Advertisement

ಕನ್ನಡ ಚಿತ್ರಗಳ ಪೈರಸಿ ತಡೆಗೆ ಕ್ರಮ

11:58 AM Oct 20, 2021 | Team Udayavani |

ಬೆಂಗಳೂರು: ಕನ್ನಡ ಚಿತ್ರಗಳ ಪೈರಸಿ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕನ್ನಡ ಚಲನಚಿತ್ರೋದ್ಯಮಕ್ಕೆ ಭರವಸೆ ನೀಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮಂಗಳವಾರ ಭೇಟಿ ನೀಡಿ ಮಂಡಳಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪೈರಸಿ ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ.

Advertisement

ಚಿತ್ರೋದ್ಯಮ ಅನ್ನ ಕೊಡುವ ಉದ್ಯಮವಾಗಿದ್ದು, ಅದು ಮುಚ್ಚಿ ಹೋಗಬಾರದು. ಹೀಗಾಗಿ, ಪೈರಸಿ ಮಾಡುವವರನ್ನು ಬಿಡುವುದಿಲ್ಲ ಎಂದರು. ಪೈರಸಿ ತಡೆಯುವ ವಿಚಾರದಲ್ಲಿ ಚಿತ್ರೋದ್ಯಮ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಜತೆಗೆ ಗೃಹ ಇಲಾಖೆ ಸಹಕಾರ ನೀಡಲಿದೆ. ಸರ್ಕಾರಕ್ಕೆ ಚಿತ್ರೋದ್ಯಮದ ಬಗ್ಗೆ ಸಾಕಷ್ಟು ಪ್ರೀತಿ ಮತ್ತು ಕಾಳಜಿ ಇದೆ. ಕೋಟ್ಯಂತರ ರೂ. ಬಂಡವಾಳ ಹಾಕಲಾಗಿರುತ್ತದೆ.

ಹಾಕಿದ ಬಂಡವಾಳ ವಾಪಸ್‌ ಬರೆದಿದ್ದರೆ, ನಷ್ಟ ಆದರೆ ಹೇಗೆ? ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪೈರಸಿ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು. ಚಿತ್ರೋದ್ಯಮ ಉಳಿಯಬೇಕು ಮತ್ತು ಬೆಳೆಯ ಬೇಕು. ಅದಕ್ಕಾಗಿ ಅನೇಕ ಕಾಯ್ದೆಗಳನ್ನ ತಂದಿದ್ದೇವೆ.

ಸರ್ಕಾರಕ್ಕೂ ದೊಡ್ಡ ಮಟ್ಟದ ತೆರಿಗೆ ಕಟ್ಟುತ್ತಿದ್ದೀರ, ಕನ್ನಡದ ಪ್ರತಿಭಾವಂತರು ಇಲ್ಲಿ ಬೆಳೆಯಬೇಕು. ತೆರೆ ಮೇಲೆ ನಟರು ಕಾಣುತ್ತಾರೆ. ಆ ನಟರನ್ನು ತೋರಿಸಲು ಕೋಟ್ಯಾಂತರ ರೂ. ಹಣ ಹಾಕಿರುತ್ತೀರಾ. ನಿಮಗೆಲ್ಲ ಭದ್ರತೆ ನೀಡಲು ಸರ್ಕಾರ ಬದ್ಧವಾಗಿದೆ. ಅನುಮತಿ ನೀಡುವಾಗ ಕಿರಿಕಿರಿ ಮಾಡದಂತೆ ಪೊಲೀಸರಿಗೆ ಹೇಳುತ್ತೇನೆ. ಅನುಮತಿ ನೀಡುವಾಗ ಅಗತ್ಯ ಕ್ರಮಗಳ ಬಗ್ಗೆ ತಿಳಿಸಲಾಗುವುದು ಎಂದರು.

ಪರದೆ ಹಿಂದಿನ ಕಷ್ಟ ಗೊತ್ತಿದೆ: ಮಂಡಳಿಗೆ ಕರೆದು ಸನ್ಮಾನಿಸಿದ್ದಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಭಿನಂದನೆ ಸಲ್ಲಿಸಿದ ಗೃಹ ಸಚಿವರು, ನನ್ನನ್ನು ಅತ್ಯಂತ ಪ್ರೀತಿಯಿಂದ ಮಂಡಳಿಗೆ ಕರೆಸಿದ್ದೀರಿ. ನಮಗೆಲ್ಲಾ ಸಿನಿಮಾ ನೋಡಿ ಎಂಜಾಯ್‌ ಮಾಡಿ ಗೊತ್ತೆ ವಿನಃ ಅದರ ಹಿಂದಿನ ಕಷ್ಟ ನೋಡಿ ಅನುಭವವಿಲ್ಲ.

Advertisement

ಇದನ್ನೂ ಓದಿ:- ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವಾಹನ ಢಿಕ್ಕಿ: ಯುವಕ ಸಾವು

ಈ ಮಂಡಳಿಗೆ ಬಂದ ಮೇಲೆ ಪರದೆಯ ಹಿಂದಿನ ಸಮಸ್ಯೆ ಅರ್ಥವಾಗಿದೆ. ಅನುಮತಿ ವಿಚಾರ, ಪೊಲೀಸರಿಂದ ತೊಂದರೆ ಈ ಘಟನೆಗಳು ನಮ್ಮ ಗಮನಕ್ಕೂ ಬಂದಿದೆ. ಆ ಘಟನೆಗಳು ನಡೆದಾಗ ಸಿನಿಮಾ ತಂಡದವರ ಬಗ್ಗೆಯೂ ಕೆಲವೊಂದು ಟೀಕೆಗಳು ಬಂದಿದ್ದವು. ಹೀಗಾಗಿ ಅಗತ್ಯ ಕ್ರಮಗಳ ಬಗ್ಗೆ ನಿಯಮಗಳನ್ನು ತರಲಾಗಿದೆ ಎಂದರು. ಚಿತ್ರೋದ್ಯಮದ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌, ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ಗೌರವ ಕಾರ್ಯದರ್ಶಿ ಎನ್‌.ಎಂ. ಸುರೇಶ್‌, ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಇತರರಿದ್ದರು.

ಮಂಡಳಿಯ ಬೇಡಿಕೆಗಳು

„ ಪೈರಸಿ ಚಿತ್ರಗಳ ಪ್ರದರ್ಶನ ತಡೆಗಟ್ಟಲು ಯಾವುದೇ ಭಾಗದಲ್ಲಿ ಪೈರಸಿ ಉಂಟಾದರೆ ಚಿತ್ರೋದ್ಯಮಕ್ಕಾಗಿ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಿ, ನಿರ್ಮಾಪಕರ ಉಳಿವಿಗಾಗಿ ಕ್ರಮ ಕೈಗೊಳ್ಳಬೇಕು.

„ ರಾಜ್ಯಾದ್ಯಂತ ಏಕಪರದೆ ಚಲನಚಿತ್ರ ಮಂದಿರಗಳ ಪರವಾನಗಿಯನ್ನು ಸ್ವಯಂ ನವೀಕರಿಸಲು 2022ರ ಡಿ.31ರವರೆಗೂ ಅವಕಾಶ ನೀಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕು. ಈ ಮೂಲಕ ಹಾಲಿ ನಡೆಯುತ್ತಿರುವ ಚಿತ್ರಮಂದಿರಗಳು ಮುಂದುವರಿಯಲು ಅವಕಾಶ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next