Advertisement

Paytm ವಿರುದ್ಧದ ಕ್ರಮ: ಪುನರ್‌ ಪರಿಶೀಲನೆ ನಿರ್ಧಾರ ತಳ್ಳಿ ಹಾಕಿದ ಆರ್‌ಬಿಐ

11:59 PM Feb 12, 2024 | Team Udayavani |

ಹೊಸದಿಲ್ಲಿ: ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌(ಪಿಪಿಬಿಎಲ್‌) ವಿರು ದ್ಧದ ಕ್ರಮಗಳ ಪುನರ್‌ ಪರಿಶೀಲನೆ ನಿರ್ಧಾರವನ್ನು ಆರ್‌ಬಿಐ ತಳ್ಳಿ ಹಾಕಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌, “ಪಿಪಿಬಿಎಲ್‌ ಕಾರ್ಯನಿರ್ವಹಣೆಯ ಸಮಗ್ರ ಮೌಲ್ಯಮಾಪನದ ಅನಂತರವಷ್ಟೇ ಅದರ ವಿರುದ್ಧ ಕ್ರಮದ ನಿರ್ಧಾರ ತೆಗೆದುಕೊಳ್ಳಲಾಯಿತು. ಪಿಪಿಬಿಎಲ್‌ ವಿರುದ್ಧದ ಕ್ರಮಗಳ ಬಗ್ಗೆ ಯಾವುದೇ ಪುನರ್‌ ಪರಿಶೀಲನೆ ಇಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next