Advertisement

ಗಂಗರಕಾಲದ ಸ್ಮಾರಕಗಳ ರಕ್ಷಣೆಗೆ ಕ್ರಮ

02:56 PM Oct 05, 2020 | Suhan S |

ನೆಲಮಂಗಲ: ಗಂಗರ ಕಾಲದ ‌ ಐತಿಹಾಸಿಕ ‌ ದೇವಾಲಯ ಹಾಗೂ ಶಾಸನಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಮಣ್ಣೆ ಗ್ರಾಮಕ್ಕೆ ಪುರಾತತ್ವ ಇಲಾಖೆ ಅಧೀಕ್ಷಕ ‌ ಪುರಾತತ್ವ ತಜ್ಞ ಡಾ.ಶಿವಕಾಂತ್‌ ಭಾಜಪೇಯಿ ಮತ್ತು ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿ ಡಾ.ಆರ್‌. ಗೋಪಾಲ್‌ ಸ್ಥಳ ಪರಿಶೀಲನೆ ನಡೆಸಿದರು.

Advertisement

ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಮಣ್ಣೇ ಗ್ರಾಮಕ್ಕೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಇಲ್ಲಿಕೈಗೊಳ್ಳಬಹುದಾದಜೀರ್ಣೋದ್ಧಾರ ‌ಮಾಡುವ ಕುರಿತು ಚರ್ಚೆ ಮಾಡಿದರು. ಭಾರತ ಸರಕಾರದ ಪುರಾತತ್ವ ಇಲಾಖೆಯ ಅಧೀಕ್ಷಕ ಪುರಾತತ್ವ ತಜ್ಞ ಡಾ.ಶಿವಕಾಂತ್‌ ಭಾಜಪೇಯಿ ಮಾತನಾಡಿ, ಗ್ರಾಮದಲ್ಲಿ ಗಂಗರ ಕಾಲದ ಮಹತ್ವದ ಕುರುಹುಗಳಿವೆ. ಅದರೆ ಇದುವರೆಗೂ ಇದರ ಸಂರಕ್ಷಣೆ ಬಗ್ಗೆ ಯಾರೂ ಗಮನ ಹರಿಸದಿರುವುದು ಸೊಜಿಗದ ಸಂಗತಿಯಾಗಿದೆ. ನಮ್ಮ ಇಲಾಖೆ ವತಿಯಿಂದ ಮುಂದಿನ ದಿನಗಳಲ್ಲಿ ಇಲ್ಲಿನ ದೇವಲಾಯ, ಶಾಸನಗಳ ರಕ್ಷಣೆಯ ಜೊತೆಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕೆಲವು ಪ್ರದೇಶದಲ್ಲಿ ಉತ್ಖನನ ಮಾಡುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಕೆಲಸ ಪ್ರಾರಂಭ ಮಾಡಲಾಗುತ್ತದೆ. ಅದ ಇಲ್ಲಿನ ಸ್ಥಳೀಯರು ಗಮನಹರಿಸಿ ಗ್ರಾಮದ ‌ ಇತಿಹಾಸವನ್ನು ರಕ್ಷಿಸುವಲ್ಲಿ ಆಸಕ್ತಿ ತೋರಿಸಬೇಕು ಎಂದರು.

ಇಲಾಖೆಯ ವತಿಯಿಂದ ಕೆಲಸಲ ಶುರು ಮಾಡಲು ಸ್ಥಳೀಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ದೇವಾಲಯಗಳ ಸುತ್ತಲಿನ ಪ್ರದೇಶ ಯಾವುದೇ ತಕಾರರು ಇಲ್ಲವೆಂದು ಪುರಾತತ್ವ ಇಲಾಖೆಗೆ ವರ್ಗಾಹಿಸಿದರೆ, ಅದ‌ಷ್ಟು ಬೇಗ ನಮ್ಮ ಕೆಲಸ ಆರಂಭಿಸಬಹದು. ಇಲ್ಲಿನ ಬಹುತೇಕ ಕಟ್ಟಡಗಳು ಶಿಥಿಲಗೊಂಡಿವೆ ಸ್ಥಳೀಯ ಅಧಿಕಾರಿಗಳು ಬೇಗ ಕಾರ್ಯಪ್ರವೃತರಾಗಬೇಕು ಎಂದರು.

