Advertisement

ಘಾಟಿ ರಸ್ತೆಗಳ ಸುಗಮ ಸಂಚಾರಕ್ಕೆ ಕ್ರಮ

11:14 AM Jul 13, 2018 | Team Udayavani |

ಕುಂದಾಪುರ: ಇತ್ತೀಚೆಗೆ ಸುರಿದ ಭಾರೀ ಮಳೆಗೆ ಚಾರ್ಮಾಡಿ, ಆಗುಂಬೆ ಹಾಗೂ ಒತ್ತಿನೆಣೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದ್ದು  ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.
ಬೈಂದೂರು ಒತ್ತಿನೆಣೆಯಲ್ಲಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ. ಆಗುಂಬೆ ಘಾಟ್‌ ರಸ್ತೆಯ ಶಾಶ್ವತ ಕಾಮಗಾರಿಯನ್ನು ಕೈಗೊಳ್ಳಲು ವಿಸ್ತೃತ ಯೋಜನಾ ವರದಿ ತಯಾರಿಕೆಗಾಗಿ ಫೀಡ್‌ ಬ್ಯಾಕ್‌ ಇನ್‌ಫ್ರಾ ಬೆಂಗಳೂರು ಇವರನ್ನು ಸಮಾಲೋಚಕರನ್ನಾಗಿ ನೇಮಿಸಲಾಗಿದೆ. ಯೋಜನಾ ವರದಿ ತಯಾರಿ ಪ್ರಗತಿಯಲ್ಲಿದೆ. ಅದು ಸಿದ್ಧಗೊಂಡ ಅನಂತರ ಕೇಂದ್ರ ಭೂಸಾರಿಗೆ ಸಚಿವಾಲಯದಿಂದ ಅನುಮೋದನೆ ಪಡೆದು ಟೆಂಡರ್‌ ಕರೆದು ಕಾಮಗಾರಿ ನಡೆಸಲಾಗುವುದು.

Advertisement

ಚಾರ್ಮಾಡಿ ಘಾಟಿಯಲ್ಲಿ 253 ಕೋ.ರೂ. ವೆಚ್ಚದಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳುವ ಸಲುವಾಗಿ ಅಂದಾಜುಪಟ್ಟಿಯನ್ನು ತಯಾರಿಸಿ ಕೇಂದ್ರ ಭೂಸಾರಿಗೆ ಸಚಿವಾಲಯದ ಅನುಮೋ
ದನೆಗೆ 2016 ಮಾರ್ಚ್‌ನಲ್ಲಿಯೇ ಕಳುಹಿಸಲಾಗಿದೆ. ಈ ಪ್ರಸ್ತಾವನೆಗೆ ಅನುಮೋದನೆ ದೊರೆತ ಕೂಡಲೇ ಟೆಂಡರ್‌ ಕರೆದು ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಉಡುಪಿ ಜಿಲ್ಲೆಗೆ 11 ಸೇತುವೆ ಮಂಜೂರು: ಕೇಂದ್ರ ರಸ್ತೆ ನಿಧಿಯಿಂದ 2016-17ನೇ ಸಾಲಿನ ಯೋಜನೆಯಡಿ ರಾ.ಹೆ ವಲಯಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ 11 ಸೇತುವೆ ನಿರ್ಮಾಣಕ್ಕೆ  8 ಕಾಮಗಾರಿ ಮಂಜೂರಾಗಿವೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ. ಅವರು ವಿಧಾನಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಉಡುಪಿ ಜಿಲ್ಲೆಗೆ ಮಂಜೂರಾದ ಕಾಮಗಾರಿಗಳ ವಿವರ ನೀಡಿದರು. ದಕ್ಷಿಣ ವಲಯಕ್ಕೆ  51 ಸೇತುವೆ ಲೋಕೋಪಯೋಗಿ ಇಲಾಖೆ ದಕ್ಷಿಣ ವಲಯಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಗೆ ಸಿಆರ್‌ಎಫ್ನಿಂದ 9 ಕೋ.ರೂ.ಗಳ 1 ಸೇತುವೆ, ಲೋಕೋಪಯೋಗಿ ಇಲಾಖಾ ಅನುದಾನದಡಿ 60.4 ಕೋ.ರೂ. ಮೊತ್ತದ 41 ಸೇತುವೆ ಕಾಮಗಾರಿಗಳು ಮಂಜೂರಾಗಿವೆ. ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ  ವತಿಯಿಂದ ಉಡುಪಿ  ಜಿಲ್ಲೆಗೆ 9 ಸೇತುವೆ ಮಂಜೂರಾಗಿದೆ ಎಂದು ಉತ್ತರಿಸಿದ್ದಾರೆ.

