Advertisement

ಪ್ರಶಸ್ತಿಯಿಂದ ಸಾಧಕನ ಜವಾಬ್ದಾರಿ ವೃದ್ದಿ

05:21 PM Oct 19, 2021 | Team Udayavani |

ಬೀದರ: ದುಡಿಯುವ ಕೈಗಳಿಗೆ ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ. ಸಾಧಕನ ಸಾಧನೆಗೆ ಪ್ರೇರಣೆ ನೀಡುತ್ತವೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಬಾಬುರಾವ್‌ ವಡ್ಡೆ ಹೇಳಿದರು.

Advertisement

ಸಾಹಿತ್ಯ ಅಕಾಡೆಮಿ ಬೆಂಗಳೂರು, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಆಶ್ರಯದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಮತ್ತು ಧರಿನಾಡಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಡಾ| ರಾಜಕುಮಾರ ಹೆಬ್ಟಾಳೆ ನಿರಂತರ ಕಲಾತ್ಮಕ ಮತ್ತು ಸಾಹಿತ್ಯಿಕ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಹಿರಿಯ ಸಾಹಿತಿ ವಿ.ಎಂ. ಡಾಕುಳಗಿ ಮಾತನಾಡಿ, ದೀಪ ಹಚ್ಚಿದಾಗ ಜ್ಯೋತಿಯು ತನ್ನ ಬೆಳಕು ಎಲ್ಲೆಡೆ ಹರಡಿಸಿ ತನ್ನ ಹೆಸರು ಮಾಡುವಂತೆ, ದುಡಿಯುವ ಸಾಧಕ ತನ್ನ ಸಾಧನೆಗಳ ಮೂಲಕ ಎಲ್ಲೆಡೆ ಹೆಸರುವಾಸಿಯಾಗುತ್ತಾನೆ. ಈ ನಿಟ್ಟಿನಲ್ಲಿ ರಾಜಕುಮಾರ ಅವರು ಸದ್ದಿಲ್ಲದೇ ಜಿಲ್ಲೆಯಲ್ಲಿ ಸಾಹಿತ್ಯಿಕ ಮತ್ತು ಕಲಾ ಕ್ಷೇತ್ರದಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ ಎಂದು ಶ್ಲಾಘಿಸಿದರು.

ವಿಶ್ರಾಂತ ಪ್ರಾಚಾರ್ಯ ಪ್ರೊ| ದೇವೇಂದ್ರ ಕಮಲ್‌ ಅಧ್ಯಕ್ಷತೆ ವಹಿಸಿ ಮಾನತಾಡಿ, ಕವಿತೆಗಳು ಸಮಾಜವನ್ನು ತಿದ್ದುವಂತಿರಬೇಕು. ನೋವಿರುವ ವ್ಯಕ್ತಿಯಿಂದ ಮಾತ್ರ ಕವನ ರಚನೆ ಮಾಡಲು ಸಾಧ್ಯ. ಕವಿತೆ ರಚಿಸಲು ಅದರ ಹುಚ್ಚು ಹಿಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ನೋವು, ಕಷ್ಟ ಮತ್ತು ಅನುಭವದಿಂದ ರಚಿಸಿದ ಕವಿತೆಗಳು ಅಮರವಾಗುತ್ತವೆ. ಮೊದಲು ಬೀದರ ಜಿಲ್ಲೆಯಲ್ಲಿ ಕವಿಗಳು ಇರಲಿಲ್ಲ. ಆದರೆ ಈಗ ಒಂದು ಕಲ್ಲು ಎಸೆದರೆ ಖಂಡಿತ ಒಬ್ಬ ಕವಿ ಅಥವಾ ಕವಯಿತ್ರಿ ಮೇಲೆ ಬೀಳುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಕೆ.ಜಿ.ಹಳ್ಳಿ: ನಿರ್ಮಾಣದ ಹಂತದ ಕಟ್ಟಡದ ಸಂಪ್ ಗೆ ಬಿದ್ದು 14 ವರ್ಷದ ಬಾಲಕ ಸಾವು

