Advertisement

ಸಿಬ್ಬಂದಿ-ಮತದಾರರ ಆರೋಗ್ಯ ರಕ್ಷಣೆಗೆ ಕ್ರಮ

06:24 PM Oct 23, 2020 | Suhan S |

ಹಾವೇರಿ: ಕೋವಿಡ್‌ನ‌ಂತಹ ಸಂದಿಗ್ಧ ಸಂದರ್ಭದಲ್ಲಿ ನಡೆಯುತ್ತಿರುವ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತದಾರರ ಆರೋಗ್ಯ ರಕ್ಷಣೆಗಾಗಿ ಪ್ರತಿ ಮತಗಟ್ಟೆಗಳಲ್ಲಿ ಜಿಲ್ಲಾಡಳಿತ ಎಲ್ಲ ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಧಿಕಾರಿ ಹಾಗೂ ಸಹಾಯಕ ಚುನಾವಣಾಧಿ ಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

Advertisement

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮತದಾನದ ದಿನ ಕೋವಿಡ್‌ ಮಾರ್ಗಸೂಚಿಗಳ ಕುರಿತಂತೆ ತಹಶೀಲ್ದಾರ್‌, ತಾಲೂಕು ಆರೋಗ್ಯಾಧಿಕಾರಿಗಳು, ಶಿಕ್ಷಣಾ ಧಿಕಾರಿಗಳು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಚುನಾವಣೆಗೆ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಪಾರದರ್ಶಕ ಹಾಗೂ ಸುಗಮ ಚುನಾವಣೆ ನಡೆಸಲು ಬದ್ಧರಾಗಬೇಕು. ತಮ್ಮ ಆರೋಗ್ಯದ ಮುನ್ನೆಚ್ಚರಿಕೆ ವಹಿಸಿ ಕೋವಿಡ್‌ ಗೆಲ್ಲುವುದರೊಂದಿಗೆ ಚುನಾವಣೆಯಶಸ್ವಿಗೊಳಿಸಬೇಕು. ತಾವೆಲ್ಲ ಪ್ರಾಮಾಣಿಕವಾಗಿಹಾಗೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಮಾತನಾಡಿ, ಚುನಾವಣಾ ಆಯೋಗದ ಕೋವಿಡ್‌ ಮಾರ್ಗಸೂಚಿಗಳ ಅನ್ವಯ ವಿವಿಧ ಹಂತದ ಸಿಬ್ಬಂದಿನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ವಿವರಿಸಿದರು. ಪ್ರತಿ ಮತಗಟ್ಟೆಗೆ ಒಂದು ಕೋವಿಡ್‌ ಕಿಟ್‌ ನೀಡಲಾಗುವುದು. ಈ ಕಿಟ್‌ನಲ್ಲಿ ಮೂರು ಸ್ಯಾನಿಟೈಸರ್‌ ಬಾಟಲ್‌, ಒಂದು ವಿಶೇಷ ಹೈಡ್ರೋಕ್ಲೋರಾಕ್ಸಿಡ್‌ ಗ್ಲೌಸ್‌, ಸಿಬ್ಬಂದಿಗೆ ಎನ್‌-95 ಮಾಸ್ಕ್ ಹಾಗೂ ಸಾಮಾನ್ಯ ಮಾಸ್ಕ್, ನೆರಳೆ ಬಣ್ಣದ ಮಾರ್ಕಿಂಗ್‌ ಪೆನ್‌ಗಳನ್ನು ನೀಡಲಾಗುವುದು. ಜಿಲ್ಲಾಡಳಿತದಿಂದ ಕೋವಿಡ್‌ ಸುರಕ್ಷತೆಗೆ ಮತಗಟ್ಟೆಗಳಲ್ಲಿ ಗರಿಷ್ಠ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತಗಟ್ಟೆವಾರುಹೆಲ್ಪ್ ಡೆಸ್ಕ್ ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗಳಲ್ಲಿ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸೆಕ್ಟರ್‌ವೈಸ್‌ ವೈದ್ಯರನ್ನು ನೇಮಕ ಮಾಡಲಾಗಿದೆ.ನಿಯೋಜಿತ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಬಿಎಲ್‌ಒಗಳು, ಪೊಲೀಸರಿಗೆ ಫೇಸ್‌ ಸೀಲ್ಡ್‌ ಮಾಸ್ಕ್, ಹ್ಯಾಂಡ್‌ ಗ್ಲೌಸ್‌ ಹಾಗೂ ಪಿಪಿಇ ಕಿಟ್‌ ಗಳನ್ನು ಒದಗಿಸಲಾಗುವುದು ಎಂದು ವಿವರಿಸಿದರು.

