Advertisement

ಸಮುದಾಯ ಭವನ ಕಾಮಗಾರಿಗೆ ಕ್ರಮ

07:40 AM Jul 25, 2020 | Suhan S |

ಮದ್ದೂರು: ಮಾದನಾಯಕನಹಳ್ಳಿ ಶ್ರೀಸಿದ್ದರಾಮೇಶ್ವರ ದೇವಾಲಯದ ಸಮುದಾಯ ಭವನ, ಕೆ.ಹೊನ್ನಲಗೆರೆ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು.

Advertisement

ತಾಲೂಕಿನ ಕೆ.ಹೊನ್ನಲಗೆರೆ, ಮಾದನಾಯಕನಹಳ್ಳಿ ಹಾಗೂ ಬ್ಯಾಡರಹಳ್ಳಿಯ ಸಮುದಾಯ ಭವನ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಬ್ಯಾಡರಹಳ್ಳಿಯ ಮಾರುತಿ ಸಮುದಾಯ ಭವನ ನಿರ್ಮಾಣ ಹಾಗೂ ಕೆ.ಹೊನ್ನಲಗೆರೆ, ಭೀಮನಕೆರೆ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವು, ಕೆರೆ ಅಭಿವೃದ್ಧಿ ಜತೆಗೆ ಪ್ರವಾಸಿತಾಣವನ್ನಾಗಿಸಲು 5 ಕೋಟಿ ರೂ. ಮಂಜೂರಾಗಿದೆ. ವಾಯುವಿಹಾರ, ದೀಪದ ವ್ಯವಸ್ಥೆ ಇತರೆ ಕಾಮಗಾರಿಗಳು ನೆರವೇರಲಿದೆ ಎಂದರು.

ಮಾಜಿ ಶಾಸಕ ಬಿ.ರಾಮಕೃಷ್ಣ ಮಾತನಾಡಿ, ತಾವು ವಿಧಾನಪರಿಷರ್‌ ಸದಸ್ಯರಾಗಿದ್ದ ವೇಳೆ ಕೆ.ಹೊನ್ನಲಗೆರೆ ಅಕ್ಕಪಕ್ಕದ ಗ್ರಾಮಗಳ ನಿವಾಸಿಗಳಿಗೆ ಅಗತ್ಯ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮವಹಿಸಲಾಗಿತ್ತು. ಶಾಸಕರ ಅನುದಾನ ಸೇರಿದಂತೆ ವೈಯಕ್ತಿಕವಾಗಿ 80 ಲಕ್ಷ ರೂ.ಗಳ ಕಾಮಗಾರಿ ಕೈಗೊಂಡಿದ್ದಾಗಿ ವಿವರಿಸಿದರು. ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕಾಡಪ್ಪ, ತಾಪಂ ಮಾಜಿ ಸದಸ್ಯ ರಾಜೇಂದ್ರ ಕುಮಾರ್‌, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ್‌, ಸದಸ್ಯ ಟಿ.ಆರ್‌.ಗಿರೀಶ್‌, ಮಾಜಿ ಸದಸ್ಯ ಕೆಂಗಲ್‌ಗೌಡ, ಪಿಕಾರ್ಡ್‌ಬ್ಯಾಂಕ್‌ ನಿರ್ದೇಶಕ ಅಪ್ಪಾಜೀಗೌಡ, ಮುಖಂಡರಾದ ರಾಜಣ್ಣ, ನಿಂಗೇಗೌಡ, ಪುಟ್ಟಸ್ವಾಮಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next