Advertisement

ಖಾಸಗಿ ವಾಹನಗಳನ್ನು ಬಾಡಿಗೆಗೆ ಬಳಸಿಕೊಂಡರೆ ಕ್ರಮ : ಪಿಎಸ್‌ಐ ದಾಶ್ಯಾಳ

01:03 PM Jan 10, 2021 | Team Udayavani |

ಗಜೇಂದ್ರಗಡ: ಹಳದಿ ಬೋರ್ಡ್‌ ಹೊಂದಿರುವ ವಾಹನಗಳು ಮಾತ್ರ ಬಾಡಿಗೆಗೆ ತೆರಳಬೇಕಾಗಿದ್ದು, ಇನ್ನಿತರ ವಾಹನಗಳು
ಬಾಡಿಗೆ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ವೈಟ್‌ ಬೋರ್ಡ್‌ ವಾಹನಗಳನ್ನು ಬಾಡಿಗೆಗೆ ಬಳಸಿದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪಿಎಸ್‌ಐ ಗುರುಶಾಂತ್‌ ದಾಶ್ಯಾಳ ಹೇಳಿದರು.

Advertisement

ಪಟ್ಟಣ ಪೊಲೀಸ್‌ ಠಾಣೆಯಲ್ಲಿ ನಡೆದ ಹಳದಿ(ಎಲ್ಲೋ)ಬೋರ್ಡ್‌ ವಾಹನಗಳ ಮಾಲಿಕರ ಸಭೆಯಲ್ಲಿ ಮಾತನಾಡಿದ  ಅವರು, ಬಿಳಿ ಬಣ್ಣದ ಬೋರ್ಡ್‌ ವಾಹನಗಳ ಚಾಲಕರು ಬಾಡಿಗೆ ಮಾಡಿದರೆ ಸಾರಿಗೆ ಇಲಾಖೆ ಪ್ರಕಾರ ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಈಗಾಗಲೇ ದೂರುಗಳು ಕೇಳಿ ಬಂದಿದ್ದು, ಸಾರಿಗೆ ಇಲಾಖೆ ಜೊತೆಗೆ ಪೊಲೀಸ್‌ ಇಲಾಖೆ ಗಮನಕ್ಕೆ ಬಂದರೆ, ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಗಜೇಂದ್ರಗಡ ಭಾಗದಲ್ಲಿ ಬಿಳಿ ಬಣ್ಣದ ವಾಹನಗಳು ಬಾಡಿಗೆಗಾಗಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದಕ್ಕೆ ಅವಕಾಶ
ಇರುವುದಿಲ್ಲ. ಅದನ್ನು ಉಲ್ಲಂಘಿಸಿದವರ ವಿರುದ್ಧ ಸಾರಿಗೆ ಇಲಾಖೆಗೆ ವಾಹನವನ್ನು ಹಸ್ತಾಂತರಿಸಲಾಗುವುದು ಎಂದು
ಎಚ್ಚರಿಸಿದರು.

ಇದನ್ನೂ ಓದಿ;ವರುಣಾರ್ಭಟಕ್ಕೆ ಹಿಂಗಾರು ಬೆಳೆ – ತೋಟಗಾರಿಕಾ ಬೆಳೆಗಳು ಸಂಪೂರ್ಣ ನಾಶ

ವಾಹನ ಮಾಲಿಕರು, ವಾಹನ ಪರವಾನಗಿ, ಇನ್ಸೂರೆನ್ಸ್‌, ಥರ್ಡ್‌ ಪಾರ್ಟಿ ಇನ್ಸೂರೆನ್ಸ್‌ ಸೇರಿದಂತೆ ಇನ್ನಿತರ ದಾಖಲೆಗಳನ್ನು ಹೊಂದಿರಬೇಕು. ಇದು ವಾಹನ ಮಾಲಿಕರಿಗೆ ಮತ್ತು ಪ್ರಯಾಣಿಕರಿಗೆ ಸುರಕ್ಷತೆಯಾಗಿದೆ. ಇದನ್ನು ಎಲ್ಲರೂ ಅನುಸರಿಸಿ, ಸಾರಿಗೆ ನಿಯಮಗಳನ್ನು ಕಟ್ಟಿನಿಟ್ಟಾಗಿ ಪಾಲಿಸಬೇಕೆಂದು ಹೇಳಿದರು.

Advertisement

ಠಾಣೆ ಸಿಬ್ಬಂದಿ ಶರಣಪ್ಪ ಭಜೇಂತ್ರಿ, ಎಸ್‌. ಎಸ್‌. ಹುಲ್ಲೂರ, ವಾಹನ ಮಾಲಿಕರಾದ ಅನ್ವರಬಾಷಾ ಹಿರೇಕೊಪ್ಪ, ರಾಜೇಸಾಬ
ತಾರಗಾರ, ಪ್ರಕಾಶ ಚಪ್ಪರದ, ಸುರೇಶ ಸವಣೂರ, ದಾದಾಪೀರ ಊಟಗೂರ, ಶಿವು ಹಡಗಲಿ, ಖಾದಿರಸಾಬ ಪಠಾಣ, ನಾಗರಾಜ
ಸವಣೂರ, ಮೌಲಾಸಾಬ ಗೊಡೇಕಾರ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next