Advertisement

ಓದು-ಹೊಸ ಆಲೋಚನೆಯಿಂದ ಸಾಧನೆ 

04:27 PM Jun 30, 2018 | Team Udayavani |

ಧಾರವಾಡ: ಯಾವುದೇ ಕ್ಷೇತ್ರದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಮೂಲಕ ಹೊಸ ಆಲೋಚನೆ ಮೈಗೂಡಿಸಿಕೊಳ್ಳದೆ ಹೋದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಧಾರವಾಡ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ| ಕವಿ ಮಹೇಶ ಹೇಳಿದರು. ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 8ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

Advertisement

ಕಷ್ಟಪಟ್ಟು ಓದಿ ಪಡೆದ ಪದವಿಗಳು ಹೊಸ ವೃತ್ತಿ ಜೀವನಕ್ಕೆ ಸದಾ ಉತ್ತಮ ಮುನ್ನಡೆಯನ್ನೇ ನೀಡುತ್ತವೆ. ಅದರಲ್ಲೂ ಜ್ಞಾನ ಕೌಶಲ ಹೊಂದಿರುವ ಎಂಜಿನಿಯರ್‌ ಪದವಿ ಪಡೆದವರು ಉತ್ತಮ ಎಂಜಿನಿಯರ್‌ ಆಗಿ ರೂಪುಗೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರ ಕುಮಾರ ಮಾತನಾಡಿ, ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್‌. ಈ ನಿಟ್ಟಿನಲ್ಲಿ ಕಲಿಸಿದ ಸಂಸ್ಥೆಗೆ ಹೆಸರು ಹೆಚ್ಚಿಸುವುದರ ಜೊತೆಗೆ ಪರಿಸರ ಮತ್ತು ಸಮಾಜದ ಮೇಲೆ ಹೆಚ್ಚು ಗೌರವ ಇಟ್ಟುಕೊಂಡು ಬೆಳೆಯಬೇಕು ಎಂದು ಹೇಳಿದರು.

ಮಹಾವಿದ್ಯಾಲಯಕ್ಕೆ ಅತೀ ಹೆಚ್ಚು ಅಂಕ ಪಡೆದ ಕೆಮಿಕಲ್‌ ಎಂಜಿನಿಯರಿಂಗ್‌ ವಿಭಾಗದ ಅನುಷಾ ಭಟ್‌ (ಸಿಜಿಪಿಎ 9.69) ಅವರಿಗೆ ಡಾ|ಡಿ. ವೀರೇಂದ್ರ ಹೆಗ್ಗಡೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಕಾಲೇಜಿನ ಒಟ್ಟು 559 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪ್ರಾಚಾರ್ಯ ಡಾ| ಎಸ್‌.ಬಿ. ವಣಕುದುರೆ ವಾರ್ಷಿಕ ವರದಿ ಮಂಡಿಸಿದರು. ಡೀನ್‌ಗಳು, ಏಳು ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿ ಪೋಷಕರು ಇದ್ದರು. ರಕ್ಷಿತ ಹೆಬ್ಟಾರ ಪ್ರಾರ್ಥಿಸಿದರು. ಪ್ರೊ| ವಾಸುದೇವ ಪರ್ವತಿ ನಿರೂಪಿಸಿದರು. ಡಾ| ಆರ್‌.ಎಲ್‌. ಚಕ್ರಸಾಲಿ ವಿಭಾಗಗಳ ಬಗ್ಗೆ ಮಾಹಿತಿ ನೀಡಿದರು. ಇಂದಿರಾ ಉಮರ್ಜಿ ಪರಿಚಯಿಸಿದರು. ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ| ಕೆ.ಗೋಪಿನಾಥ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next