Advertisement

ಸತತ ಅಧ್ಯಯನದಿಂದ ಸಾಧನೆ: ಬಾಬುರಾವ್‌ ಮೇಲಕೇರಿ

06:49 PM Mar 30, 2021 | Team Udayavani |

ಅಫಜಲಪುರ: ವಿದ್ಯಾರ್ಥಿಗಳು ಕಾಟಾಚಾರಕ್ಕೆ ವ್ಯಾಸಂಗ ಮಾಡಬಾರದು. ಸತತ ಅಧ್ಯಯನದಿಂದ ದೊಡ್ಡ ಸಾಧನೆ ಮಾಡಲು ಸಾಧ್ಯವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಬಾಬುರಾವ್‌ ಮೇಲಕೇರಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ, ಉದ್ಯೋಗ ಕೋಶ, ಪುರಸಭೆ ಸಹಯೋಗದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗಾಗಿ ಪುರಸಭೆಯಿಂದ ಒಂದು ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದೇವೆ. ಈ ಅನುದಾನ ಪಡೆಯಲು ಕೆಲ ಮಾನದಂಡಗಳಿದ್ದು ಅವುಗಳಲ್ಲಿ ತೇರ್ಗಡೆಯಾದ ಹತ್ತು ವಿದ್ಯಾರ್ಥಿಗಳಿಗೆ ಧನಸಹಾಯ ನೀಡಿ ಸ್ಪರ್ಧಾತ್ಮಕ ತರಬೇತಿ ನೀಡಲಾಗುತ್ತದೆ ಎಂದರು.

Advertisement

ಸಾಧನಾ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ನಿರ್ದೇಶಕಿ ಜ್ಯೋತಿ ರಾಠೊಡ ಮಾತನಾಡಿ, ಸಂಸ್ಥೆಯಲ್ಲಿ ನುರಿತ ಉಪನ್ಯಾಸಕರಿದ್ದಾರೆ. ಆಧುನಿಕ ತಂತ್ರಜ್ಞಾನಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತೇವೆ. ಯಾವುದೇ ರೀತಿಯ ಪರೀಕ್ಷೆಗಳಿದ್ದರೂ ವಿದ್ಯಾರ್ಥಿಗಳು ಎದುರಿಸಲು ಸಿದ್ಧರಿರುವಂತೆ ತರಬೇತಿ ನೀಡುತ್ತೇವೆ. ಪುರಸಭೆಯಿಂದ ಆಯ್ಕೆಯಾಗುವ 10 ವಿದ್ಯಾರ್ಥಿಗಳಿಗೆ ಸಾಧನಾ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಶುಲ್ಕ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದರು.

ಪ್ರಾಂಶುಪಾಲ ಶರಣಬಸಪ್ಪ ಅವಟೆ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಮಾಡಲು ಇದು ಸಕಾಲ. ಪುರಸಭೆಯವರು ಉತ್ತಮವಾದ ಅವಕಾಶವೊಂದನ್ನು ಸೃಷ್ಟಿಸಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಪಿಎಂಸಿ ಸದಸ್ಯೆ ಪ್ರಭಾವತಿ ಮೇತ್ರೆ, ಉಪನ್ಯಾಸಕರಾದ ಎಂ.ಎಸ್‌ ರಾಜೇಶ್ವರಿ, ಮಲ್ಲಿಕಾರ್ಜುನ ಜಿ., ಡಾ| ಸಂಗಣ್ಣ ಎಂ. ಸಿಂಗೆ, ಗೌರಿಶಂಕರ ಬುರೆ, ಮಡಿವಾಳಪ್ಪ ಮುಗಳಿ, ಪದ್ಮಾವತಿ ಹಾಗೂ ವಿದ್ಯಾರ್ಥಿಗಳು ಇದ್ದರು. ಡಾ| ಸೂಗೂರೇಶ್ವರ ಆರ್‌.ಎಂ ಸ್ವಾಗತಿಸಿದರು, ಖುತೇಜಾ ನಸ್ರಿನ್‌ ನಿರೂಪಿಸಿದರು, ಡಾ| ಸಾವಿತ್ರಿ ಕೆ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next