Advertisement

SMVITM; ಇಸ್ರೋ ವಿಜ್ಞಾನಿಗಳಂತೆ ಸಾಧನೆ ಮಾಡಿ: ಕಾಣಿಯೂರು ಶ್ರೀ

05:43 PM Aug 26, 2023 | Team Udayavani |

ಶಿರ್ವ: ವಿದ್ಯಾರ್ಥಿಗಳು ಜೀವನದಲ್ಲಿ ಸಾಮಾನ್ಯ ಜ್ಞಾನದೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ವಿದ್ಯಾವಂತರಾಗಿ ಅಂತ್ಯವಿಲ್ಲದ ಜ್ಞಾನವನ್ನು ಪಡೆದು ಕೊಳ್ಳಬೇಕಾಗಿದೆ. ಸದ್ಗುಣವಂತ ಪದವೀಧರರು ಸಮಾಜದ ನಿಜವಾದ ಆಸ್ತಿಯಾಗಿದ್ದು, ಸಂಸ್ಥೆಯ ಪದವೀಧರರು ಚಂದ್ರಯಾನ-3ರ ಇಸ್ರೋದ ವಿಜ್ಞಾನಿಗಳಂತೆ ಆವಿಷ್ಕಾರ ಹಾಗೂ ಸಾಧನೆಗಳನ್ನು ಮಾಡಿ ಎಂದು ಉಡುಪಿ ಕಾಣಿಯೂರು ಮಠದ ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸಾಮೀಜಿ ಹೇಳಿದರು.

Advertisement

ಅವರು ಆ. 26 ರಂದು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ 10ನೇ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಪದವಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿ ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ| ಗೋಪಾಲ್‌ ಮುಗೆರಾಯ ವಿಶೇಷ ಉಪನ್ಯಾಸ ನೀಡಿ ಜೀವನವು ಶಾಲೆಗಳಿಗಿಂತ ಹೆಚ್ಚಿನ ಪಾಠಗಳನ್ನು ಕಲಿಸುತ್ತದೆ. ಜೀವನದುದ್ದಕ್ಕೂ ಕಲಿಯುವಿಕೆಯಲ್ಲಿ ನಿರಂತರಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೀರ್ತಿಗಳಿಸಲು ಪದವೀಧರರಿಗೆ ಕರೆ ನೀಡಿದರು.

ಇದನ್ನೂ ಓದಿ:ODI World Cupಗೆ 15 ಸದಸ್ಯರ ತಂಡ ಆಯ್ಕೆ ಮಾಡಿದ ಗಂಗೂಲಿ; ಇಬ್ಬರು ಸ್ಟಾರ್ ಗಳಿಗಿಲ್ಲ ಚಾನ್ಸ್

ಮಂಗಳೂರಿನ ಕಂಬಳ ಸೊಲ್ಯೂಷನ್ಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸೋಮನಾಥ ಜೋಗಿ ಮಾತನಾಡಿ ಪದವೀಧರರು ಉತ್ಸಾಹದಿಂದ ಯಶಸ್ವಿ ಜೀವನವನ್ನು ನಡೆಸಬೇಕಾಗಿದ್ದು, ಕಠಿಣ ಪರಿಶ್ರಮವೊಂದೇ ಯಶಸ್ಸಿನ ಹಾದಿ ಎಂದು ಹೇಳಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಲೊಲಿಟಾ ಪ್ರಿಯಾ ಕ್ಯಾಸ್ತೆಲಿನೊ ಮತ್ತು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಸುಬ್ಬುಲಕ್ಷ್ಮೀ ಎನ್‌. ಕಾರಂತ್‌ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕ ಸುಧೀರ್‌ ಭಟ್‌ ಸ್ವಾಮೀಜಿಯವರನ್ನು ಪರಿಚಯಿಸಿದರು.

Advertisement

ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಾದ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಅನ್ವಿತಾ, ಗಣಕಯಂತ್ರ ವಿಭಾಗದ ವೈಷ್ಣವಿ .ಡಿ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಕ್ಷತಾ ಅನಿಲ್‌ ಕುಮಾರ್‌ ರೆಂಜಾಲ್‌ ಮತ್ತು ಮೆಕ್ಯಾನಿಕಲ್‌ ವಿಭಾಗದ ರತನ್‌ ಪಾಟ್ಕರ್‌ ಅವರಿಗೆ ಮಂಗಳೂರಿನ ಎಸ್‌.ಎಲ್‌.ಶೇಟ್‌ ಜುವೆಲರ್ನ ಪ್ರಶಾಂತ್‌ ಶೇಟ್‌ ಪ್ರಾಯೋಜಿತ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್‌ ಶುಭ ಹಾರೈಸಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿದ್ದರು.

ಉಪಪ್ರಾಂಶುಪಾಲ ಡಾ| ಗಣೇಶ್‌ ಐತಾಳ್‌ ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ಡೀನ್‌ ಡಾ| ಸುದರ್ಶನ್‌ ರಾವ್‌ಚಿನ್ನದ ಪದಕ ಗಳಿಸಿದವರ ಹೆಸರು ಮತ್ತು ವಿಭಾಗ ಮುಖ್ಯಸ್ಥರು ಪದವೀಧರರ ಪಟ್ಟಿ ವಾಚಿಸಿದರು. ಪ್ರಾಂಶುಪಾಲ ಡಾ|ತಿರುಮಲೇಶ್ವರ ಭಟ್‌ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಲಹರಿ ವೈದ್ಯ ಮತ್ತು ಪೂಜಾಶ್ರೀ ನಿರೂಪಿಸಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|ರವೀಂದ್ರ ಹೆಚ್‌. ಜೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next