Advertisement

ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ: ಸಚಿವ ರೈ

03:05 PM May 22, 2017 | |

ಮಂಗಳೂರು: ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಹಿನ್ನೆಲೆಯಲ್ಲಿ ಸರಕಾರ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ತಾ.ಪಂ.ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಇರಾದೆಯಿಂದ ಮಂಗಳೂರು ತಾ.ಪಂ.ಗೆ ನೂತನ ಕಟ್ಟಡ ಭಾಗ್ಯ ಕಲ್ಪಿಸಲಾಗುತ್ತಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ದ.ಕ. ಜಿ.ಪಂ.  ಹಾಗೂ ಮಂಗಳೂರು ತಾ.ಪಂ. ಆಶ್ರಯದಲ್ಲಿ ಮಂಗಳೂರು ತಾ.ಪಂ.ನ ನೂತನ ಕಟ್ಟಡಕ್ಕೆ ರವಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ತಾಲೂಕು ಪಂಚಾಯತ್‌ಗಳಿಗೆ ಕಟ್ಟಡದ ಆವಶ್ಯಕತೆ ಇರುತ್ತದೆ. ಅದನ್ನು ಈಗಾಗಲೇ ಪೂರೈಸುವ ಕೆಲಸವನ್ನು ಸರಕಾರ ಮಾಡಿದೆ. ಈ ಮೂಲಕ ತಾ.ಪಂ.ಕಾರ್ಯಕ್ಷಮತೆ ಹೆಚ್ಚಿಸಲಾಗುತ್ತದೆ ಎಂದರು.

ಸಹಾಯಕ ಕಾರ್ಯಕಾರಿ ಅಭಿಯಂತರ ಸುಜನ್‌ರಾವ್‌ ಅವರನ್ನು ಸಮ್ಮಾನಿಸಲಾಯಿತು. ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯರಾದ ಮಮತಾ ಗಟ್ಟಿ, ಧನಲಕ್ಷ್ಮೀ ಗಟ್ಟಿ, ಇಬ್ರಾಹಿಂ, ತಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್‌ ಪೂಜಾರಿ, ಸ್ಥಾಯೀ ಸಮಿತಿ ಅಧ್ಯಕ್ಷೆ ರೀಟಾ ಕುಟಿನ್ಹೋ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ತಾಲೂಕು ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಮೋನು ಸ್ವಾಗತಿಸಿದರು.

3.50 ಕೋ.ರೂ.ನಲ್ಲಿ ಸುಸಜ್ಜಿತ ಕಟ್ಟಡ
ತಾ.ಪಂ.ನ ನೂತನ ಕಟ್ಟಡವನ್ನು 3.50 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮಂಗಳೂರು ತಾ.ಪಂ.ನ ಈಗಿರುವ ಕಟ್ಟಡವು ಸುಮಾರು 60 ವರ್ಷ ಹಳೆಯದಾಗಿದೆ. ಹೀಗಾಗಿ ಇದನ್ನು ಕೆಡವಿ ಇದೇ ಸ್ಥಳದಲ್ಲಿ ಒಟ್ಟು 2,628 ಚ.ಮೀ. ವಿಸ್ತೀರ್ಣದ 2 ಮಹಡಿಗಳ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗುವುದು. ಒಂದೂವರೆ ವರ್ಷದೊಳಗೆ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಿನ ಕಟ್ಟಡ ಕೆಡಹುವ ಸಂದರ್ಭ ತಾತ್ಕಾಲಿಕವಾಗಿ ಹತ್ತಿರದ ಸಾಮರ್ಥಯ ಸೌಧದಲ್ಲಿ ಕಾರ್ಯಾಚರಿಸಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next