Advertisement
ಜತೆಗೆ ಸಭೆಗೆ ಗೈರು ಹಾಜರಾದ ಕೈಗಾರಿಕೆ, ಮುಜರಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡಲು ನಿರ್ಧರಿಸಲಾಗಿದೆ. ಸಭೆಯ ನಂತರ ಮಾತನಾಡಿದ ಸಚಿವ ಎಚ್. ಆಂಜನೇಯ, ಪರಿಶಿಷ್ಟ ಜಾತಿ ಹಾಗೂ ವರ್ಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿಶೇಷ ಕಾಯ್ದೆ ತಂದು ಜಾರಿಗೊಳಿಸಿರುವ ಯೋಜನೆ ಅನುಷ್ಠಾನದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಕೃಷಿ ಕಾರ್ಮಿಕ ರನ್ನು ವಿದೇಶಕ್ಕೆ ಕಳುಹಿಸುವ ವಿಚಾರದಲ್ಲಿ ನಿರ್ಲಕ್ಷಿಸಿ ಪಟ್ಟಿಯನ್ನೆ ತಯಾರಿಸಿಲ್ಲ. ಪರಿಶಷ್ಟರಿಗೆ ಕೃಷಿ
ಚಟುವಟಿಕೆಗೆ ಟ್ರ್ಯಾಕ್ಟರ್ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ ನೀಡಲು ಸೂಚಿಸಿದರೆ, ಎರಡು ಲಕ್ಷ ರೂ. ಮಾತ್ರ ನೀಡಲಾಗಿದೆ. ಇದೆಲ್ಲವೂ
ಅಧಿಕಾರಿಗಳಲ್ಲಿ ಪರಿಶಿಷ್ಟ ಜಾತಿಯವರ ಬಗ್ಗೆ ಇರುವ ತಾತ್ಸಾರಕ್ಕೆ ಸಾಕ್ಷಿ ಎಂದು ಕಿಡಿಕಾರಿದರು. ಉನ್ನತ ಶಿಕ್ಷಣ ಇಲಾಖೆಯಿಂದ ಉನ್ನತ ಅಧಿಕಾರಿಗಳು ಸಭೆಗೆ ಬರದೆ ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ಕಳುಹಿಸಿದ್ದರು. ನಾನು ವಾಪಸ್ ಕಳುಹಿಸಿ ದ್ದೇನೆ. ಮುಂದಿನ ಸಭೆಗೆ ಸಮಜಾಯಿಷಿ ಸಮೇತ ಹಿರಿಯ ಅಧಿಕಾರಿಗಳು ಬರುವಂತೆ ತಾಕೀತು ಮಾಡಿದ್ದೇನೆ. ತಪ್ಪು ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಶೇ.42 ಸಾಧನೆ: 2017-18 ನೇ ಸಾಲಿನಲ್ಲಿ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ 27703.54 ಕೋಟಿ ರೂ. ಅನುದಾನ ಒದಗಿಸಲಾಗಿದ್ದು ನವೆಂಬರ್ ಅಂತ್ಯಕ್ಕೆ 11626.96 ಕೋಟಿ ರೂ. ವೆಚ್ಚವಾಗಿದೆ. ಶೇ.42 ಪ್ರಗತಿ ಸಾಧಿಸಲಾಗಿದೆ ಎಂದರು.
Related Articles
ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ 2017-18 ನೇ ಸಾಲಿನಲ್ಲಿ ಕಾರ್ಮಿಕ, ಕೌಶಲ್ಯಾಭಿವೃದ್ಧಿ, ಯುವ ಸಬಲೀಕರಣ, ಇಲಾಖೆಗಳು ಕೇವಲ ಶೇ.3 ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು ಉನ್ನತ ಶಿಕ್ಷಣ ಇಲಾಖೆ ಶೇ.6 ರಷ್ಟು ಪ್ರಗತಿ ಸಾಧಿಸಿದೆ. ಈ ಕುರಿತು ಸಚಿವ ಆಂಜನೇಯ ಅವರನ್ನು ಪ್ರಶ್ನಿಸಿದಾಗ, ಉನ್ನತ ಶಿಕ್ಷಣ ಇಲಾಖೆಯಲ್ಲಿ ಲ್ಯಾಪ್‌ಟಾಪ್ ಕೊಡುವ ಕಾರ್ಯಕ್ರಮ ಕೆಲವೊಂದು ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಆ ಕಾರ್ಯಕ್ರಮ ಜಾರಿಯಾದರೆ ಪ್ರಗತಿ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಿದರು.
Advertisement