ಚಿಕ್ಕೋಡಿ: ಆಲಮಟ್ಟಿ ಜಲಾಶಯ ಮಟ್ಟ ಎತ್ತರಿಸುವುದರಿಂದ 130 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಗಲಿದ್ದು, ಏತ ನೀರಾವರಿ ಯೋಜನೆಯ ಮೂಲಕ ನೀರನ್ನು ಬಳಕೆ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ತಾಲೂಕಿನ ಖಡಕಲಾಟ ಗ್ರಾಮಕ್ಕೆ ರವಿವಾರ ಭೇಟಿ ನೀಡಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಖಡಕಲಾಟ ಮತ್ತು ಕುಠಾಳಿ ಗ್ರಾಮಗಳ ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಗಳ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಸಿಗಬೇಕೆಂದು ಕಳೆದ 20 ವರ್ಷಗಳ ಹಿಂದೆ ಸಿಬಿಸಿ ಕಾಲುವೆ ನಿರ್ಮಾಣವಾಗಿದೆ. ಕೊನೆ ಹಳ್ಳಿಗೆ ನೀರು ಬರದೇ ಇರುವ ಕಾರಣ ಈ ಹಳ್ಳಿಗಳು ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿವೆ. 120 ಕೋಟಿ ರೂ ವೆಚ್ಚದಲ್ಲಿ ಕೃಷ್ಣಾ ನದಿಯಿಂದ ನೀರು ತಂದು ಕಾಲುವೆಗೆ ಹರಿಸುವ ಕಾಮಗಾರಿ ಭರದಿಂದ ಸಾಗಿದೆ ಎಂದರು. ಕಲ್ಲೋಳ-ಯಡೂರ ಗ್ರಾಮಗಳ ಮಧ್ಯೆ ಕೃಷ್ಣಾ ನದಿಗೆ 30 ಕೋಟಿ ರೂ. ವೆಚ್ಚದಲ್ಲಿ ಬ್ರಿàಜ್ ಕಮ್ ಬ್ಯಾರೇಜ ನಿರ್ಮಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ
ಅಧ್ಯಕ್ಷ ಡಾ| ರಾಜೇಶ ನೇರ್ಲಿ, ಸತೀಶ ಅಪ್ಪಾಜಿಗೊಳ, ಎನ್.ಜಿ ಪಾಟಿಲ, ಜಿಪಂ ಮಾಜಿ ಸದಸ್ಯರಾದ ವಿಶ್ವನಾಥ ಕಮತೆ, ರಾವಸಾಬ ಝಿಫರೆ, ವಿರೂಪಾಕ್ಷಿ ಸಂಕಾಜೆ, ಕಲಗೌಡ ಜಾನಕಾರೆ, ಬಾಬು ಚೌಗಲಾ, ಶಂಕರ ದೇಮನ್ನವರ, ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಮಂಕಾಳೆ, ಹಾಗೂ ಪೂಜಾರಿ ಮತ್ತು ರೈತರು ಇದ್ದರು.