Advertisement

ಹೊಸ ಮಾರ್ಗಸೂಚಿ ಪಾಲನೆಗೆ ಕ್ರಮ

03:53 PM Apr 23, 2021 | Team Udayavani |

ಚಿಕ್ಕಬಳ್ಳಾಪುರ: ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಮೇ4ರವರೆಗೆ ರಾತ್ರಿ 9 ಗಂಟೆಯಿಂದ ಮುಂಜಾನೆ 6 ಗಂಟೆವರೆಗೆ ರಾತ್ರಿಕರ್ಫ್ಯೂ ಹಾಗೂ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6ಗಂಟೆವರೆಗೆ ವೀಕ್‌ ಎಂಡ್‌ ಕಪ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರಆದೇಶ ಹೊರಡಿಸಿದ್ದು, ಈ ಹೊಸ ಮಾರ್ಗಸೂಚಿಗಳನ್ನುಜಿಲ್ಲೆಯಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕುಎಂದು ಜಿಲ್ಲಾಧಿಕಾರಿ ಆರ್‌.ಲತಾ ಸೂಚನೆ ನೀಡಿದರು.

Advertisement

ಕೋವಿಡ್‌-19 ಮಾರ್ಗಸೂಚಿ ಅನುಷ್ಠಾನ ಬಗ್ಗೆ ಜಿಲ್ಲಾಡಳಿತಭವನದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ನೋಡಲ್‌ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಮಾತನಾಡಿ, ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿಪಾಲಿಸಲು ಅಧಿಕಾರಿಗಳು ಅರಿವು ಮೂಡಿಸಬೇಕೆಂದರು.

ಹೊಸ ಮಾರ್ಗಸೂಚಿಯನ್ವಯ ಏನಿರುತ್ತೆ? ಏನಿರಲ್ಲ?ಶಾಲೆಗಳು, ಕಾಲೇಜುಗಳು, ಕೋಚಿಂಗ್‌ ಕೇಂದ್ರಗಳು(ಆನ್‌ಲೈನ್‌,ದೂರಶಿಕ್ಷಣ ಮುಂದುವರಿಸಬಹುದು), ಸಿನಿಮಾ ಹಾಲ್‌ಗ‌ಳು,ಶಾಪಿಂಗ್‌ ಮಾಲ್‌, ಜಿಮ್ನಾಷಿಯಂ, ಯೋಗ ಕೇಂದ್ರಗಳು, ಸ್ಪಾ,ಕ್ರೀಡಾ ಕಾಂಪ್ಲೆಕ್ಸ್‌, ಸ್ಟೇಡಿಯಂ, ಈಜುಕೊಳ, ಮನರಂಜನಾಅಮ್ಯೂಸ್‌ಮೆಂಟ್‌ ಪಾರ್ಕ್‌, ಬಾರ್‌, ಆಡಿಟೋರಿಯಂಗಳು ಮತ್ತಿತರ ಸಮಾವೇಶದ ತಾಣ, ಎಲ್ಲ ಸಾಮಾಜಿಕ, ರಾಜಕೀಯ,ಕ್ರೀಡಾ, ಮನರಂಜನೆ, ಶೆ„ಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾವೇಶಸಂಪೂರ್ಣ ಬಂದ್‌ ಆಗಲಿದೆ.

ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ, ಪ್ರಾರ್ಥನಾ ಮಂದಿರಗಳಿಗೆಭಕ್ತರಿಗೆ ಅವಕಾಶ ಇಲ್ಲ. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿಪಾರ್ಸೆಲ್‌ ಮಾತ್ರ ಒಯ್ಯಲು ಅವಕಾಶ ಇದೆ ಎಂದು ತಿಳಿಸಿದರು.

ಶಾಲಾ, ಕಾಲೇಜು ಸಂಪೂರ್ಣ ಬಂದ್:ಶಾಲೆ ಕಾಲೇಜುಗಳು, ಇತರೆ ವಿದ್ಯಾಸಂಸ್ಥೆಗಳು, ತರಬೇತಿಕೇಂದ್ರಗಳು, ಕ್ರೀಡಾಂಗಣ, ಪಾರ್ಕು ಬಂದ್‌ ಆಗಲಿದ್ದು, ಎಲ್ಲಾಧಾರ್ಮಿಕ ಕೇಂದ್ರಗಳು ಬಂದ್‌ ಆಗಲಿದೆ. ಕಟ್ಟಡ ಕಾರ್ಮಿಕರಿಗೆಯಾವುದೇ ಅಡ್ಡಿ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.ಎಲ್ಲ ರೀತಿಯ ನಿರ್ಮಾಣ ಚಟುವಟಿಕೆ, ರಿಪೇರಿ ಚಟುವಟಿಕೆಗಳಿಗೆಅವಕಾಶ ಇದೆ. ಮುಂಗಾರು ಪೂರ್ವ ಕಾಮಗಾರಿ ನಡೆಸಬಹುದು.

