Advertisement

ಪರಿಸರ ಮಾಲಿನ್ಯ ತಡೆಗೆ ಕ್ರಮ ಅಗತ್ಯ

12:41 PM Jul 04, 2018 | Team Udayavani |

ಯಲಹಂಕ: ಚನ್ನಹಳ್ಳಿ ಗ್ರಾಮದಲ್ಲಿ 305 ಮನೆಗಳಿದ್ದು 60ಮನೆಗಳಲ್ಲಿ ಶೌಚಾಲಯವಿಲ್ಲ ಇವರು ಬಯಲು ಶೌಚಾಲಯಕ್ಕೆ ಹೋಗುತ್ತಿದ್ದಾರೆ. 13ಮನೆಗಳಲ್ಲಿ ಸೌಧೆ ಒಲೆ ಉರಿಸುತ್ತಿದ್ದು ಹೊಗೆಯೊಂದಿಗಿದ್ದಾರೆ. ಪರಿಸರ ಮಾಲಿನ್ಯ ತಡೆಗಟ್ಟಲು ಪ್ರಯತ್ನಿಸಬೇಕಾಗಿದೆ ಯನಕ್ತಿ ಸಂಸ್ಥಾಪಕಿ ನೀರಜ ಹೇಳಿದರು.

Advertisement

ಅವರು ಸಿಎಸ್‌ಆರ್‌ ಚನ್ನಹಳ್ಳಿ ಯೋಜನೆಯಡಿ ಭಾರತ ಸಮುದಾಯ ಅಭಿವೃದ್ಧಿ ಸೇವಾ ಸಂಸ್ಥೆ ಮತ್ತು ಯುನಕ್ತಿ ಬೆಂಗಳೂರು ಇವರ ಸಹಯೋಗದಲ್ಲಿ ಬೆಂಗಳೂರು ಉತ್ತರ ತಾಲೂಕು ಚನ್ನಹಳ್ಳಿಯಲ್ಲಿ ಶಾಲಾ ವೇದಿಕೆ ಉದ್ಘಾಟನೆ, ಕೈ ತೋಟ ಸಸಿಗಳ ವಿತರಣೆ, ಹಾಗೂ ಸಾಮಾಜಿಕ ಅರಣ್ಯ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಸಮುದಾಯ ಅಭಿವೃದ್ಧಿ ಸೇವಾ ಸಂಸ್ಥೆಯ ಅಧಿಕಾರಿ ಹೆಚ್‌.ಟಿ ರಾಮಚಂದ್ರಪ್ಪ ಮಾತನಾಡಿ, ಯೋಜನಾ ಅನುಷ್ಠಾನ ಸಂಸ್ಥೆಗಳಿಂದ ಚನ್ನಹಳ್ಳಿ ಗ್ರಾಮದಲ್ಲಿ 122ಮನೆಗಳಿಗೆಅಪೌಷ್ಟಿಕತೆಯನ್ನು ತಡೆಯಲು ಕಿಚನ್‌ ಗಾರ್ಡನ್‌ ಕಾರ್ಯಕ್ರಮದಲ್ಲಿ ಸೊಪ್ಪು, ತರಕಾರಿ ಬೀಜ, ತೆಂಗಿನ ಸಸಿ, ಕರಿಬೇವಿನ ಗಿಡ ನೀಡಲಾಗಿದ್ದು ತಮ್ಮ ಮನೆಸುತ್ತ ತರಕಾರಿ ಬೆಳೆಗಳನ್ನು ತಾವೇ ಬೆಳೆದು ಕೊಳ್ಳಲು ಪ್ರೋತ್ಸಾಹಿಸಲಾಗಿದೆ ಎಂದರು. 

ಯೋಜನಾ ಅನುಷ್ಠಾನ ಸಂಸ್ಥೆಗಳ ಮುಖ್ಯಸ್ಥೆ ವಿದ್ಯಾ ಪೈ, ಮೀನುಗುಂಟೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜೇಯ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next