Advertisement
ಗುರುವಾರ ಸ್ಥಳೀಯ ಸಾರ್ವಜನಿಕರ ದೂರಿನ ಮೇರೆಗೆ ಡಂಪಿಂಗ್ ಯಾರ್ಡ್ ಸ್ಥಳಕ್ಕೆ ಭೇಟಿ ನೀಡಿದ ಅವರು, ಪರಿಶೀಲನೆ ನಡೆಸಿ ಸದ್ಯದ ಸ್ಥಿತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಕಡೆಗಳಲ್ಲಿ ಡಂಪಿಂಗ್ ಯಾರ್ಡ್ ನೋಡಿದ್ದೇನೆ. ಅವುಗಳ ಮಧ್ಯೆ ನೆಕ್ಕಿಲದ ಡಂಪಿಂಗ್ ಯಾರ್ಡ್ ಸದ್ಯಕ್ಕೆ ಉತ್ತಮ ರೀತಿಯಲ್ಲಿದೆ. ಡಂಪಿಂಗ್ ಯಾರ್ಡ್ ಸುತ್ತಲಿನ ಕಾಂಪೌಂಡ್ ಎತ್ತರಕ್ಕೇರಿಸುವ, ದಾರಿದೀಪದ ವ್ಯವಸ್ಥೆ, ಶೌಚಾಲಯಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇವೆ. ಯಾರ್ಡ್ ನಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ, ತಾಜ್ಯಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಮಾತನಾಡಿ, ನಗರಸಭೆಗೆ ಸ್ವಚ್ಛ ಭಾರತ್ ಮಿಷನ್ ಅಡಿ 4 ಕೋಟಿ ರೂ. ಅನುದಾನ ಲಭಿಸುತ್ತಿದ್ದು, ಡಿಪಿಆರ್ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಅನುದಾನದಲ್ಲಿ ಡಂಪಿಂಗ್ ಯಾರ್ಡ್‌ನ ಸಂಪೂರ್ಣ ಅಭಿವೃದ್ಧಿ ಹಾಗೂ ವೈಜ್ಞಾನಿಕ ರೀತಿಯ ಕ್ರಮಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಅಭಿವೃದ್ಧಿಗಾಗಿ 14ನೇ ಹಣಕಾಸು ನಿಧಿಯನ್ನೂ ಬಳಕೆ ಮಾಡಲಾಗುವುದು ಎಂದರು.
Related Articles
Advertisement
15 ದಿನಗಳಲ್ಲಿ ಸರಿಯಾಗಬೇಕುನಗರಸಭೆಯ ಎಂಜಿನಿಯರ್, ಆರೋಗ್ಯಾಧಿಕಾರಿಗಳು, ಪೌರಾಯುಕ್ತರಿಗೆ ಸೂಚನೆ ನೀಡಿದ ಎಚ್.ಕೆ. ಕೃಷ್ಣಮೂರ್ತಿ ಡಂಪಿಂಗ್ ಯಾರ್ಡ್ ವ್ಯವಸ್ಥೆಯ ಸಮರ್ಪಕತೆ ಒಂದು ದಿನದಲ್ಲಿ ಆಗುವುದಲ್ಲ. ಒಂದು ವಾರ ಸ್ಥಳದಲ್ಲಿ ಹಾಜರಿದ್ದು, ಇಲ್ಲಿನ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಬೇಕು. ಕಸ ಹಾಕಿದ ಕೂಡಲೇ ಅದರ ಮೇಲೆ ಮಣ್ಣು ಹಾಕಿಸಬೇಕು. ಈ ಕೆಲಸವನ್ನು ಜನರು ಹೇಳುತ್ತಾರೆ ಎಂದಲ್ಲ, ನಮ್ಮ ಮನೆಯ ಪರಿಸರ ಹೀಗಿದ್ದರೆ? ಎಂದು ಆಲೋಚಿಸಿ ಕೆಲಸ ಮಾಡಬೇಕು. 15 ದಿನಗಳಲ್ಲಿ ಇಲ್ಲಿನ ವ್ಯವಸ್ಥೆ ಸಮರ್ಪಕವಾಗಬೇಕು ಎಂದರು. ಸಾರ್ವಜನಿಕ ದೂರು
ಸಾರ್ವಜನಿಕ ದೂರು ವರ್ಷದ ಹಿಂದೆ ಯಾರ್ಡ್‌ನಲ್ಲಿ ಬೆಂಕಿ ಆಕಸ್ಮಿಕ ಘಟನೆಯ ಬಳಿಕ ಒಂದಷ್ಟು ವ್ಯವಸ್ಥಿತಗೊಳಿಸಲಾಗಿದೆ. ಆದರೆ ವಾಹನಗಳಲ್ಲಿ ತಾಜ್ಯ, ಕಸಗಳನ್ನು ತರುವ ಸಂದರ್ಭದಲ್ಲಿ ರಸ್ತೆಯಲ್ಲೆಲ್ಲ ಬೀಳಿಸಿಕೊಂಡು ಬರುತ್ತಾರೆ, ಕೊಳಚೆ ನೀರು ಹರಿಯುತ್ತದೆ. ಕೋಳಿ ತಾಜ್ಯಗಳನ್ನು ತಂದು ಹಾಕುತ್ತಿರುವುದರಿಂದ ನಾಯಿ, ಕಾಗೆಗಳು ಇಲ್ಲಿಂದ ಎತ್ತಿಕೊಂಡು ಮನೆಗಳ ಪರಿಸರಕ್ಕೆ ತರುತ್ತವೆ. ಸಹಾಯಕ ಕಮಿಷನರ್ ಬರುತ್ತಾರೆ ಎಂಬ ಕಾರಣಕ್ಕೆ ಕಸದ ರಾಶಿಗೆ ಪ್ಲಾಸ್ಟಿಕ್‌ನ್ನು ಅಳವಡಿಸಿದ್ದಾರೆ ಎಂದು ಸ್ಥಳೀಯರು ದೂರಿಕೊಂಡರು.