Advertisement

Food Waste: ಒಂದೊಂದು ಆಹಾರಕ್ಕೂ ಇದೆ ಅರ್ಥ, ಮಾಡದಿರೋಣ ವ್ಯರ್ಥ

11:23 AM Jun 01, 2024 | Team Udayavani |

ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಮದುವೆ ಸಮಾರಂಭಗಳೇ ಹೆಚ್ಚಾಗಿವೆ. ಹೀಗೆ ನಾನು ಒಂದು ದಿನ ನನ್ನ ಪರಿಚಯದವರ ಮದುವೆ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ಕಂಡ ಕೆಲವು ದೃಶ್ಯಗಳು ನನ್ನ ಕಣ್ಣಿಗೆ ಕಟ್ಟಿದಂತಿತ್ತು. ಅಲ್ಲಿ ಜನಸಾಗರವೇ ತುಂಬಿತ್ತು. ಅದರ ಮಧ್ಯ ಮಿನುಗುತ್ತಿದ್ದ ಪುಟಾಣಿ ಮಕ್ಕಳು ಎಲ್ಲರ ಕಣ್ಮನ ಸೆಳೆಯುವಂತಿದ್ದರು.

Advertisement

ಅಪರಾಹ್ನದ ಹೊತ್ತು….ನನ್ನ ಹೊಟ್ಟೆ ಹಸಿವಿನಿಂದ ಚುರು ಗುಟ್ಟಲು ಶುರು ಮಾಡಿತು. ಅಲ್ಲಿಯೇ ನನ್ನ ಪರಿಚಯದ ಅಕ್ಕನ ಜತೆ ಊಟಕ್ಕೆ ತೆರಳಿದೆ. ಊಟಕ್ಕೆ ಹೋಗಿ ಕುಳಿತ ಮೇಲೆ ಅಲ್ಲಿ ಸಾಲುಸಲಾಗಿ ಬರುತ್ತಿದ್ದ ವಿವಿಧ ರೀತಿಯ ಭಕ್ಷ ಭೋಜನವನ್ನು ಕಂಡೇ ನನಗೆ ಹೊಟ್ಟೆ ತುಂಬಿದಂತಾಯಿತು.

ನಾನು ನನಗೆ ಬೇಕಾದಷ್ಟು ಹಾಕಿಸಿಕೊಂಡು ಒಂದು ಅಗುಳನ್ನು ಬಿಡದೆ ಊಟ ಮಾಡಿ ಮುಗಿಸಿದೆ. ಹೀಗೆ ನೋಡುತ್ತಾ ಪಕ್ಕದವರ ಎಲೆಯ ಮೇಲೆ ಕಣ್ಣಾಡಿಸಿದಾಗ ಉಳಿದಿದ್ದ ಸಾಕಷ್ಟು ಅನ್ನದ ಅಗುಳು ಮತ್ತು ಇನ್ನಿತರ ಬಗೆ ಬಗೆಯ ಖಾದ್ಯಗಳನ್ನು ಕಂಡು ನನ್ನ ಮನಸ್ಸಿಗೆ ತುಂಬಾ ಬೇಸರವಾಯಿತು. ಏಕೆಂದರೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಈ ಕಾಲದಲ್ಲಿ ಅನ್ನದ ಬೆಲೆಯೇ ತಿಳಿಯದೆ ಅಜ್ಞಾನಿಯಂತೆ ವರ್ತಿಸುವ ಜನರಿರುವುದು ವಿಷಾದದ ಸಂಗತಿ.

ಅಲ್ಲಿ, ಉಳಿದ ಅನ್ನವನ್ನು ಬಿಸಾಡಿದ ದೃಶ್ಯವನ್ನು ನೋಡಿ ನನಗೆ ಇದನ್ನು ಈ ರೀತಿಯಾಗಿ ಹಾಳು ಮಾಡುವ ಬದಲು ಹಸಿವಿನಿಂದ ಒದ್ದಾಡುವ ಅದೆಷ್ಟೋ ಮಂದಿಗೆ ದಾನ ಮಾಡುವುದರಿಂದ ಅವರಿಗಾದರೂ ತೃಪ್ತಿಯಾಗುತ್ತಿತ್ತು ಎಂದು ಎನಿಸಿತು. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಜನರು ಹಸಿವಿಗಾಗಿ ತಿನ್ನದೇ ಆಸೆಗಾಗಿ ತಿನ್ನುತ್ತಿದ್ದಾರೆ.

ಇದು ಒಂದು ಫ್ಯಾಶನ್‌ ಆಗಿ ಹೋಗಿದೆ. ಎಷ್ಟೋ ಕಡೆಗಳಲ್ಲಿ ಆಹಾರಗಳನ್ನು ಟನ್‌ಗಳಷ್ಟು ಹಾಳು ಮಾಡುತ್ತಿದ್ದಾರೆ. ಹಸಿದವನಿಗೆ ತಂಗಳನ್ನವು ಅಮೃತವಿದ್ದಂತೆ ಎಂಬ ಮಾತು ಸುಳ್ಳಲ್ಲ. ಏಕೆಂದರೆ ಹಸಿದವನಿಗೆ ಮಾತ್ರ ಅನ್ನದ ಬೆಲೆ ಗೊತ್ತಿರುತ್ತದೆ.

Advertisement

ಮುಂದೆಯಾದರೂ ಯುವ ಜನಾಂಗ ಇದರ ಬಗ್ಗೆ ಗಮನ ಹರಿಸಬೇಕಾಗಿದೆ. ಅನ್ನವನ್ನು ಮಿತವಾ ಗಿ ಬಳಸಿ ಹಸಿದವರಿಗೆ ಅನ್ನ ನೀಡುವಂತವರಾಗಬೇಕು.

ಪ್ರಜ್ಞಾ ಆಚಾರ್ಯ

ಪ್ರಥಮ ಬಿ.ಎ.,  ಸರಕಾರಿ ಪ್ರಥಮ ದರ್ಜೆ, ಕಾಲೇಜು

ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next