ಸೇತುವೆ ನಿರ್ಮಾಣಕ್ಕೆ ತಡೆ
ಏತನ್ಮಧ್ಯೆ ಸಿಆರ್‌ಎಫ್ ಯೋಜನೆಯಡಿ ಮಂಜೂರಾದ ಉಡುಪಿ ಜಿಲ್ಲೆಯ 8 ಸೇತುವೆಗಳ ಕಾಮಗಾರಿಗೆ ಸರಕಾರ ತಡೆ ನೀಡಿದೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಸಚಿವರೇವಣ್ಣ ಅವರು ಮಾಹಿತಿ ನೀಡಿದ್ದು, 2016-17ನೇ ಸಾಲಿನಲ್ಲಿ ಕೇಂದ್ರ ರಸ್ತೆ ನಿಧಿ ಯೋಜನೆಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಲಯಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ ಮಂಜೂರಾಗಿರುವ 8 ಸೇತುವೆ ನಿರ್ಮಾಣವನ್ನು 2ನೆ ಹಂತದಲ್ಲಿ ಕೈಗೊಳ್ಳಲು ಉದ್ದೇಶಿಸಿಟೆಂಡರ್‌ ಕರೆಯಲಾಗಿದೆ. ಆದರೆ ಆರ್ಥಿಕ ಇಲಾಖೆ ಸಿಆರ್‌ಎಫ್ ಕಾಮಗಾರಿಗಳನ್ನು ವಾರ್ಷಿಕ 500 ಕೋ.ರೂ.ಗಳಿಗೆ ಮಿತಿಗೊಳಿಸಲು ತಿಳಿಸಿದ ಕಾರಣ ಕಾಮಗಾರಿ ಗುತ್ತಿಗೆ ಪ್ರಕ್ರಿಯೆ ತಡೆ ಹಿಡಿದು ಯಥಾಸ್ಥಿತಿಗೆ ನಿರ್ದೇಶಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿದುಸಿಆರ್‌ಎಫ್ ನಿಧಿಯಲ್ಲಿ ಮಾಡಬೇಕಿದ್ದ ಕಾಮಗಾರಿಗಳು ಬಾಕಿ ಆಗಿಲ್ಲ ಎಂದು ಉತ್ತರಿಸಿದ್ದಾರೆ.

ನಾಲ್ಕು ಜಿಲ್ಲೆಗಳಿಗೆ ಮಾತ್ರ ಬಜೆಟ್‌: ಕೋಟ ಟೀಕೆ
ಉಡುಪಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್‌ ಕೇವಲ ನಾಲ್ಕು ಜಿಲ್ಲೆಗಳಿಗೆ ಮಾತ್ರವೇ ಪೂರಕವಾಗಿದೆ. ಇದು ರಾಜ್ಯದ ಆರು ಕೋಟಿ ಜನರ ಆಶಯಕ್ಕೆ ಪೂರಕವಾದ ಬಜೆಟ್‌ ಅಲ್ಲ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ. ಸದನದಲ್ಲಿ ಬಜೆಟ್‌ ಮೇಲಿನ ಭಾಷಣ ಮಾಡಿದ ಅವರು, ಬಜೆಟ್‌ನಲ್ಲಿ ಪ್ರಾದೇಶಿಕ  ಅಸಮಾನತೆಯಿಂದಾಗಿ ರಾಜ್ಯ ವಿಭಜನೆ ಇಲ್ಲವೇ ಪ್ರತ್ಯೇಕತೆಯ ಕೂಗು ಕೇಳಿ ಬಂದರೆ ಸಮ್ಮಿಶ್ರ ಸರಕಾರ ನೇರ ಹೊಣೆ ಎಂದರು.  

Advertisement

ಆರ್‌ಟಿಇ ಅನುಷ್ಠಾನ ಅಸಮರ್ಪಕಶಿಕ್ಷಣ: ಇಲಾಖೆಯು 28,000 ಶಾಲೆಗಳನ್ನು ಬೇರೆ ಶಾಲೆಗಳೊಂದಿಗೆ ವಿಲೀನ ಮಾಡಲು ಹೊರಟು ಕನ್ನಡ ಮಾಧ್ಯಮ ಶಾಲೆ ಮುಚ್ಚಲು ಹೊರಟಿದೆ. ಆರ್‌ಟಿಇ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ಶಿಕ್ಷಣ ಸಚಿವರು ಗಮನ ಹರಿಸಬೇಕು. ಶಾಲೆ ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಶೇ. 75ರಷ್ಟು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಯಾಗಿಲ್ಲ ಎಂದರು. ರಾಜ್ಯದಲ್ಲಿ ಸುಮಾರು 99,000 ಸ್ಥಳೀಯ ಸರಕಾರದ ಜನಪ್ರತಿನಿಧಿಗಳಿದ್ದು ಅವರಿಗಾಗಿ ಯಾವುದೇ ಯೋಜನೆಯನ್ನು ಮಾಡಿಲ್ಲ. ಗ್ರಾ.ಪಂ. ಸದಸ್ಯರ ಗೌರವಧನ, ತಾಲೂಕು, ಜಿ.ಪಂ.ಸದಸ್ಯರಿಗೆ ಉಚಿತ ಬಸ್‌ಪಾಸ್‌ ಯೋಜನೆಯೂ ಜಾರಿಗೆ ಬಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next