Advertisement

ಎಲ್ಲ ಕೈಗಾರಿಕೆಗಳು, ಉತ್ಪಾದನಾ ಘಟಕಗಳನ್ನು ಕೋವಿಡ್‌ ನಿಯಮಪಾಲಿಸಿ ನಡೆಸಬಹುದು. ಕಾರ್ಮಿಕರು ಮತ್ತು ಸಿಬ್ಬಂದಿ ಸಾಗಣೆಗೆಕೆಲಸದ ಸ್ಥಳದ ಗುರುತಿನ ಚೀಟಿ ಅಗತ್ಯವಾಗಿದೆ.

ನಿರ್ಬಂಧ:ವಾಣಿಜ್ಯ ಚಟುವಟಿಕೆಗಳಾದ ಕಿರಾಣಿ ಅಂಗಡಿ, ನ್ಯಾಯ ಬೆಲೆಅಂಗಡಿ, ಆಹಾರ ಪದಾರ್ಥ, ಹಣ್ಣು, ತರಕಾರಿ, ಡೇರಿ, ಹಾಲುಮತ್ತು ಇತರ ಉತ್ಪನ್ನಗಳು, ಮೀನು- ಮಾಂಸ, ಪ್ರಾಣಿಗಳಆಹಾರಗಳ ಮಾರಾಟಕ್ಕೆ ಅವಕಾಶ ಇದೆ.

ಹೂವು, ಹಣ್ಣು, ತರಕಾರಿಸಗಟು ಮಾರುಕಟ್ಟೆಗಳನ್ನು ಏ.23ರ ಬಳಿಕ ತೆರೆದ ಸ್ಥಳ ಅಥವಾಮೈದಾನಗಳಿಗೆ ಸ್ಥಳಾಂತರ ಮಾಡಬೇಕು. ಲಾಡ್ಜ್ ಮತ್ತು ಹೋಟೆಲ್‌ಗಳಲ್ಲಿ ಉಳಿದುಕೊಂಡ ಅತಿಥಿಗಳಿಗೆ ಆಹಾರ ಪೂರೈಕೆಮಾಡಬಹುದು.

ಮದುವೆಗೆ 50, ಅಂತ್ಯ ಸಂಸ್ಕಾರಕ್ಕೆ 20 ಮಂದಿಗೆಅವಕಾಶವಿದೆ. ಇನ್ನು ಪ್ರತಿದಿನ ರಾತ್ರಿ 9 ರಿಂದ ಮಾರನೇ ದಿನದ ಬೆಳಗ್ಗೆ6ರ ವರೆಗೆ ರಾತ್ರಿ ಕರ್ಫ್ಯೂ ಇರುತ್ತದೆ. ಈ ಸಂದರ್ಭದಲ್ಲಿ ಎಲ್ಲಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಬಂìಧಿ ಸಲಾಗಿದೆ ಎಂದರು.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ಮಾತನಾಡಿ, ಮದುವೆಗಳು ಈಗಾಗಲೇ ನಿಗದಿಯಾಗಿದ್ದರೆಅವುಗಳಿಗೆ ಗರಿಷ್ಠ 50 ಮಂದಿಗೆ ಮಾತ್ರ ಅವಕಾಶವಿದೆ. ಹೊಸದಾಗಿನಿಗದಿ ಮಾಡಿಕೊಳ್ಳುವವರು ಆಯಾ ತಾಲೂಕು ತಹಶೀಲ್ದಾರ್‌ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಕಡ್ಡಾಯ.

ಇನ್ನು ಅಂತ್ಯ ಸಂಸ್ಕಾರಕ್ಕೆ ಕೇವಲ 20 ಮಂದಿಗೆ ಮಾತ್ರ ಅವಕಾಶನೀಡಲಾಗಿದೆ. ರಾತ್ರಿ ಬಸ್‌ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಪಾಲಿಸಬೇಕು ಎಂದುಸೂಚಿಸಿದರು. ಜಿಪಂ ಸಿಇಒ ಪಿ.ಶಿವಶಂಕರ್‌, ಅಪರ ಜಿಲ್ಲಾಧಿಕಾರಿಎಚ್‌.ಅಮರೇಶ್‌, ಉಪವಿಭಾಗಾಧಿಕಾರಿ ಎ.ಎನ್‌.ರಘುನಂದನ್‌,ಜಿಲ್ಲೆಯ ಎಲ್ಲಾ ತಾಲೂಕು ನೋಡಲ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next