Advertisement
ಕಳೆದ 20 ವರ್ಷಗಳಿಂದಲೂ ಉನ್ನತ ಮಟ್ಟದ ಪ್ರದರ್ಶನ ನೀಡುತ್ತಲೇ ಇರುವ ಅಚಂತ ಶರತ್ ಕಮಲ್, ತಮ್ಮ ಕ್ರೀಡಾ ಬದುಕಿನಲ್ಲಿ ಇನ್ನೂ ಒಲಿಂಪಿಕ್ಸ್ ಪದಕ ಗೆದ್ದಿಲ್ಲ. ಈಗಿನ ಬರ್ಮಿಂಗ್‌ಹ್ಯಾಮ್ ಗೇಮ್ಸ್ ಸಾಧನೆ ಕಂಡಾಗ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ಬಾಗಿಲು ತೆರೆದೀತು ಎಂಬುದು ಅವರ ನಂಬಿಕೆ.
“ಇದೊಂದು ಹಂತ ಹಂತದ ಪ್ರಕ್ರಿಯೆ. ಮೊದಲು ನಾವು ಕಾಮನ್ವೆಲ್ತ್ ಗೇಮ್ಸ್ ಹಂತ ತಲುಪಿದೆವು. ಮುಂದಿನದು ಏಷ್ಯಾಡ್. ಅನಂತರವೇ ಒಲಿಂಪಿಕ್ಸ್ ಸರದಿ. ಗೇಮ್ಸ್ ಚಿನ್ನಕ್ಕಾಗಿ ನಾನು 16 ವರ್ಷ ಕಾದೆ. 2006ರ ಬಳಿಕ ಇದು ಒಲಿದದ್ದು ಮೊನ್ನೆಯಷ್ಟೆ. 2006ರಲ್ಲಿ ನಾನು ಚಿಕ್ಕವ. ರ್‍ಯಾಂಕಿಂಗ್ 130ರಷ್ಟು ಕೆಳ ಮಟ್ಟದಲ್ಲಿತ್ತು. ನನ್ನ ಮೇಲೆ ಯಾವುದೇ ನಿರೀಕ್ಷೆ ಇರಲಿಲ್ಲ. ಈ ಬಾರಿ ನಿರೀಕ್ಷೆ ವಿಪರೀತವಾಗಿತ್ತು. ದೇಶದಲ್ಲಿ ಟಿಟಿ ಜನಪ್ರಿಯತೆ ಹೆಚ್ಚುತ್ತಿದೆ. ಯುವ ಜನಾಂಗದ ಮೇಲೆ ನಮ್ಮ ಸಾಧನೆ ಖಂಡಿತವಾಗಿಯೂ ಪ್ರಭಾವ ಬೀರಿದೆ’ ಎಂದು ಸಂತಸ ವ್ಯಕ್ತಪಡಿಸಿದರು ಅಚಂತ ಶರತ್ ಕಮಲ್.
Related Articles
Advertisement