ಮತದಾನದ ಮುನ್ನಾ ದಿನ ಮತಗಟ್ಟೆಗಳಲ್ಲಿ ಕೋವಿಡ್‌ ತಡೆಗಟ್ಟಲು ಪ್ರಥಮ ಆದ್ಯತೆ ನೀಡಬೇಕು. ಮತಗಟ್ಟೆಗಳನ್ನು ಪೂರ್ಣ ಸ್ವತ್ಛಗೊಳಿಸಿ ಸ್ಯಾನಿಟೈಸೇಶನ್‌ ಮಾಡಬೇಕು. ಮತದಾರರು ಹಾಗೂ ಮತದಾನ ಸಿಬ್ಬಂದಿ ಕಡ್ಡಾಯವಾಗಿ ಕನಿಷ್ಟ ಆರು ಅಡಿ ಅಂತರ ಕಾಪಾಡಬೇಕು. ಈ ನಿಟ್ಟಿನಲ್ಲಿ ಮಾರ್ಕಿಂಗ್‌ ವ್ಯವಸ್ಥೆ ಮಾಡಬೇಕು. ಥರ್ಮಲ್‌ ಗನ್‌, ಮಾಸ್ಕ್ ಹಾಗೂ ಗ್ಲೌಸ್‌ ಧರಿಸಬೇಕು. ಆರೋಗ್ಯ ಸೇತು ಆ್ಯಫ್‌ ಡೌನ್‌ ಲೋಡ್‌ ಮಾಡಿಕೊಳ್ಳಬೇಕು. ಮತದಾನದ ದಿನವೂ ಸಹ ಸ್ಯಾನಿಟೈಸ್‌ ಮಾಡಬೇಕು ಎಂದರು.

Advertisement

ಮತದಾರರ ಸರತಿಯಲ್ಲಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಕೊಠಡಿಯೊಳಗೆ ಮತದಾನ ಮಾಡಲು ಒಂದು ಸಮಯದಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಮಾಡಬೇಕು. ಮತದಾರರ ದಟ್ಟಣೆ ಹೆಚ್ಚಾದರೆ ಟೋಕನ್‌ ನೀಡಬೇಕು. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಇಲ್ಲದವರಿಗೆ ಮಾಸ್ಕ್ ವಿತರಿಸಬೇಕು. ಪ್ರತಿ ಮತದಾರರಿಗೆ ಕೊಠಡಿ ಪ್ರವೇಶ ಮುನ್ನ ಪಲ್ಸ್‌ ಆಕ್ಸಿಮೀಟರ್‌ ಮೂಲಕ ಜ್ವರ ತಪಾಸಣೆ ನಡೆಸಬೇಕು. ಜ್ವರದ ಲಕ್ಷಣ ಕಂಡು ಬಂದರೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಸಂಜೆ ನಾಲ್ಕರ ನಂತರ ಮತದಾನಕ್ಕೆ ಅವಕಾಶ ಕಲ್ಪಿಸಬೇಕು. ಮತದಾರರ ಪಟ್ಟಿಯಲ್ಲಿರುವ ಕೋವಿಡ್‌ ಶಂಕಿತ ಲಕ್ಷಣ ಉಳ್ಳವರು ಪಾಸಿಟಿವ್‌ ಹಾಗೂ ಸಂಪರ್ಕಿತರಿಗೆ ವಿಶೇಷ ಮತದಾನದ ಸಮಯವನ್ನು ನಿಗದಿಪಡಿಸಲಾಗಿದೆ. ಸಂಜೆ ನಾಲ್ಕು ಗಂಟೆಯ ನಂತರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು, ಪಿಪಿಇ ಕಿಟ್‌ಗಳನ್ನು ಧರಿಸಿ ಚುನಾವಣೆ ಪ್ರಕ್ರಿಯೆ ನಡೆಸಬೇಕು. ಮುಂಚಿತವಾಗಿಯೇ ಇಂತಹ ಮತದಾರರನ್ನು ಗುರುತಿಸಲಾಗುವುದು. ಪ್ರತಿ ಮತದಾರರಿಗೂ ಮತದಾನ ಮಾಡಲು ಪ್ರತ್ಯೇಕವಾದ ನೆರಳೆ ಶಾಹಿಯುಳ್ಳ ಮಾರ್ಕಿಂಗ್‌ ಪೆನ್‌ ನೀಡಬೇಕು. ಈ ಪೆನ್ನನ್ನು ಮತ್ತೂಬ್ಬರು ಬಳಸಬಾರದು ಎಂದು ತಿಳಿಸಿದರು.

ಉಪವಿಭಾಗಾಧಿಕಾರಿಗಳಾದ ಅನ್ನಪೂರ್ಣಾ ಮುದಕಮ್ಮನವರ, ಡಾ. ದಿಲೀಷ್‌ ಶಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ರಾಜೇಂದ್ರದೊಡ್ಡಮನಿ, ವಿವಿಧ ತಾಲೂಕು ತಹಶೀಲ್ದಾರ್‌ ಗಳು, ತಾಲೂಕು ಆರೋಗ್ಯಾ ಧಿಕಾರಿಗಳು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next