ಹೂವಿನಹಿಪ್ಪರಗಿ: ಇಂದಿನ ತ್ರಾಂತಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಲು ಪಾಲಕರು ಮುಂದಾಗಬೇಕು ಎಂದು ಭರತಗೌಡ ಪಾಟೀಲ ನಡಹಳ್ಳಿ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಅಂಬಳನೂರ, ಅಂಬಳನೂರ ತಾಂಡಾ, ನರಸಲಗಿ ತಾಂಡಾ, ಹಾಲಿಹಾಳ, ಬ್ಯಾಲ್ಯಾಳ ಕೊಡಗಾನೂರ ಸೇರಿದಂತೆ ದೇವರಹಿಪ್ಪರಗಿ ಮತಕ್ಷೇತ್ರದ ವಿವಿಧ ಗ್ರಾಮಗಳ ಸರಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾದರೆ ಪ್ರತಿಯೊಬ್ಬರು ಶಿಕ್ಷಣವಂತರಾಗಿ ತಮ್ಮ ಮೇಲಿದ್ದ ಸಾಮಾಜಿಕ ಋಣವನ್ನು ತೀರಿಸಬೇಕು. ದೇವರಹಿಪ್ಪರಗಿ ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೆ ತಾಯಿ ಮಕ್ಕಳ ಸಂಬಂಧವಿದೆ. ನಮ್ಮ ತಂದೆ ಎ.ಎಸ್.ಪಾಟೀಲ ನಡಹಳ್ಳಿ ಅವರು ಪ್ರತಿ ದಿನ ಈ ಕ್ಷೇತ್ರದ ಜನ ನೆನೆಯುತ್ತಾರೆ. ಈ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ನಿಮ್ಮ ಋಣ ನಮ್ಮ ತಂದೆ ಹಾಗೂ ಕುಟುಂಬದ ಮೇಲಿದೆ. ಆ ಋಣವನ್ನು ತೀರಿಸಲು ನಾವು ಎಷ್ಟೇ ಸಾಹಾಯ ಮಾಡಿದರೂ ಕಡಿಮೆ. ಕ್ಷೇತ್ರದ ಎಲ್ಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಮುಂದಿನ ದಿನದಲ್ಲಿ ಉಚಿತ ನೋಟ್ ಬುಕ್ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಮುಖಂಡರಾದ ಶೇಖರಗೌಡ ಬಿರಾದಾರ, ಗಣಪತಿ ನಾಯಕ, ಶಾಂತಾಬಾಯಿ ರಾಠೊಡ, ರವಿ ನಾಯಕ, ಪ್ರಕಾಶ ರಾಠೊಡ, ರಮೇಶ ಕನಮಡಿ, ಮೊತಪ್ಪ ಪವಾರ, ಮಲ್ಲು ಕಾರಬಾರಿ, ಅರ್ಜುನ ನಾಕಯ, ನಾಗೇಶ ಲಮಾಣಿ, ಕುಮಾರ ರಾಠೊಡ, ಬಸವರಾಜ ಇಳಗೇರ, ಶ್ರೀಮಂತ ಅಳಗುಂಡಗಿ, ಶರಣು ಚೌದ್ರಿ, ಪರಶುರಾಮ ಚಲವಾದಿ ಇದ್ದರು.