Advertisement

ಆಮ್ಲಜನಕ ಸಮಸ್ಯೆ ಆಗದಂತೆ ಕ್ರಮ

04:51 PM May 06, 2021 | Team Udayavani |

ಬೇಲೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ರೋಗಿಗಳಿಗೆ ಆಮ್ಲಜನಕದ ಕೊರತೆ ಆಗದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ತಿಳಿಸಿದ್ದಾರೆ.ತಾಪಂ ಸಭಾಂಗಣದಲ್ಲಿ ಕೋವಿಡ್‌ ಟಾಸ್ಕ್ಫೊಸ್‌ಸಭೆಯಲ್ಲಿ ಮಾತನಾಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಪೀಡಿತರಿಗಾಗಿ 30 ಹಾಸಿಗೆಯ ಸುಸಜ್ಜಿತ ಕೊಠಡಿಗಳಲ್ಲಿ 24 ಜಂಬು ಸಿಲಿಂಡರ್‌ ಹಾಗೂ 3 ಚಿಕ್ಕ ಸಿಲಿಂಡರ್‌ಗಳ ಅಮ್ಲಜನಕ ದಾಸ್ತಾನು ಮಾಡಲಾಗಿದೆ.

Advertisement

ಪ್ರತಿ ದಿನ 3 ಸಿಲಿಂಡರ್‌ ಅವಶ್ಯಕತೆ ಇದೆ ಎಂದರು.ಕೋವಿಡ್‌ ರೋಗಿಗಳಿಗೆ ಅವಶ್ಯಕತೆ ಇರುವ 5ವೆಂಟಿಲೇಟರ್‌, ರೆಮ್‌ಡೆಸಿವಿಯರ್‌, ಲಸಿಕೆ,ಜನರೇಟರ್‌ಗಳನ್ನು ದಿನದ 24ಗಂಟೆಗಳಲ್ಲೂ ಸಿದ್ಧವಿರುವಂತೆ ತಯಾರು ಮಾಡಿಕೊಳ್ಳಲಾಗಿದೆ. ತಾಲೂಕಿನಾದ್ಯಂತ ಸುಮಾರು 19ಸಾವಿರ ಕೋವ್ಯಾಕ್ಸಿನ್‌ಲಸಿಕೆ ನೀಡಲಾಗಿದೆ ಎಂದರು.

ತಾಲೂಕಿನ ಅರೇಹಳ್ಳಿ,ಹಳೇಬೀಡು, ಚಿಕ್ಕಮಗಳೂರು, ಭಾಗಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿದ್ದು ಅಗತ್ಯ ಸೇವೆ ವಾಹನ ಹೊರತುಪಡಿಸಿ ಪ್ರಯಾಣಿಕರ ವಾಹನಗಳನ್ನು ಸೀಜ್‌ಮಾಡಲಾಗುತ್ತಿದೆ ಎಂದು ತಿಳಿಸಿದರು.ತಹಶೀಲ್ದಾರ್‌ ನಟೇಶ್‌ ಮಾತನಾಡಿ, ಅಗತ್ಯವಸ್ತುಗಳ ಅಂಗಡಿ ಹೊರತು ಪಡಿಸಿ ಇತರೆ ವಾಣಿಜ್ಯ ಚಟುವಟಿಕೆ ತೆರೆಯದಂತೆ ಪೋಲೀಸರು ಕ್ರಮಕೈಗೊಳ್ಳಬೇಕೆಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್‌,ತಾಪಂ ಇಒ ರವಿಕುಮಾರ್‌, ವೃತ್ತ ನಿರೀಕ್ಷಕ ಶ್ರೀಕಾಂತ್‌,ಪಿಎಸ್‌ಐ ಪಾಟೀಲ್‌, ಪುರಸಭೆ ಮುಖ್ಯಾಧಿಕಾರಿಸುಜಯ್‌ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next