ಹೊಸದಿಲ್ಲಿ/ಲಕ್ನೋ: ನಾಯಕತ್ವ ಬದಲಾಗಬೇಕು ಎಂದು ಕಾಂಗ್ರೆಸ್‌ನಲ್ಲಿ ವಿವಾದದ ಚಂಡಮಾರುತ ತಂದಿಟ್ಟ ರಿಂಗಣ ಇನ್ನೂ ತಣ್ಣಗಾಗಿಲ್ಲ. ಅದರ ನಡುವೆಯೇ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಸೇರಿದಂತೆ ಪತ್ರ ಬರೆದ ಎಲ್ಲಾ ಮುಖಂಡರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಪ್ರಕಟವಾಗಿದೆ. ಹೀಗಾಗಿ, ಗಾಂಧಿ ಕುಟುಂಬದವರೇ ಪಕ್ಷದ ಪ್ರಶ್ನಾತೀತ ನಾಯಕರು ಎಂದು ಒಪ್ಪಿಕೊಂಡಿರುವಂತೆಯೇ ಮತ್ತೆ ಭಿನ್ನಮತ ಕಾಣಿಸಿಕೊಂಡಿದೆ.
ಆ.24ರಂದು ಕಾಂಗ್ರೆಸ್ ಸಭೆಗೆ ಕಾರಣವಾಗಿದ್ದ ಪತ್ರಕ್ಕೆ ಜಿತಿನ್ ಪ್ರಸಾದ ಕೂಡ ಸಹಿ ಹಾಕಿದ್ದರು. ಹೀಗಾಗಿ, ಅವರ ವಿರುದ್ಧ ಶಿಸ್ತಿನ ಕ್ರಮದ ಒತ್ತಾಯವನ್ನು ಲಖೀಂಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಈ ಬಗ್ಗೆ ಒತ್ತಾಯ ಮಾಡಿದೆ ಎಂದು ವರದಿಯಾದೆ.
ಈ ಬೇಡಿಕೆಯನ್ನು ಟೀಕಿಸಿದ ಕೇಂದ್ರ ಮಾಜಿ ಸಚಿವ ಕಪಿಲ್ ಸಿಬಲ್ ಪಕ್ಷದ ಮುಖಂಡರೇ ಜಿತಿನ್ ಪ್ರಸಾದ ಅವರನ್ನು ಉತ್ತರ ಪ್ರದೇಶದಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಅದರ ಬದಲಾಗಿ ಬಿಜೆಪಿಯ ವಿರುದ್ಧವೇ ಸರ್ಜಿಕಲ್ ದಾಳಿಯನ್ನು ಪಕ್ಷದ ಮುಖಂಡರು ನಡೆಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಅದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ನ ಮತ್ತೂಬ್ಬ ಮುಖಂಡ ಮನೀಶ್ ತಿವಾರಿ “ಪ್ರಶಿಯಂಟ್’ (Prescient) ಅಂದರೆ “ಭವಿಷ್ಯವಾಣಿ’ ಎಂದು ಒಂದು ಸಾಲಿನ ಟ್ವೀಟ್ ಮಾಡಿದ್ದಾರೆ. ಆದರೆ ಈ ಬೆಳವಣಿಗೆ ಬಗ್ಗೆ ಜಿತಿನ್ ಪ್ರಸಾದ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರು ಕಪಿಲ್ ಸಿಬಲ್ ಮತ್ತು ಮನೀಶ್ ತಿವಾರಿ ಮಾಡಿರುವ ಟ್ವೀಟ್‌ಗಳನ್ನು ರಿ ಟ್ವೀಟ್ ಮಾಡಿದ್ದಾರೆ. ಪ್ರಸಾದ ಅವರ ತಂದೆ ಜಿತೇಂದ್ರ ಪ್ರಸಾದ ಕೂಡ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋಲನುಭವಿಸಿದ್ದರು.