Advertisement

ಪಟಾಕಿ ತ್ಯಾಜ್ಯವಿಲೇವಾರಿಗೆ ಕ್ರಮ

01:02 PM Oct 19, 2017 | Team Udayavani |

ಬೆಂಗಳೂರು: ದೀಪಾವಳಿ ಸಂದರ್ಭ ದಲ್ಲಿ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ವತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೆಳ್ಳಲಾಗಿದೆ ಎಂದು ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಹಬ್ಬದ ಸಂದರ್ಭದಲ್ಲಿ ಪಾದಚಾರಿ ಮಾರ್ಗಗಳಲ್ಲಿ ಪೂಜೆ ಸಾಮಗ್ರಿ ಪಟಾಕಿ ತ್ತತ್ಯಾಜ್ಯ ಬಿಟ್ಟು ಹೋಗುವುದರಿಂದ ನಗರದ ಸೌಂದರ್ಯಕ್ಕೂ ಧಕ್ಕೆಯ ಗಲಿದೆ. ಹೀಗಾಗಿ, ಸ್ವತ್ಛತೆ ಕಾಪಾಡಲು ಪೌರಕಾರ್ಮಿಕರಿಗೆ ಕಷ್ಟವಾಗಲಿದೆ.  ಸಾರ್ವಜನಿಕರು ಸಹ ಪಟಾಕಿ ತ್ಯಾಜ್ಯ ಚರಂಡಿ ಗಳಿಗೆ ಹಾಕಬಾರದು ಎಂದು ಹೇಳಿದರು. 

ಈಗಾಗಲೇ ಪಾಲಿಕೆಯ ಎಲ್ಲ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ  ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾ ಗಿದೆ. ಸಾರ್ವಜನಿಕರು ದೂರುಗಳು  ಅಥವಾ ಸಹಾಯಕ್ಕಾಗಿ ಪಾಲಿಕೆಯ ಸಹಾಯವಾಣಿ 22660000 ಅಥವಾ 22221188 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. 

ಭಾರೀ ಸದ್ದಿನ ಪಟಾಕಿ ಬೇಡ: ನಗರದಲ್ಲಿ ಕಳೆದ ಎರಡು ತಿಂಗಳು  ಗಳಿಂದ ಭಾರಿ ಮಳೆಯಾಗುತ್ತಿದ್ದು ಸಾರ್ವ ಜನಿಕರು ಭಾರೀ ಶಬ್ದದ ಪಟಾಕಿ ಗಳನ್ನು ಸಿಡಿಸಬಾರದು ಎಂದು  ಮನವಿ ಮಾಡಿದ ಆಯುಕ್ತರು, ಮಳೆಯಿಂದ ಮನೆಗಳ ಗೋಡೆಗಳು ತೇವಾಂಶದಿಂದ ಕೂಡಿರುತ್ತವೆ. ಇಂತಹ ಸಂದರ್ಭದಲ್ಲಿ ಭಾರಿ ಶಬ್ದದ ಪಟಾಕಿ ಹೊಡೆಯುವುದರಿಂದ ಮನೆಗಳು ಕುಸಿಯುವ ಸಾಧ್ಯತೆಯಿರುತ್ತದೆ. 

ಜತೆಗೆ ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಲಿದ್ದು, ಮಕ್ಕಳು ಹಾಗೂ ಹಿರಿಯರ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರು ಪರಿಸರ ಸ್ನೇಹಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ.  

Advertisement

ಸಾರ್ವಜನಿಕರು ಪಟಾಕಿ ಸಿಡಿಸುವ ವೇಳೆ ಯಾವುದೇ ರೀತಿಯ ಆಕಸ್ಮಿಕ ಅವಘಡಗಳು ಸಂಭವಿಸಿದರೆ ಪಾಲಿಕೆಯ ಆರೋಗ್ಯ ಕೇಂದ್ರಗಳಿಗೆ ಬಂದು ಚಿಕಿತ್ಸೆ ಪಡೆಬೇಕು. ಇದಕ್ಕಾಗಿ ಬೆಳಗ್ಗೆ 9ರಿಂದ 4 ರವರೆಗೆ ವೈದ್ಯರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next