Advertisement

ನವೆಂಬರ್‌ನಲ್ಲಿ ಆ್ಯಕ್ಟ್-1978 ರಿಲೀಸ್‌

01:29 PM Oct 20, 2020 | Suhan S |

ಕೋವಿಡ್ ಲಾಕ್‌ಡೌನ್‌ ಸಡಿಲವಾಗಿ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳು ತೆರೆಯುತ್ತಿದ್ದಂತೆ ನಿಧಾನವಾಗಿ ಒಂದೊಂದೆ ಸಿನಿಮಾಗಳು ಬಿಡುಗಡೆಗೆ ಮುಂದಾಗುತ್ತಿವೆ. ಕಳೆದ ಆಗಸ್ಟ್‌ನಲ್ಲಿ ಸೆಟ್ಟೇರಿದ್ದ “ಆ್ಯಕ್ಟ್-1978′ ಸದ್ದಿಲ್ಲದೆ ತನ್ನ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲಿಯೇ ತೆರೆಗೆ ಬರಲು ತಯಾರಾಗಿದೆ.

Advertisement

ಇತ್ತೀಚೆಗೆ “ಆ್ಯಕ್ಟ್-1978’ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯಾವುದೇ ಕ ಟ್ಸ್‌ಇಲ್ಲದೇ“ಯು’ಪ್ರಮಾಣಪತ್ರ ನೀಡಿ ಬಿಡುಗಡೆಗೆ ಅಸ್ತು ಎಂದಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ನವೆಂಬರ್‌ ತಿಂಗಳಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್‌ ಹಾಕಿಕೊಂಡಿದೆ. ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದಂದು ಚಿತ್ರ ಬಿಡುಗಡೆಯ ಅಧಿಕೃತ ದಿನಾಂಕವನ್ನು ಅನೌನ್ಸ್‌ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದಿರುವ “ಆ್ಯಕ್ಟ್-1978’ಚಿತ್ರಕ್ಕೆ ದೇವರಾಜ್‌.ಆರ್‌ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.ಯಜ್ಞಾಶೆಟ್ಟಿ, ಬಿ. ಸುರೇಶ್‌,ಪ್ರಮೋದ್‌ ಶೆಟ್ಟಿ,ಅಚ್ಯುತ್‌ ಕುಮಾರ್‌, ಕೃಷ್ಣಾಹೆಬ್ಟಾಳೆ, ಶ್ರುತಿ,ದತ್ತಣ್ಣಾ, ಸಂಚಾರಿವಿಜಯ್,ಶರಣ್ಯಾ, ಶೋಭರಾಜ್‌, ಅವಿನಾಶ್‌, ರಾಘು ಶಿವಮೊಗ್ಗ ಸೇರಿದಂತೆ ಹಲವು ಕಲಾವಿದರು ಚಿತ್ರದ ಪ್ರಮುಖ

ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ನಾಗೇಂದ್ರ ಸಂಕಲನವಿದೆ. ಚಿತ್ರದಹಾಡುಗಳಿಗೆ ರಾಹುಲ್‌ ಶಿವಕುಮಾರ್‌ ಮತ್ತು ಬಕ್ಕೇಶ್‌ ರೋಣದ ಸಂಗೀತ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next