Advertisement

ರ್‍ಯಾಂಕ್‌ ವಿಜೇತರಿಗೆ ಪ್ರಶಂಸಾ ಪತ್ರ

12:09 PM May 22, 2018 | Team Udayavani |

ಬೆಂಗಳೂರು: ಪಿಇಎಸ್‌ ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ಕೋಟಾದ ಸೀಟುಗಳಿಗೆ ನಡೆಸಿದ ಪಿಇಎಸ್‌ಎಸ್‌ಎಟಿ-2018ರಲ್ಲಿ ಮೊದಲ ಮೂರು ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ವಿವಿಯ ಕುಲಾಧಿಪತಿ ಡಾ.ಎಂ.ಆರ್‌.ದೊರೆಸ್ವಾಮಿಯವರು ಪ್ರಶಂಸಾ ಪತ್ರ ನೀಡಿ ಸನ್ಮಾನಿಸಿದರು.

Advertisement

ದೇಶದ 37 ಕೇಂದ್ರಗಳಲ್ಲಿ  ನಡೆದ ಪಿಇಎಸ್‌ಎಸ್‌ಎಟಿ  ಪ್ರವೇಶ ಪರೀಕ್ಷೆಯಲ್ಲಿ 16 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದು, ಬೆಂಗಳೂರಿನ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಆರ್‌.ಮುರಳೀಕೃಷ್ಣನ್‌, ನಂದಗೋಪಾಲ ವಿಧು ಹಾಗೂ ಯಲಹಂಕದ ಚೇತನ ಪಿಯು ಕಾಲೇಜಿನ ಪ್ರಣವ ಕಸೆಟ್ಟಿ  ಕ್ರಮವಾಗಿ ಮೊದಲು ಮೂರು ರ್‍ಯಾಂಕ್‌ ಪಡೆದಿದ್ದಾರೆ.

ಪರೀಕ್ಷೆಯ ಫ‌ಲಿತಾಂಶವನ್ನು ವಿದ್ಯಾರ್ಥಿಗಳ ಮೊಬೈಲ್‌ಗೆ ಕಳುಹಿಸಲಾಗಿದೆ. ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ಜೂನ್‌ 2ರಿಂದ ಆರಂಭವಾಗಲಿದೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಿಇಎಸ್‌ನಲ್ಲಿ ಲಭ್ಯವಿರುವ ವಿವಿಧ ಎಂಜಿನಿಯರಿಂಗ್‌ ಕೋರ್ಸ್‌ಗಳ ಸೀಟುಗಳಲ್ಲಿ ಶೇ.40ರಷ್ಟನ್ನು ಸಿಇಟಿ, ಶೇ.45ರಷ್ಟು  ಪಿಇಎಸ್‌ಎಸ್‌ಎಟಿ ಹಾಗೂ ಶೇ.15ರಷ್ಟು ಸೀಟುಗಳನ್ನು ಮ್ಯಾನೇಜಮೆಂಟ್‌ ಕೋಟಾದಡಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ.

ಎಂಜಿನಿಯರಿಂಗ್‌ ಪೂರೈಸಿದ 1579, ಎಂಬಿಎ ಮಾಡಿದ 168, ಫಾರ್ಮಸಿ ಕೋರ್ಸ್‌ ಮುಗಿಸಿದ 72, ಬಿ.ಕಾಂ ಪಾಸಾದ 238 ವಿದ್ಯಾರ್ಥಿಗಳು ಕ್ಯಾಂಪಸ್‌ ಆಯ್ಕೆಯಾಗಿದ್ದಾರೆ. ಇನ್ಫೋಸಿಸ್‌, ಅಮೆಜಾನ್‌, ಸಿಸ್ಕೊ ಸೇರಿದಂತೆ 100ಕ್ಕೂ ಅಧಿಕ ಪ್ರತಿಷ್ಠಿತ ಸಂಸ್ಥೆಗಳಿಂದ ಕ್ಯಾಂಪಸ್‌ ಸಂದರ್ಶನ ನಡೆದಿದೆ ಎಂದು ಹೇಳಿದರು.

Advertisement

ಅಕ್ರಮ ಪತ್ತೆ ಹಚ್ಚುವ ಸ್ಯಾಟಲೈಟ್‌: ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಸ್ಮಗ್ಲಿಂಗ್‌, ಭಯೋತ್ಪಾದನಾ ಕೃತ್ಯಕ್ಕೆ ಪ್ರೇರಣೆ ಸೇರಿದಂತೆ ಅಕ್ರಮ ಚಟುವಟಿಕೆಗಳ ಪತ್ತೆಹಚ್ಚಲು ಡಿಆರ್‌ಡಿಒ ಸಹಭಾಗಿತ್ವದಲ್ಲಿ ಪಿಇಎಸ್‌ ವಿದ್ಯಾರ್ಥಿಗಳು ಸ್ಯಾಟಲೈಟ್‌ ಸಿದ್ಧಪಡಿಸುತ್ತಿದ್ದಾರೆ. ನಿವೃತ್ತ ವಿಜ್ಞಾನಿಗಳಿಬ್ಬರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ವರ್ಷದ ಅಂತ್ಯದೊಳಗೆ ಸ್ಯಾಟಲೈಟ್‌ ಉಡಾವಣೆಗೆ ಸಿದ್ಧವಾಗಲಿದೆ.

ಹಾಗೆಯೇ ಕಡಿಮೆ ದರದ ಡಯಾಲಿಸಿಸ್‌ ಯಂತ್ರವನ್ನು ಪಿಇಎಸ್‌ ವಿದ್ಯಾರ್ಥಿಗಳು ಸಂಶೋಧಿಸಿದ್ದಾರೆ. ನಾರಾಯಣ ಹೃದಯಾಲಯ ಮತ್ತು ಖಾಸಗಿ ಸಂಸ್ಥೆಗಳ ಜತೆ ಸೇರಿ ಉತ್ಪಾದನ ಕಾರ್ಯವೂ ನಡೆಯುತ್ತದೆ. ಸಾಮಾನ್ಯ ಡಯಾಲಿಸಿಸ್‌ ಯಂತ್ರಕ್ಕಿಂತ ಇದರ ಬೆಲೆ 2 ಲಕ್ಷ ರೂ. ಕಡಿಮೆ ಇರಲಿದೆ ಎಂದು ಪಿಇಎಸ್‌ ವಿವಿ ಕುಲಾಧಿಪತಿ ಡಾ.ಎಂ.ಆರ್‌.ದೊರೆಸ್ವಾಮಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next