Advertisement

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

10:55 AM Apr 27, 2024 | Team Udayavani |

ಬೆಂಗಳೂರು: ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಕೇಂದ್ರ ಕ್ಷೇತ್ರಗಳಲ್ಲಿ ಶಾಂತಿಯುವ ಮತದಾನ ನಡೆದಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದ್ದಾರೆ.

Advertisement

ಕೆಲವು ಕಡೆ ಸಣ್ಣ-ಪುಟ್ಟ ಘಟನೆ ನಡೆದಿರುವುದು ಹೊರತುಪಡಿಸಿದರೆ ಗಂಭೀರ ವಾದ ಪ್ರಕರಣ ದಾಖಲಾಗಲಿಲ್ಲ. ನಾಗರಿಕರು ಬಹಳ ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಪ್ರತಿ ಮತಗಟ್ಟೆ ಕೇಂದ್ರಗಳಲ್ಲೂ ಸ್ಥಳೀಯ ಪೊಲೀಸರು ಸೂಕ್ತ ಬಂದೋಬಸ್ತ್ ವಹಿಸಿದ್ದರು. ಸಿಎಆರ್‌, ಕೆಎಸ್‌ಆರ್‌ಪಿ ತುಕಡಿಗಳು, 11 ಅರಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು. ಜೊತೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಗಸ್ತು ತಿರುಗುತ್ತಿದ್ದರು. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು ಎಂದು ಬಿ.ದಯಾನಂದ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಡಿಸಿಪಿಗಳಿಂದ ಬಂದೋಬಸ್ತ್: ಬೆಂಗಳೂರಿನಲ್ಲಿ ಆಯಾ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಹತ್ತಾರು ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು, ನೂರಾರು ಸಬ್‌ ಇನ್‌ಸ್ಪೆಕ್ಟರ್‌ಗಳು, ಸಾವಿರಾರು ಕಾನ್‌ಸ್ಟೆàಬಲ್‌ಗ‌ಳು ತಮ್ಮ ವ್ಯಾಪ್ತಿಗಳಲ್ಲಿ ಬರುವ ಮತಗಟ್ಟೆಗಳಲ್ಲಿ ಲಾಠಿ ಕೈಯಲ್ಲಿ ಹಿಡಿದು ಗಸ್ತು ತಿರುಗುತ್ತಾ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದರು. ಬೆಂಗಳೂರಿನಲ್ಲಿರುವ ಸಾವಿರಾರು ಮತಗಟ್ಟೆಗಳ ಸುತ್ತಲೂ ಖಾಕಿ ಭದ್ರತೆ ಒದಗಿಸುತ್ತಿರುವ ದೃಶ್ಯ ಕಂಡು ಬಂತು. ಎಲ್ಲೂ ಅಹಿತಕರ ಪ್ರಕರಣ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು.

ಸ್ಟ್ರಾಂಗ್‌ ರೂಂಗೆ ಬಿಗಿ ಭದ್ರತೆ: ಮತಪೆಟ್ಟಿಗೆಗಳ ಸ್ಟ್ರಾಂಗ್‌ ರೂಂ ಭದ್ರತೆಗಾಗಿ ನಿಯೋಜನೆ ಗೊಂಡಿರುವ ಸಿಆರ್‌ಪಿಎಫ್ ತಂಡವು ಶುಕ್ರವಾರ ಮುಂಜಾನೆಯೇ ಬೆಂಗಳೂರಿಗೆ ಆಗಮಿಸಿತ್ತು. ಬೆಂಗಳೂರು ಕೇಂದ್ರದ ಅರಮನೆ ರಸ್ತೆಯ ಮೌಂಟ್‌ ಕಾರ್ಮೆಲ್‌ ಕಾಲೇಜು, ಬೆಂಗಳೂರು ಉತ್ತರದ ಮಲ್ಯ ರಸ್ತೆಯ ಸೆಂಟ್‌ ಜೋಸೆಫ್ ಕಾಲೇಜು, ಬೆಂಗಳೂರು ದಕ್ಷಿಣದ ಜಯನಗರ 9ನೇ ಬ್ಲಾಕ್‌ನಲ್ಲಿರುವ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿರುವ ಸ್ಟ್ರಾಂಗ್‌ ರೂಂಗಳಲ್ಲಿ ಸಿಆರ್‌ಪಿಎಫ್ ಬಿಗಿ ಭದ್ರತೆ ಒದಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next