ಛಾಯಚಿತ್ರ ಪ್ರದರ್ಶನ: ಕೇಂದ್ರ ಮತ್ತು ರಾಜ್ಯ ಸರಕಾರದ ‌ ಪುರಾತತ್ವ ಇಲಾಖೆಯ ಸಹಯೋಗದಲ್ಲಿ ಗಂಗರ ‌ ರಾಜಧಾನಿಯಾಗಿದ್ದ ಮಾನ್ಯಪುರ (ಮಣ್ಣೆ) ಗ್ರಾಮದಲ್ಲಿ ಲಭ್ಯವಿರುವ ದೇವಾಲಯಗಳು, ಶಾಸನಗಳು, ವೀರಗಲ್ಲುಗಳು ಮತ್ತು ವಿಗ್ರಹಗಳ ‌ ಪೋಟೊಗಳನ್ನು ಒಳಗೊಂಡತೆ ಒಂದು ದಿನದ ‌ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುವುದು ಎಂದು ಭಾಜಪೇಯಿ ತಿಳಿಸಿದರು.

ಕಾನೂನು ಕ್ರಮ: ಮಣ್ಣೆ ಗ್ರಾಮದಲ್ಲಿದ್ದ ವಿಜಯನಗರ‌ ಸಾಮ್ರಾಜ್ಯದ ಮಾಹಿತಿ ಒಳಗೊಂಡಿರುವ ಎರಡು ಶಾಸನಗಳ ಶಿಲಾಶಾಸನವನ್ನು ರಸ್ತೆ ಮಾಡುವ ನೆಪದಲ್ಲಿ ಹೊಡೆದು ಹಾಕಿರುವ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಡಾ.ಆರ್‌ ಗೋಪಾಲ್‌ ತಿಳಸಿದರು.

Advertisement

ಇತಿಹಾಸ ‌ ತಜ್ಞ ಡಾ.ಹೆಚ್‌.ಎಸ್‌ ಗೋಪಾಲ್‌ ರಾವ್‌ ಮಾತನಾಡಿ, ಇಲ್ಲಿನ ಸಂಪೂರ್ಣ ಇತಿಹಾಸ ಒಳಗೊಂಡ ಸುಮಾರು 250 ಪುಟಗಳ ‌ ಪುಸ್ತಕ ‌ಬರೆಯುತ್ತಿದ್ದೇನೆ. ಇಲ್ಲಿನ ಎಲ್ಲಾ ಐತಿಹಾಸಕ ಕಟ್ಟಡಗಳು ಸಂರಕ್ಷಿಸಬೇಕು ಮುಂದಿ® ‌ ಪೀಳಿಗೆಗೆ ಇತಿಹಾಸದ ಕುರುಹುಗಳನ್ನು ಉಳಿಸಬೇಕು ಎಂದರು.

ಗಂಗರ ಕಾಲದ ಕಪಿಲೇಶ್ವರ ದೇವಾಲಯ, ಅಕ್ಕ ತಂಗಿಯರ ಗುಡಿ ಮತ್ತು ಜಿನ ಬಸದಿ (ಸೂಳೆಯರ ಗುಡಿ) ಒಳ ಗೊಂಡಂತೆ ಇತರೆ ಐತಿಹಾಸಿಕಕಟ್ಟಡಗಳಿರುವ ಪ್ರದೇಶದಲ್ಲಿ ಸರ್ವೆ ಕಾರ್ಯ ಕೈಗೊಂಡು ಒತ್ತುವರಿಯಾಗಿದ್ದರೆ, ಜಾಗ ವಶಪಡಿಸಿಕೊಂಡು ಐತಿಹಾಸಿಕಕಟ್ಟಡಗಳ ಸಂರಕ್ಷಣೆಗೆ ಅಗತ್ಯವಾದಕ್ರಮಕೈಗೊಳ್ಳಲಾಗುತ್ತದೆ. ಶ್ರೀನಿವಾಸ್‌, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next