Advertisement

“ಫಾಸ್ಟ್‌ ಫುಡ್‌ ಸಂಸ್ಕೃತಿಯಿಂದ ಹೊರ ಬರಲು ಆಟಿ ಕಾರ್ಯಕ್ರಮ ಪೂರಕ’

07:40 AM Aug 07, 2017 | Team Udayavani |

ಪುಂಜಾಲಕಟ್ಟೆ: ಇಲ್ಲಿನ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಮುರುಘೇಂದ್ರ ವನಿತಾ ಸಮಾಜ, ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಗತಿಬಂಧು ಸ್ವಸಹಾಯ ಸಂಘದ ಪಿಲಾತಬೆಟ್ಟು ಮತ್ತು ಕುಕ್ಕಳ ಒಕ್ಕೂಟ ಇವುಗಳ  ವತಿಯಿಂದ ತುಳುನಾಡ ಮಟ್ಟದ ತುಳು ಹಬ್ಬ “ಆಟಿದ ಆಯನೊ’ ಕಾರ್ಯಕ್ರಮ  ರವಿವಾರ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಸಭಾ ಭವನದಲ್ಲಿ ಜರಗಿತು.

Advertisement

ಯಕ್ಷ ಲೋಕ ಜೀವನ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕ ಎ.ಗೋಪಾಲ ಅಂಚನ್‌ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಇಂದಿನ ಫಾಸ್ಟ್‌ ಫುಡ್‌ ಮತ್ತು ಟೇಸ್ಟ್‌ ಫುಡ್‌ ಸಂಸ್ಕೃತಿಯಿಂದ ಹೊರಬಂದು ಆರೋಗ್ಯ ಪೂರ್ಣ ಆಹಾರ ಪದ್ಧತಿ ಅರಿಯಲು ಆಟಿ ತಿಂಗಳ ಆಚರಣೆಗಳು ಪೂರಕವಾಗಿದೆ ಎಂದರು.

ಧ.ಗ್ರಾ. ಯೋಜನೆ ಬಂಟ್ವಾಳದ ಯೋಜನಾಧಿಕಾರಿ ಸುನಿತಾ ನಾಯಕ್‌  ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕರಾದ ರಾಮ ಪಿ. ಸಾಲ್ಯಾನ್‌,

ಮೋನಪ್ಪ ಎಚ್‌, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ  ಮೋಹನ ಸಾಲ್ಯಾನ್‌ ಎಚ್‌.,ಗೌರವಾಧ್ಯಕ್ಷ ಸಂತೋಷ್‌ ಮೂರ್ಜೆ, ವನಿತಾ ಸಮಾಜದ ಅಧ್ಯಕ್ಷೆ ಅಮೃತ ಎಸ್‌., ಗೌರವಾಧ್ಯಕ್ಷೆ ಶಶಿಕಲಾ ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತುಳು ಗಾದೆ, ತುಳು ಒಗಟುಗಳು, ಚೆನ್ನಮಣೆ, ಸಂದಿಪಾಡªನ ಮೊದಲಾದ ವಿವಿಧ ಸ್ಪರ್ಧೆಗಳು ಜರಗಿದವು. ಮಿತ್ರ ಮಂಡಳಿ ಮಾಜಿ ಕಾರ್ಯದರ್ಶಿ ರಾಜೇಶ್‌ ಪಿ.ಅವರು ಸ್ವಾಗತಿಸಿದರು. ವನಿತಾ ಸಮಾಜದ ಕಾರ್ಯದರ್ಶಿ ವಿಜಯ ವಂದಿಸಿದರು. ಶಿಕ್ಷಕ ಉದಯ ಕುಮಾರ್‌ ಶೆಟ್ಟಿ ಮತ್ತು ರಾಜೇಂದ್ರ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು.ಬಳಿಕ ತುಳು ಯಕ್ಷಗಾನ ತಾಳಮದ್ದಲೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next