Advertisement

ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕ್ರಮ

01:23 PM Apr 17, 2021 | Team Udayavani |

ಕೋಲಾರ: ಸರ್ಕಾರದ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸುಧಾರಣಾ ಕ್ರಮಕೈಗೊಳ್ಳಲು ಅನುವಾಗುವಂತೆ ಅಧಿ ಕಾರಿ, ನೌಕರರನ್ನೊಳಗೊಂಡಂತೆ ಒಂದು ಕಾರ್ಯಾಗಾರ ಹಮ್ಮಿಕೊಳ್ಳಬೇಕುಎಂದು ಸಂಸದ ಎಸ್‌.ಮುನಿಸ್ವಾಮಿ ಜಿಲ್ಲಾ ನೌಕರರ ಸಂಘದಅಧ್ಯಕ್ಷ ಸುರೇಶ್‌ಬಾಬು ಅವರಿಗೆ ಸಲಹೆ ನೀಡಿದರು.

Advertisement

ನಗರದಲ್ಲಿ ಶುಕ್ರವಾರ ಸಂಸದರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ನೌಕರರ ಸಂಘದ ಪದಾ ಧಿಕಾರಿಗಳು ಅವರನ್ನು ಭೇಟಿಯಾಗಿ ಶುಭಾಶಯ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ಕಾರ್ಯಾಗಾರ ಹಮ್ಮಿಕೊಂಡರೇತಾವೂ ಭಾಗವಹಿಸುತ್ತೇವೆ. ಸರ್ಕಾರಗಳ ಹಲವಾರುಯೋಜ ನೆಗಳ ಕುರಿತು ಜನತೆಗೆ ಅರಿವು ಮೂಡಿಸುವಕೆಲಸವೂ ಆಗಬೇಕಾಗಿದೆ. ಜತೆಗೆ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಆಡಳಿತದಲ್ಲೂ ಬದಲಾವಣೆತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಆಡಳಿತದಲ್ಲಿ ಸುಧಾರಣೆ ಅಗತ್ಯ: ಸರ್ಕಾರ, ಆಡಳಿತ,ನೌಕರರ, ಜನಪ್ರತಿನಿ ಧಿಗಳು ಎಲ್ಲರ ಮೂಲ ಉದ್ದೇಶಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಸರ್ಕಾರದಕಾರ್ಯಕ್ರಮಗಳನ್ನು ಅವರಿಗೆ ತಲುಪಿಸುವುದೇ ಆಗಿದೆ.ಈ ನಿಟ್ಟಿನಲ್ಲಿ ಆಡಳಿತದಲ್ಲಿ ಸುಧಾರಣೆ ತರುವ ಅಗತ್ಯವಿದೆ.ಸರ್ಕಾರಗಳು ಬಡತನ ನಿರ್ಮೂಲನೆ, ಸಾಮಾಜಿಕ ಭದ್ರತಾಯೋಜನೆಗಳನ್ನು ಜನರಿಗಾಗಿ ಜಾರಿಗೆ ತಂದಿದೆ. ಕೆಲವುಕಡೆಗಳಲ್ಲಿ ಅವು ಸೂಕ್ತ ಫಲಾನುಭವಿಗಳಿಗೆ ತಲುಪಿಸುವಲ್ಲಿಅಡಚಣೆಯಾಗಿದೆ.

ಈ ಹಿನ್ನಲೆಯಲ್ಲಿ ಜನರ ಕಷ್ಟಗಳಿಗೆಸ್ಪಂದಿಸುವ ಕೆಲಸ ಜನಪ್ರತಿನಿ ಗಳ ಜತೆಗೆ ಆಡಳಿತ ನಡೆಸುವನೌಕರರ ಕಡೆಯಿಂದಲೂ ಆಗಬೇಕು ಎಂದರು.ಕ್ರಿಯಾಶೀಲರಾಗಿ ಕೆಲಸ ಮಾಡಿ: ಕೋವಿಡ್‌ 2ನೇಅಲೆಯೂ ವ್ಯಾಪಕವಾಗಿ ಹರಡುತ್ತಿದೆ. ಜನತೆಯಲ್ಲಿಲಾಕ್‌ಡೌನ್‌ ಭೀತಿಯೂ ಆವರಿಸಿದೆ. ಆದರೆ, ಲಾಕ್‌ಡೌನ್‌ ಮಾಡಿದರೆ ಜನತೆಗೆ ಮತ್ತಷ್ಟು ಸಂಕಷ್ಟಎದುರಾಗುವ ಸಾಧ್ಯತೆ ಇದೆ. ಇದರಿಂದ ಸೋಂಕು ತಡೆಗೆಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಈಕಾರ್ಯದಲ್ಲಿ ಸರ್ಕಾರಿ ನೌಕರರು ಹೆಚ್ಚು ಕ್ರಿಯಾಶೀಲರಾಗಿಕೆಲಸ ಮಾಡಬೇಕು.

ಕೋವಿಡ್‌ ಮೊದಲನೇ ಅಲೆಸಂದರ್ಭದಲ್ಲಿ ಸರ್ಕಾರಿ ನೌಕರರು ಅತ್ಯಂತ ಹೆಚ್ಚಿನಮುತುವರ್ಜಿ ವಹಿಸಿ, ಕೊರೊನಾ ವಾರಿಯರ್ ರೀತಿಕೆಲಸ ಮಾಡಿದ್ದೀರಿ. ಈಗಲೂ ಅದೇ ಮಾದರಿಯಲ್ಲಿ 2ನೇಅಲೆಯನ್ನು ನಿಯಂತ್ರಿಸಲು ಯುಧ್ದೋಪಾದಿಯಲ್ಲಿಕೆಲಸ ಮಾಡಬೇಕಾಗಿದೆ.

Advertisement

ಸರ್ಕಾರಿ ನೌಕರರ ಎಲ್ಲಾಸಮಸ್ಯೆಗಳಿಗೂ ಸ್ಪಂದಿಸುವುದಾಗಿ ಭರವಸೆ ನೀಡಿದರು.ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು,ಖಜಾಂಚಿ ಕೆ.ವಿಜಯ್‌, ಗೌರವ ಅಧ್ಯಕ್ಷ ಶ್ರೀನಿವಾಸ ರೆಡ್ಡಿ,ರಾಜ್ಯ ಜಂಟಿ ಕಾರ್ಯದರ್ಶೀ ಕೆ.ಎನ್‌.ಮಂಜುನಾಥ್‌,ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಆಂತರಿಕ ಲೆಕ್ಕ ಪರಿಶೋಧಕವೆಂಕಟೇಶ ಬಾಬು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್‌, ತಾಲೂಕುಕಾರ್ಯಾಧ್ಯಕ್ಷ ಆರ್‌.ನಾಗರಾಜ್‌, ಭೂ ಮಾಪನಾಇಲಾಖೆಯ ಸುಭಾಷ್‌ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next