Advertisement

Plastic ಮಾಲಿನ್ಯ: ವಿಶ್ವದಲ್ಲಿ ಭಾರತಕ್ಕೆ ನಂಬರ್‌ 1 ಸ್ಥಾನ!

01:15 AM Sep 06, 2024 | Team Udayavani |

ಹೊಸದಿಲ್ಲಿ: ಪ್ಲಾಸ್ಟಿಕ್‌ ಮಾಲಿನ್ಯ ಶ್ರೇಯಾಂಕದಲ್ಲಿ ಈಗ ಭಾರತವೇ ಅಗ್ರ ಸ್ಥಾನದಲ್ಲಿದೆ. ಭಾರತವು ವಾರ್ಷಿ ಕವಾಗಿ 9.3 ದಶಲಕ್ಷ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಿಡುಗಡೆ ಮಾಡುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಇದು ಜಾಗತಿಕವಾಗಿ ಪ್ಲಾಸ್ಟಿಕ್‌ ಹೊರಸೂಸುವಿಕೆಯ ಸುಮಾರು 5ನೇ 1 ಭಾಗದಷ್ಟಿದೆ.

Advertisement

ಭಾರತದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯದ ಪ್ರಮಾಣವು, 605 ತಾಜ್‌ಮಹಲ್‌ಗೆ ಸಮನಾದ ಪ್ರದೇಶಗಳಲ್ಲಿ ತುಂಬಬಹುದಾದಷ್ಟು ಇದೆ. ಅಷ್ಟೇ ಅಲ್ಲ, ಅನಂತರದ ಸ್ಥಾನಗಳಲ್ಲಿರುವ 4 ದೇಶಗಳ ಒಟ್ಟಾರೆ ತ್ಯಾಜ್ಯದ 3 ಪಟ್ಟು ಭಾರತವೊಂದರಲ್ಲೇ ಉತ್ಪತ್ತಿಯಾಗುತ್ತಿದೆ ಎಂದೂ ವರದಿ ಹೇಳಿದೆ. ದೇಶದ ಅಧಿಕೃತ ತ್ಯಾಜ್ಯ ಉತ್ಪಾದನ ಪ್ರಮಾಣವನ್ನು ದಿನಕ್ಕೆ ತಲಾ ಸುಮಾರು 0.12 ಕೆ.ಜಿ.ಯಷ್ಟು ಎಂದು ಅಂದಾಜಿಸಲಾಗಿದೆ ಎಂದು ನೇಚರ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಹೇಳುತ್ತಿದೆ.

ನೈಜೀರಿಯಾ 3.5 ಮೆಟ್ರಿಕ್‌ ಟನ್‌ ಹೊರಸೂಸುವಿಕೆಯೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಇಂಡೋನೇಷ್ಯಾ (3.4 ಮೆ.ಟ.) 3ನೇ ಸ್ಥಾನದಲ್ಲಿದೆ. ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಚೀನ ಈಗ 4ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.