Advertisement

ಕಸಾಪ ನಿಕಟಪೂರ್ವ ಕಾರ್ಯದರ್ಶಿ ಡಾ| ರಾಜಕುಮಾರ ಹೆಬ್ಟಾಳೆ ಮಾತನಾಡಿ, ಈ ಹಿಂದೆ ಕಲಾವಿದರ ಮತ್ತು ಸಾಹಿತಿಗಳ ಹಿತಕ್ಕಾಗಿ ಹಲವಾರು ಕಾರ್ಯಕ್ರಮಗಳು ನಡೆಸಲಾಗಿದೆ. ಅ. 31ರಂದು ಬಸವ ಕಲ್ಯಾಣದಲ್ಲಿ ರಾಷ್ಟ್ರೀಯ ಬಹುಭಾಷಾ ಕವಿ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಸುಮಾರು 8 ರಾಜ್ಯಗಳಿಂದ ಕವಿಗಳು ಆಗಮಿಸಿ ಕವನ ವಾಚನ ಮಾಡಲಿದ್ದಾರೆ ಎಂದರು.

ಪ್ರೊ| ವಜ್ರಾ ಪಾಟೀಲ, ಶ್ರೀದೇವಿ ಪಾಟೀಲ, ಬಸವರಾಜ ದಯಾಸಾಗರ, ಮಹಾರುದ್ರ ಡಾಕುಳಗೆ, ಸುನಿತಾ ಪಾಟೀಲ, ಓಂಪ್ರಕಾಶ ಧಡ್ಡೆ, ಡಾ| ಜಗದೇವಿ ತಿಬಶೆಟ್ಟಿ, ಶಾಂತಮ್ಮಾ ಬಲ್ಲೂರ, ಸಂತೋಷ ಹಡಪದ, ಡಾ| ಸಾವಿತ್ರಿಬಾಯಿ ಹೆಬ್ಟಾಳೆ, ಉಮೇಶ, ಎಸ್‌.ಬಿ. ಕುಚಬಾಳ, ಎಸ್‌.ಕೆ. ಮರಗುತ್ತಿ, ಶ್ರೀದೇವಿ ಪಾಟೀಲ ಇವರು ಕವನ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಡಾ| ಜಗನ್ನಾಥ ಹೆಬ್ಟಾಳೆ, ಪ್ರೊ| ಎಸ್‌.ಬಿ. ಬಿರಾದಾರ, ಶಿವಶರಣಪ್ಪ ಗಣೇಶಪುರ, ಪ್ರಕಾಶ ಕನ್ನಾಳೆ, ಪ್ರೊ| ಎಸ್‌.ವಿ. ಕಲ್ಮಠ, ಶಿವಕುಮಾರ ಪಾಂಚಾಳ, ಶ್ರೀಧರ, ಉಮೇಶ ಇನ್ನಿತರರಿದ್ದರು.

ಧರಿನಾಡಶ್ರೀ ಪ್ರಶಸ್ತಿ ಪ್ರದಾನ

ಕವಿ ಗೋಷ್ಠಿಯಲ್ಲಿ ಧರಿನಾಡಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಬುರಾವ ವಡ್ಡೆ, ಶಿವಪುತ್ರಪ್ಪ ಪಾಟೀಲ, ಡಾ| ಈಶ್ವರಯ್ಯ ಕೊಡಂಬಲ, ಡಾ| ಗವಿಸಿದ್ದಪ್ಪ ಪಾಟೀಲ, ಶ್ರೀಮತಿ ಸಾರಿಕಾ ಗಂಗಾ, ಸಂಗಮೇಶ ಜವಾದಿ, ವಿಜಯಕುಮಾರ ಪಾಟೀಲ, ಸಂಜೀವಕುಮಾರ ಸ್ವಾಮಿ, ಸಂತೋಷ ಮಂಗಳೂರೆ, ಬಸವರಾಜ ಮೂಲಗೆ, ಪ್ರಕಾಶ ದೇಶಮುಖ, ವಜ್ರಾ ಪಾಟೀಲ, ಡಾ| ಸುನಿತಾ ಕೂಡ್ಲಿಕರ್‌, ಡಾ| ಮಹಾನಂದ ಮಡಕಿ, ಸಂಜಯಕುಮಾರ ಡಾಕುಳಗಿ, ಎಸ್‌.ಬಿ. ಕುಚಬಾಳ, ಮಲ್ಲಮ್ಮ ಸಂತಾಜಿ, ಡಾ| ಜಗದೇವಿ ತಿಬಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next