Advertisement

ಸ್ಪಷ್ಟ ಗುರಿಯಿಂದ ಸಾಧನೆ: ಹೆಬಸೂರ

04:21 PM Sep 10, 2018 | Team Udayavani |

ಮುಧೋಳ: ಸ್ಪಷ್ಟ ಗುರಿ ಇದ್ದರೆ ಎಂತಹ ಕಷ್ಟದ ಕೆಲಸವನ್ನಾದರೂ ಸುಲಭವಾಗಿ ಸಾಧಿಸಬಹುದು ಎಂದು ರತ್ನಾ ಸಿಮೆಂಟ್ಸ್‌ನ ಜನರಲ್‌ ಮ್ಯಾನೇಜರ್‌ ಸುಜಯ ಹೆಬಸೂರ ತಿಳಿಸಿದರು.

Advertisement

ರತ್ನಾ ಸಿಮೆಂಟ್‌ ಕಾರ್ಖಾನೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿಯವರ 53ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುರುಗೇಶ ನಿರಾಣಿಯವರು 15 ವರ್ಷಗಳ ಹಿಂದೆ ಇಟ್ಟುಕೊಂಡಿದ್ದ ಸ್ಪಷ್ಟ ಗುರಿ ಹಾಗೂ ಕನಸು ಇಂದು ಸಫಲವಾಗುತ್ತಿದೆ. ಕೇವಲ ಕಾಂಡಸರಿ ಸಕ್ಕರೆ ಕಾರ್ಖಾನೆ ಆರಂಭಿಸುವುದರ ಮೂಲಕ ಉದ್ಯಮ ಕ್ಷೇತ್ರಕ್ಕೆ ಬಂದ ಅವರು ಇಂದು 20 ಸಾವಿರ ಟಿಸಿಡಿ ಕಬ್ಬು ನುರಿಸುವ ಸಾಮರ್ಥ್ಯದ ಕಾರ್ಖಾನೆ ಕಟ್ಟಿ ಬೆಳೆಸಿದ್ದಾರೆ. ಏಷ್ಯಾ ಖಂಡದಲ್ಲಿಯೇ ನಿರಾಣಿ ಸಕ್ಕರೆ ಉದ್ಯಮ ಮಿಂಚುವಂತೆ ಮಾಡುವುದರೊಂದಿಗೆ ಸಕ್ಕರೆ ಉದ್ಯಮದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಕೇವಲ ಉದ್ಯಮ ಕ್ಷೇತ್ರವಲ್ಲದೆ ಜನರಿಗೆ ಉತ್ತಮ ಶಿಕ್ಷಣ ಸಿಗಲಿ ಎಂಬ ದೃಷ್ಟಿಯಿಂದ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದಾರೆ. ಆರೋಗ್ಯ ಕ್ಷೇತ್ರ ಹೀಗೆ ಹತ್ತು ಹಲವು ಜನಪರ ಕೆಲಸ ಮಾಡುತ್ತಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾರ್ಕೆಟಿಂಗ್‌ ವಿಭಾಗದ ಮ್ಯಾನೇಜರ್‌ ಮೋಹನ ಕೊಂಡ್ಲೆ ಮಾತನಾಡಿ, ನಿರಾಣಿ ಕೇವಲ ಒಬ್ಬ ವ್ಯಕ್ತಿಯಾಗಿ ಬೆಳೆಯಲಿಲ್ಲ, ನಾಡಿನ ಹಾಗೂ ಸಮಸ್ತ ಕಾರ್ಮಿಕರ ಶಕ್ತಿಯಾಗಿ ಬೆಳೆದರು. ಸಕ್ಕರೆ ಹಾಗೂ ಸಿಮೆಂಟ್‌ ಉದ್ಯಮ ಆರಂಭಿಸಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದರ ಮೂಲಕ ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಜೋಡಿಸಿದ್ದಾರೆ ಎಂದರು.

ಶ್ರೀಕಾಂತ ಗೋಡಿ, ವೈ.ಕೆ. ಕಡಕೋಳ, ಎ.ವಿ. ಬಾಸೂತಕರ್‌, ಹಣಮಂತ ಕವಣಿ, ಸಿ.ಬಿ. ಮೂಡಲಗಿ, ಗಿರೀಶ ದೇಶಪಾಂಡೆ, ಆರ್‌.ಬಿ. ಕುಲಕರ್ಣಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಪ್ರಭು ಉಳ್ಳಾಗಡ್ಡಿ ಸ್ವಾಗತಿಸಿದರು. ಆರ್‌.ಎನ್‌. ಜೋಶಿ ನಿರೂಪಿಸಿದರು, ಹಣಮಂತ ಕವಣಿ ವಂದಿಸಿದರು. ಮುರುಗೇಶ ನಿರಾಣಿಯವರ ಜನ್ಮದಿನದ ನಿಮಿತ್ತ ಯಾದವಾಡದ ಮಂದಿರಗಳಲ್ಲಿ ಅಭಿಷೇಕ, ವಿಶೇಷ ಪೂಜೆ ಮಾಡಿಸಲಾಯಿತು.  ಸಿಹಿ ಹಂಚಿ ಸಂಭ್ರಮಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next