Advertisement

ಅಭಿವೃದ್ಧಿ ಕಾರ್ಯಗಳೇ ತಕ್ಕ ಉತ್ತರ

12:52 PM Feb 22, 2017 | |

ದಾವಣಗೆರೆ: ವಿನಾಕಾರಣ ಟೀಕೆ ಮಾಡುವ ಬಿಜೆಪಿಯ ಕೆಲವರಿಗೆ ನಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ತಕ್ಕ ಉತ್ತರ ನೀಡಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಿರುಗೇಟು ನೀಡಿದ್ದಾರೆ. ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ಫಲ-ಪುಷ್ಪ ಪ್ರದರ್ಶನದ ಸಮಾರೋಪದಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಬಿಜೆಪಿಗೆ ಅಧಿಕಾರ ನೀಡಿದ್ದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಲ್ಲೂ ಮೂವರು ಮಂತ್ರಿಗಳಿದ್ದರು.

Advertisement

ಯಾವ ಅಭಿವೃದ್ಧಿ ಕೆಲಸ ಮಾಡದೆ ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದ್ದನ್ನು ಮನಗಂಡ ಜನತೆ ತಕ್ಕಪಾಠ ಕಲಿಸಿದ್ದನ್ನು ಆ ಪಕ್ಷದವರು ಮರೆಯಬಾರದು ಎಂದು ತಾಕೀತು ಮಾಡಿದರು. ಈಗ ನಾವು ಕೈಗೊಂಡಿರುವ ಅಭಿವೃದ್ಧಿ ಕೆಲಸ ಸಹಿಸದೇ ಬಿಜೆಪಿಯವರು ಜನರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯವರ ಮಾತಿಗೆ ಜನರೂ ಸಹ ಬೆಲೆ ನೀಡುವುದಿಲ್ಲ ಎಂದರು. 

ಸ್ಮಾರ್ಟ್‌ಸಿಟಿ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಕೆಟಿಂಗ್‌ ಆಗಿದೆ ಹೊರತು ಯಾವುದೇ ರೀತಿಯಲ್ಲೂ ಅಭಿವೃದ್ಧಿ ಕಂಡಿಲ್ಲ. ದಾವಣಗೆರೆ ನಗರ ಸಹ ಸ್ಮಾರ್ಟ್‌ಸಿಟಿ  ಜನೆಗೆ ಆಯ್ಕೆಯಾಗಿ 2 ವರ್ಷ ಕಳೆದರೂ ಸಹ ಈವರೆಗೂ ಒಂದೇ ಒಂದು ಕೆಲಸ ನಡೆದಿಲ್ಲ. ಸ್ಮಾರ್ಟ್‌ ಸಿಟಿಗಾಗಿ ಕೇಂದ್ರ ಸರ್ಕಾರ 500 ಕೋಟಿ ರೂಪಾಯಿ ನೀಡಿದರೆ ರಾಜ್ಯ ಸರ್ಕಾರವೂ ಸಹ 500 ಕೋಟಿ ರೂಪಾಯಿ ನೀಡಲಿದೆ. 

ಈಗಾಗಲೇ ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ 1 ಸಾವಿರ ಕೋಟಿಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ ಎಂದು ತಿಳಿಸಿದರು. ದಾವಣಗೆರೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಮುಂದಿನ ದಿನಗಳಲ್ಲಿ ಕೆ.ಆರ್‌. ಮಾರುಕಟ್ಟೆಯನ್ನು 25 ಕೋಟಿ, ಹಳೇ ಬಸ್‌ ನಿಲ್ದಾಣವನ್ನು 25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು.

90 ಕೋಟಿ ಅನುದಾನದಲ್ಲಿ ಯುಜಿ ಕೇಬಲ್‌ ಅಳವಡಿಕೆ ಹಾಗೂ 480 ಕೋಟಿ ಮೊತ್ತದ ಜಲಸಿರಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.  ಈ ಹಿಂದೆ ತೋಟಗಾರಿಕೆ ಇಲಾಖೆಯಿಂದ ಸಾರ್ವಜನಿಕರಿಗೆ ಯಾವುದೇ ಯೋಜನೆ, ಸೌಲಭ್ಯ ನೀಡುತ್ತಿರಲಿಲ್ಲ.

Advertisement

ನಮ್ಮ ತಂದೆ ಶಾಮನೂರು  ಶಿವಶಂಕರಪ್ಪ ನವರು ತೋಟಗಾರಿಕೆ ಇಲಾಖೆ ಸಚಿವರಾದ ನಂತರ ಇಲಾಖೆಯ ಎಲ್ಲಾ ಸೌಲಭ್ಯಗಳು ಅರ್ಹರಿಗೆ ತಲುಪಬೇಕೆಂಬ ದೃಷ್ಟಿಯಿಂದ ಯೋಜನೆಗಳನ್ನು ಸಾರ್ವಜನಿಕರಿಗೆ ಪ್ರಚುರಪಡಿಸುವುದರ ಜೊತೆಗೆ ಸಾಕಷ್ಟು ಯೋಜನೆಗಳನ್ನು ಅರ್ಹರಿಗೆ ತಲುಪಿಸುವಂತೆ ಮಾಡಿದ್ದನ್ನು ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದರು. 

ದಾವಣಗೆರೆ ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್‌ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಸಚಿವರ ನಿರ್ಲಕ್ಷéಹಾಗೂ ದೂರದೃಷ್ಟಿಯ ಕೊರತೆಯಿಂದಾಗಿ ತೋಟಗಾರಿಕೆ ಇಲಾಖೆ ಕಚೇರಿಯೇ ಕಾಣದಂತಾಗಿತ್ತು. ಯಾವ ಯೋಜನೆಗಳು ಸಹ ಸಾರ್ವಜನಿಕರಿಗೆ ತಲುಪುತ್ತಿರಲಿಲ್ಲ. ಆಗ ಯಾರ ಕೈಗೆ ಯಾವ ಯಾವ ಯೋಜನೆ ಸೇರಿದವು ಎಂಬುದನ್ನು ಆ ಪಕ್ಷದವರು ತಿಳಿಸಲಿ ಎಂದರು.

ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಎ.ಮಂಜು, ಮೇಯರ್‌ ರೇಖಾ ನಾಗರಾಜ್‌, ಸದಸ್ಯರಾದ ದಿನೇಶ್‌ ಕೆ.ಶೆಟ್ಟಿ, ಎಸ್‌.  ಬಸಪ್ಪ, ತೋಟಗಾರಿಕೆ ಸಂಘದ ಮುರುಗೇಂದ್ರಪ್ಪ, ನಿರ್ಮಲಾ ಸುಭಾಷ್‌, ರೇಖಾರಾಜು, ಶಿರಮಗೊಂಡನಹಳ್ಳಿಯ ರುದ್ರೇಶ್‌, ರಾಮರಾವ್‌, ದೂಡಾ ಮಾಜಿ ಅಧ್ಯಕ್ಷ ಆಯೂಬ್‌ ಪೈಲ್ವಾನ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ. ವೇದಮೂರ್ತಿ,ಯತಿರಾಜ್‌ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next