇಟೆಯಲ್ಲಿ ಗೋಪಾಲ್ ಶೆಟ್ಟಿಗಾರ್,
ಶಿರ್ತಾಡಿ ಹೌದಾಲ್‌ನಲ್ಲಿ ಸಂತೋಷ್ ಅಂಚನ್, ಶಿರ್ತಾಡಿ, ಅಳಿಯೂರಿನಲ್ಲಿ ಗಣೇಶ್ ಬಿ., ಶಿರ್ತಾಡಿ ದರೆಗುಡ್ಡೆಯಲ್ಲಿ ಮುನಿರಾಜ ಹೆಗ್ಡೆ, ಬೆಳುವಾಯಿಯಲ್ಲಿ ಭಾಸ್ಕರ ಆಚಾರ್ಯ, ಪುತ್ತಿಗೆ ಕೊಡ್ಯಡ್ಕದಲ್ಲಿ ನಾಗವರ್ಮ ಜೈನ್, ಕಿನ್ನಿಗೋಳಿ ಪಟ್ಟೆಯಲ್ಲಿ ಭಾಸ್ಕರ ಶೆಟ್ಟಿ, ಮೂರು ಕಾವೇರಿಯಲ್ಲಿ ಕೇಶವ, ಪಡುಪಣಂಬೂರಿನಲ್ಲಿ ರಾಜೇಶ್ ಎಸ್. ದಾಸ್, ಮಧುಸೂದನ ಶೆಟ್ಟಿಗಾರ್, ಶರತ್ ಕುಬೆವೂರು, ಹಳೆಯಂಗಡಿ ನರೇಂದ್ರ ಪ್ರಭು, ಪಾವಂಜೆ ಜೀವನ್ ಪ್ರಕಾಶ್, ಚೇಳಾÂರಿನಲ್ಲಿ ಪುಷ್ಪರಾಜ್ ಶೆಟ್ಟಿ, ಶಿಬರೂರಿನಲ್ಲಿ ಜಿತೇಂದ್ರ ಶೆಟ್ಟಿ, ಎಕ್ಕಾರಿನಲ್ಲಿ ಸುರೇಶ್ ಶೆಟ್ಟಿ, ಪೆರ್ಮುದೆಯಲ್ಲಿ ಕಿಶೋರ್, ಬಜಪೆ ಪೇಟೆಯಲ್ಲಿ ಜೋಕಿಂ ಡಿ’ಕೋಸ್ತ, ಕರಂಬಾರಿನಲ್ಲಿ ಅಣ್ಣು ಶೆಟ್ಟಿ, ಮಳವೂರಿನಲ್ಲಿ ಸತೀಶ್ ಮರವೂರು, ಪಡುಶೆಡ್ಡೆಯಲ್ಲಿ ಹರಿಪ್ರಸಾದ್ ಶೆಟ್ಟಿ, ಮೂಡುಶೆಡ್ಡೆಯಲ್ಲಿ ಉಮೇಶ್ ಮೂಡುಶೆಡ್ಡೆ ಮೆರವಣಿಗೆ ಪ್ರಮುಖ ರಾಗಿ ನಿರ್ವಹಣೆಗೈದರು.