Advertisement

Bengaluru: ಯಂತ್ರಕ್ಕೆ 10 ರೂ. ಹಾಕಿದರೆ ಕೈ ಸೇರುತ್ತೆ ಬಟ್ಟೆ ಕೈಚೀಲ!

03:38 PM Aug 24, 2024 | Team Udayavani |

ಬೆಂಗಳೂರು: ಮಾಲ್‌ ಸೇರಿದಂತೆ ಕೆಲವು ಕಡೆಗಳಲ್ಲಿ ಗ್ರಾಹಕರು ಕಾಯಿನ್‌ ಹಾಕಿದರೆ ಚಾಕೋಲೆಟ್‌ ಸೇರಿದಂತೆ ಭಿನ್ನ ರೀತಿಯ ವಸ್ತುಗಳು ಕ್ಷಣ ಮಾತ್ರದಲ್ಲಿ ಕೈ ಸೇರುವುದನ್ನು ಕಂಡಿದ್ದೇವೆ. ಅದೇ ರೀತಿ ಈಗ ಯಂತ್ರಕ್ಕೆ 10 ರೂ. ಕಾಯಿನ್‌ ಹಾಕಿದರೆ ನಿಮ್ಮ ಕೈಗೆ ಕ್ಷಣ ಮಾತ್ರದಲ್ಲಿ ಬಟ್ಟೆ ಕೈ ಚೀಲ ಕೈಸೇರಲಿದೆ!.

Advertisement

ಎಂ.ಜಿ. ರೋಡ್‌ ಬಳಿ ಇರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟಡದಲ್ಲಿ ಅಳವಡಿಸಲಾಗಿರುವ ಸ್ವಯಂ ಚಾಲಿತ ಬಟ್ಟೆಯ ಕೈಚೀಲ ವಿತರಣಾ ಯಂತ್ರಕ್ಕೆ ಶನಿವಾರ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಕಾಯಿನ್‌ ಹಾಕುವ ಮೂಲಕ ಕೈ ಚೀಲ ಪಡೆದುಕೊಂಡರು. ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಅವರು, ಪ್ಲಾಸ್ಟಿಕ್‌ ಬ್ಯಾಗ್‌ಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಗ್ರೀನ್‌ ರಿಸೈಕ್ಲೋಪ್ಲಾಸ್ಟ್‌ ಸಂಸ್ಥೆಯೊಂದಿಗೆ ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಒಪ್ಪಂದ ಮಾಡಿಕೊಂಡಿದೆ. ಜನನಿಬಿಡ ಸ್ಥಳಗಳಲ್ಲಿ ಸ್ವಯಂ ಚಾಲಿತ ಬಟ್ಟೆಯ ಕೈಚೀಲ ವಿತರಣಾ ಯಂತ್ರ ಇರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಗ್ರಾಹಕರು 10 ರೂ. ಕಾಯಿನ್‌ ಅನ್ನು ಯಂತ್ರದ ಒಳಗೆ ಹಾಕಿದರೆ ತಕ್ಷಣ ಯಂತ್ರದ ಒಳಗಿನ ಬಟ್ಟೆಯ ಕೈಚಿಲ ಗ್ರಾಹಕರು ಕೈಸೇರಲಿದೆ. ಈ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಈ ಯಂತ್ರಗಳನ್ನು ಮೆಟ್ರೋ ಮತ್ತು ಬಸ್‌ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಅಳವಡಿಸಲಾಗುವುದು ಎಂದರು.

ಈ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾದ ಶರಣು ಮೋದಿ, ಮರಿಸ್ವಾಮಿ ಗೌಡ ಮತ್ತು ಡಾ. ಪ್ರದೀಪ್‌, ಮಂಡಳಿಯ ಅಧ್ಯಕ್ಷ (ಉಸ್ತುವಾರಿ) ವಿಜಯ ಮೋಹನ ರಾಜ್‌, ಸದಸ್ಯ ಕಾರ್ಯದರ್ಶಿ, ಬಾಲಚಂದ್ರ ಇತರರಿದ್ದರು.

ಏಕ ಬಳಕೆ ಪ್ಲಾಸ್ಟಿಕ್‌ ತಡೆಗೆ ಕ್ರಮ

Advertisement

ಏಕ ಬಳಕೆ ಪ್ಲಾಸ್ಟಿಕ್‌ ನಿಂದ ಪರಿಸರಕ್ಕೆ ತೀವ್ರ ಹಾನಿ ಆಗುತ್ತಿದ್ದು, ಇದಕ್ಕೆ ಪರ್ಯಾಯವಾದ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹಿಸಲು ಯೋಜನೆ ರೂಪಿಸಲಾ ಗುತ್ತಿದೆ. ಹವಾಮಾನ ಬದಲಾವಣೆಯಿಂದಾಗಿ ಗುಡ್ಡ ಕುಸಿತ ಸೇರಿದಂತೆ ಅನೇಕ ಘಟನೆಗಳು ಸಂಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಸರ್ಕಾರ ಕಾಳಜಿ ವಹಿಸಲಾಗಿದೆ. ಪರಿಸರ ಸ್ನೇಹಿತ ವಸ್ತುಗಳ ಸಂಶೋಧನೆಗೆ ಉತ್ತೇಜನ ನೀಡುತ್ತಿದೆ ಎಂದು ಸಚಿವರು ತಿಳಿಸಿದರು. ಏಕ ಬಳಕೆ ವಸ್ತುಗಳನ್ನು ತಡೆಯಲು ಸರ್ಕಾರ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಕೂಡ ನಡೆದಿದೆ. ಪ್ಲಾಸ್ಟಿಕ್‌ ಬ್ಯಾಗ್‌ ಬಳಕೆಯಿಂದ ಹಲವು ರೀತಿಯ ತೊಂದರೆಗಳು ಆಗಲಿವೆ. ನೀರಿನಲ್ಲಿ ಬಿಟ್ಟರೆ ದನಕರುಗಳು, ಜಲಚರಗಳು ನಾಶವಾಗಿದೆ ಎಂದು ಖಂಡ್ರೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next